/newsfirstlive-kannada/media/post_attachments/wp-content/uploads/2025/02/shivaratri.jpg)
ಇಂದು ಮಹಾ ಶಿವರಾತ್ರಿ.. ರಾಜ್ಯದ ಎಲ್ಲಾ ಶಿವನ ದೇವಾಲಯಗಳಲ್ಲಿ ಮಹಾಶಿವರಾತ್ರಿಯ ಪೂಜೆಗಳು ಆರಂಭಗೊಳ್ಳುತ್ತಿವೆ. ಅದರಲ್ಲೂ ಸಾಕಷ್ಟು ಮಂದಿ ಇಂದು ಶಿವನ ಧ್ಯಾನ, ಭಜನೆ, ಪಾದಯಾತ್ರೆಗಳನ್ನು ಮಾಡಲು ಮುಂದಾಗಿದ್ದಾರೆ. ಇನ್ನೂ, ಮಹಿಳೆಯರು ಶಿವರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಸಿಹಿಯಾದ ತಂಬಿಟ್ಟು ಮಾಡಿ ಶಿವನಿಗೆ ಅರ್ಪಿಸುತ್ತಾರೆ.
ಇದನ್ನೂ ಓದಿ:ಯದುವೀರ್ 2ನೇ ಪುತ್ರನ ನಾಮಕಾರಣ; ಯುಗಾಧ್ಯಕ್ಷ ಕೃಷ್ಣದತ್ತ ಚಾಮರಾಜ ಒಡೆಯರ್ ಫೋಟೋ ಇಲ್ಲಿವೆ!
ಅದರಲ್ಲೂ ಈ ಸಿಹಿ ತಿಂಡಿ ಶಿವನಿಗೆ ಅತ್ಯಂತ ಪ್ರಿಯವಾದ ಆಹಾರ ಎನ್ನಲಾಗಿದೆ. ಹೀಗಾಗಿ ಶಿವನಿಗೆ ಆರತಿ ಮಾಡುವ ಸಮಯದಲ್ಲಿ ನೈವೇದ್ಯ ತಂಬಿಟ್ಟು ಇಟ್ಟ ಬಳಿಕ ಅದನ್ನು ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಹಾಗಾದರೇ ಶಿವನಿಗೆ ಇಷ್ಟವಾದ ತಂಬಿಟ್ಟು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.
ತಂಬಿಟ್ಟು ಮಾಡಲು ಬೇಕಾಗುವ ಪದಾರ್ಥಗಳೇನು?
- ಬೆಲ್ಲ
- ಎಳ್ಳು
- ಏಲಕ್ಕಿಪುಡಿ
- ಶೇಂಗಾ
- ಒಣ ತೆಂಗಿನಕಾಯಿ ತುರಿ
- ಪುಟಾಣಿ
ಮಾಡುವ ವಿಧಾನ ಇಲ್ಲಿದೆ..
ಮೊದಲಿಗೆ ಶೇಂಗಾ, ಪುಟಾಣಿ ಹಾಗೂ ಏಳ್ಳನ್ನು ಸಣ್ಣ ಉರಿಯಲ್ಲಿ ಚನ್ನಾಗಿ ಹುರಿದುಕೊಳ್ಳಿ. ಇದಾದ ಬಳಿಕ ಒಂದು ಮಿಕ್ಸಿ ಜಾರಿಗೆ ಪುಟಾಣಿ, ಏಲಕ್ಕಿ ಹಾಕಿ ರುಬ್ಬಿಕೊಳ್ಳಿ. ಇದಾದ ನಂತರ ಶೇಂಗಾವನ್ನು ಮತ್ತೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣ ಮಾಡಿಕೊಂಡ ಶೇಂಗಾ, ಪುಟಾಣಿ ಹಾಗೂ ಏಲಕ್ಕಿಯಲ್ಲಿ ಏಳ್ಳು ಮತ್ತು ಕೊಬ್ಬರಿ ಪುಡಿಯನ್ನು ಮಿಕ್ಸ್ ಮಾಡಿಕೊಳ್ಳಿ.
ಮತ್ತೊಂದು ಕಡೆ ಬಾಣಲೆಯಲ್ಲಿ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ. ಬೆಲ್ಲವು ಕರಗುವಂತೆ ಚೆನ್ನಾಗಿ ಬೆರೆಸಿಕೊಳ್ಳಿ. ಬಾಣಲೆಗೆ ಈಗಾಗಲೇ ಮಿಕ್ಸ್ ಮಾಡಿಕೊಂಡು ಇಟ್ಟಿರೋ ಹುರಿಗಡಲೆಯ ಮಿಶ್ರಣದಲ್ಲಿ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಆಗ ಸ್ವಲ್ಪ ಬಿಸಿಯಿರುವಾಗಲೇ ಉಂಡೆಗಳನ್ನು ಕಟ್ಟಿಕೊಳ್ಳಿ. ಈಗ ಹುರಿಗಡಲೆ ತಂಬಿಟ್ಟು ಉಂಡೆ ಸವಿಯಲು ರೆಡಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ