ಫೋನ್ ನೀರಿಗೆ ಬಿದ್ದಾಗ ಈ ತಪ್ಪು ಮಾಡಿದ್ರೆ ಗೋವಿಂದ.. ಫಸ್ಟ್ ಏನು ಮಾಡಬೇಕು ಗೊತ್ತಾ?

author-image
Ganesh
Updated On
ಫೋನ್ ನೀರಿಗೆ ಬಿದ್ದಾಗ ಈ ತಪ್ಪು ಮಾಡಿದ್ರೆ ಗೋವಿಂದ.. ಫಸ್ಟ್ ಏನು ಮಾಡಬೇಕು ಗೊತ್ತಾ?
Advertisment
  • ಫೋನ್ ನೀರಿಗೆ ಬೀಳೋದು ಸಹಜ, ಗಾಬರಿ ಆಗುವ ಅಗತ್ಯ ಇಲ್ಲ
  • ಅಕ್ಕಿ ಚೀಲದೊಳಗೆ ಫೋನ್ ಇಟ್ಟರೆ ಖಂಡಿತ ಲಾಭ ಇದೆ
  • ಫೋನ್ ನೀರಿಗೆ ಬಿದ್ದಾಗ ಮೊದಲು ಮಾಡಬೇಕಾಗಿದ್ದು ಏನು?

ಸ್ಮಾರ್ಟ್​ ಫೋನ್​ಗಳನ್ನು ನೀರಿನಿಂದ ದೂರ ಇಡಲು ಪ್ರಯತ್ನಿಸುತ್ತಿರಿ. ಆದರೂ ಕೆಲವೊಮ್ಮೆ ಆಕಸ್ಮಿಕವಾಗಿ ಫೋನ್ ಮೇಲೆ ನೀರು ಬಿದ್ದು ಒದ್ದೆ ಆಗುತ್ತದೆ. ಆಗ ಒಂದು ಕ್ಷಣ ಗಾಬರಿಗೆ ಒಳಗಾಗ್ತೀರಿ. ಇದು ಸಹಜ! ನಿಮ್ಮ ಫೋನು ನೀರಿಗೆ ಬಿದ್ದರೆ ಅಥವಾ ನೀರೇ ನಿಮ್ಮ ಫೋನಿನ​ ಮೇಲೆ ಬಿದ್ದರೆ ಏನು ಮಾಡಬೇಕು ಅನ್ನೋ ವಿವರ ಇಲ್ಲಿದೆ.

ಮಳೆ ಬಂದಾಗ, ಸ್ವಿಮ್ಮಿಂಗ್ ಮಾಡ್ತಿರುವಾಗ, ವಾಟರ್ ಗೇಮ್ ಆಡುವಾಗ, ಕೈ ತೊಳೆಯುವಾಗ, ಪಾತ್ರೆ ತೊಳೆಯುವಾಗ, ಫೋಟೋ ಕ್ಲಿಕ್ಕಿಸುವಾಗ ಸೇರಿಂತೆ ಹಲವು ಸಂದರ್ಭಗಳಲ್ಲಿ ಫೋನ್ ನೀರಿಗೆ ಬೀಳಬಹುದು. ಇದರಿಂದ ನೀವು ಗಾಬರಿ ಆಗುವ ಅಗತ್ಯ ಇಲ್ಲ.

ನೀರಿಗೆ ಬಿದ್ದಾಗ ಏನು ಮಾಡಬೇಕು..?

  • ನೀರಿಗೆ ಬಿದ್ದು ಒದ್ದೆಯಾಗಿರುವ ಫೋನ್ ನಿಮ್ಮ ಕೈಗೆ ಸಿಗುತ್ತಿದ್ದಂತೆಯೇ ಆಫ್ ಮಾಡಿ. ಹೀಗೆ ಮಾಡುವುದರಿಂದ ಶಾರ್ಟ್​ ಸರ್ಕ್ಯೂಟ್ ಆಗಲ್ಲ.
  • ಫೋನ್ ಆಫ್ ಮಾಡಿದ ಮೇಲೆ ಸಿಮ್ ಕಾರ್ಡ್​, ಮೆಮೋರಿ ಕಾರ್ಡ್ ಕೂಡಲೇ ರಿಮೋವ್ ಮಾಡಿ. ನೀರಿನಿಂದ ಆಗುವ ಅನಾಹುತವನ್ನು ಇದು ತಪ್ಪಿಸುತ್ತದೆ.
  • ಕೊನೆಗೆ ನಿಮ್ಮ ಫೋನ್ ಒಣಗಿಸಲು ಪ್ರಯತ್ನಿಸಿ. ಬಿಸಿಲು ಅಥವಾ ಫ್ಯಾನ್ ಅಡಿಯಲ್ಲೂ ಇಡಬಹುದು.
  • ಅಕ್ಕಿ ಚೀಲದಲ್ಲಿ ಫೋನ್ ಇಡುವುದು ಹೆಚ್ಚು ಸೂಕ್ತ. ಅಕ್ಕಿಯ ತೇವಾಂಶ ನೀರಿನ್ನು ಬೇಗ ಹೀರಿ ಕೊಳ್ಳುತ್ತದೆ.

ಇಷ್ಟೆಲ್ಲ ಮಾಡಿಯೂ ನಿಮ್ಮ ಫೋನ್ ಸರಿ ಹೋಗಿಲ್ಲ ಅಂದರೆ ನೀವು ಸ್ಮಾರ್ಟ್​ ಫೋನ್ ಸೇವಾ ಕೇಂದ್ರಕ್ಕೆ ಹೋಗಿ ಸರಿ ಮಾಡಿಸಬಹುದು. ಆದರೆ, ನೀರಿಗೆ ಬಿದ್ದ ಮೇಲೆ ಆಫ್ ಮಾಡಿ, ನೀರಿನಂಶ ತೆಗೆಯದೇ ನೀವು ಬಳಸಿದರೆ ತುಂಬಾನೇ ಅಪಾಯ. ಯಾವುದೇ ಕಾರಣಕ್ಕೂ ಆಫ್ ಮಾಡಿ, ನೀರು ಹೊರ ತೆಗೆಯೋದನ್ನು ನಿರ್ಲಕ್ಷ್ಯ ಮಾಡದಿರಿ. ಇದರಿಂದ ನಿಮ್ಮ ಫೋನ್ ಕೂಡ ಸೇಫ್ ಆಗಿರುತ್ತೆ. ನೀವು ಕೂಡ ಶಾರ್ಟ್​ ಸರ್ಕ್ಯೂಟ್, ಬ್ಲಾಸ್ಟ್​ನಂತ ಪ್ರಕರಣಗಳಿಂದ ದೂರ ಇರ್ತೀರಿ.

ಇದನ್ನೂ ಓದಿ: 9 ತಿಂಗಳ ಬಳಿಕ ಭೂಮಿಗೆ ಬರ್ತಿದ್ದಂತೆ ಏನೆಲ್ಲ ಸಂಭವಿಸ್ತದೆ.. NASA ರೆಸ್ಕ್ಯೂ ಆಪರೇಷನ್ ಹೇಗಿರುತ್ತೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment