10 ನಿಮಿಷದಲ್ಲಿ ನಾಲಿಗೆಗೆ ಒಳ್ಳೆ ರುಚಿ ಕೊಡುವ ಮಾವಿನಕಾಯಿ ಚಟ್ನಿ ಮಾಡೋದು ಹೇಗೆ? ಇಲ್ಲಿದೆ ಸುಲಭ ವಿಧಾನ!

author-image
Veena Gangani
Updated On
10 ನಿಮಿಷದಲ್ಲಿ ನಾಲಿಗೆಗೆ ಒಳ್ಳೆ ರುಚಿ ಕೊಡುವ ಮಾವಿನಕಾಯಿ ಚಟ್ನಿ ಮಾಡೋದು ಹೇಗೆ? ಇಲ್ಲಿದೆ ಸುಲಭ ವಿಧಾನ!
Advertisment
  • ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ಇಷ್ಟ ಆಗುತ್ತೆ ಈ ಚಟ್ನಿ
  • ಸಿಪ್ಪೆ ಜೊತೆಗೆ ಮಾವಿನಕಾಯಿ ಚಟ್ನಿ ಹೀಗೆ ಮಾಡಿ ನೋಡಿ
  • ಮಾವಿನಕಾಯಿ ಚಟ್ನಿ ಮಾಡುವ ಸುಲಭ ವಿಧಾನ ಇಲ್ಲಿದೆ

ಅಬ್ಬಾ.. ಮಾವಿನಕಾಯಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಮಾವಿನಕಾಯಿಯನ್ನು ತಿನ್ನುತ್ತಾರೆ. ಅದರಲ್ಲೂ ಹಳ್ಳಿ ಕಡೆಗಳಲ್ಲಿ ಜನರು ಮಾವಿನಕಾಯಿಯನ್ನು ತಮ್ಮ ತಮ್ಮ ತೋಟದಲ್ಲೇ ಬೆಳೆಯುತ್ತಾರೆ.

ಇದನ್ನೂ ಓದಿ:ನಿಮಗಿದು ಗೊತ್ತೇ.. ಮಾವಿನ ಹಣ್ಣು ತಿನ್ನುವುದರಿಂದ ದೇಹದಲ್ಲಿ ಈ 3 ಸಮಸ್ಯೆ ಮಂಗಮಾಯ!

publive-image

ಇನ್ನೂ, ಮಾವಿನಕಾಯಿ ನಮ್ಮ ಬಾಯಿಗೆ ಒಳ್ಳೆಯ ರುಚಿ ಕೊಡುತ್ತದೆ. ಸೀಸನ್​ ಇದ್ದಾಗಲೇ ಮಾವಿನಕಾಯಿ ಹಾಗೂ ಮಾವಿನ ಹಣ್ಣನ್ನು ತಿನ್ನಬೇಕು. ಸೀಸನ್​ ಇದ್ದಾಗಲೇ ಈ ಮಾವಿನಕಾಯಿಯಿಂದ ಏನೆಲ್ಲಾ ಮಾಡೋದಕ್ಕೆ ಸಾಧ್ಯವೋ ಅದನ್ನೇಲ್ಲಾ ಮಾಡಿ ಮನೆಯಲ್ಲಿ ತಿನ್ನಬೇಕು. ಹೀಗೆ ಈ ಮಾವಿನ ಹಣ್ಣಿನಿಂದ, ಜ್ಯೂಸ್​, ಶೀಕರಣಿ, ಹಸಿ ಗೊಜ್ಜು, ರಸಂ, ಸಾರು, ಮಿಲ್ಕ್ ಶೇಕ್, ಚಟ್ನಿ ಹೀಗೆ ಭಿನ್ನ ವಿಭಿನ್ನವಾಗಿ ರೆಸಿಪಿಗಳನ್ನು ಮಾಡಿಕೊಳ್ಳಬಹುದು. ಆದ್ರೆ ನಾಲಿಗೆಗೆ ಒಳ್ಳೆ ರುಚಿ ಕೊಡುವ ಮಾವಿನಕಾಯಿ ಚಟ್ನಿಯನ್ನು ಒಮ್ಮೆ ಮಾಡಿ ತಿಂದರೆ ಅದರಲ್ಲಿರೋ ಮಜಾನೇ ಬೇರೆಯಾಗಿರುತ್ತದೆ.

publive-image

ಮಾವಿನಕಾಯಿ ಚಟ್ನಿ ಮಾಡುವುದಕ್ಕೆ ಬೇಕಾಗಿರೋ ಸಾಮಾಗ್ರಿಗಳೇನು?

ಮಧ್ಯಮ ಗಾತ್ರದ ತೋತಾಪುರಿ ಮಾವಿನಕಾಯಿ -1

ಗುಂಟೂರು ಮೆಣಸಿನಕಾಯಿ 5

ಜೀರಿಗೆ - ಅರ್ಧ ಟೀಸ್ಪೂನ್

ಬೆಳ್ಳುಳ್ಳಿ - 5

ಹಸಿ ತೆಂಗಿನ ತುರಿ-1 ಕಪ್​

ಒಂದಿಷ್ಟು ಕರಿಬೇವು

publive-image

ಮಾವಿನಕಾಯಿ ಚಟ್ನಿ ಮಾಡುವ ವಿಧಾನ..

ಒಂದು ಬಾಣಲೆಗೆ ಎಣ್ಣೆ ಹಾಕಿ. ಇದಾದ ಬಳಿಕ 5 ಗುಂಟೂರು ಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ನಂತರ ಬೆಳ್ಳುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿ ತಣ್ಣಗಾಗುವವರೆಗೆ ಹಾಗೇ ಬಿಡಿ. ನಂತರ ಮಿಕ್ಸಿ ಜಾರಿಗೆ 1 ಕಪ್​ ಹಸಿ ತೆಂಗಿನ ತುರಿ ಜೊತೆಗೆ ಫ್ರೈ ಮಾಡಿ ಇಟ್ಟುಕೊಂಡಿರೋದನ್ನು ಹಾಕಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿಕೊಳ್ಳಿ. ಇನ್ನೊಂದು ಕಡೆ ಮಧ್ಯಮ ಗಾತ್ರದಲ್ಲಿರಬೇಕು ಮಾವಿನಕಾಯಿ ಕಟ್​ ಮಾಡಿಕೊಂಡು ಇಡಬೇಕು.

publive-image

ಈ ಚಟ್ನಿ ಮಾಡಲು ಮಾವಿನ ಸಿಪ್ಪೆ ತೆಗೆಯುವ ಅಗತ್ಯವಿಲ್ಲ. ನಿಮಗೆ ಸಿಪ್ಪೆ ಬೇಡವಾದರೆ, ನೀವು ಅದನ್ನು ತೆಗೆದು ಹಾಕಬಹುದು. ಮತ್ತೆ ಮಿಕ್ಸ್​ ಮಾಡಿಕೊಂಡಿರೋ ಮಿಶ್ರಣಕ್ಕೆ ಕಟ್​ ಮಾಡಿಕೊಂಡಿರೋ ಮಾವಿನಕಾಯಿ ಹಾಕಿ ಹಾಗೂ ಸ್ವಲ್ಪ ನೀರು ಬೆರೆಸಿ ರಫ್​ ಆಗಿ ರುಬ್ಬಿಕೊಳ್ಳಿ. ಇದಾದ ಬಳಿಕ ಮತ್ತೊಂದು ಬಾಣಲೆಯಲ್ಲಿ ಮೆಂತ್ಯ, ಉದ್ದಿನ ಬೇಳೆ, ಕಡೆಲೆಬೆಳೆ, ಸಾಸಿವೆ, ಕರಿಬೇವು, ಗುಂಟೂರು ಮೆಣಸಿನಕಾಯಿ ಹಾಕಿ ಎಣ್ಣೆಯಲ್ಲೇ ಫ್ರೈ ಮಾಡಿ ರುಬ್ಬಿದ ಮಿಶ್ರಣದ ಮೇಲೆ ಹಾಕಿದರೇ ಮುಗಿತು. ಆಗ ರುಚಿಕರವಾದ ಮಾವಿನಕಾಯಿ ಚಟ್ನಿ ಸವಿಯಲು ಸಿದ್ಧವಾಗುತ್ತದೆ. ಈ ಮಾವಿನಕಾಯಿ ಚಟ್ನಿ, ಜೋಳದ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ರಾಗಿ ರೊಟ್ಟಿ, ಬಿಸಿ ಬಿಸಿ ಅನ್ನದ ಜೊತೆಗೆ ತುಪ್ಪದ ಜತೆ ತಿಂದರೆ ನಾಲಿಗೆಗೆ ಸಖತ್ ಟೆಸ್ಟ್​ ಕೊಡುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment