ಪ್ರಾಮಿಸ್ ಡೇ ದಿನ ನಿಮ್ಮನ್ನು ನೀವು ಸ್ಟ್ರಾಂಗ್ ಮಾಡಿಕೊಳ್ಳೋದು ಹೇಗೆ? ಸಿಂಗಲ್ ಆಗಿರೋರು​ ಓದಬೇಕಾದ ಸ್ಟೋರಿ!

author-image
Veena Gangani
Updated On
ಪ್ರಾಮಿಸ್ ಡೇ ದಿನ ನಿಮ್ಮನ್ನು ನೀವು ಸ್ಟ್ರಾಂಗ್ ಮಾಡಿಕೊಳ್ಳೋದು ಹೇಗೆ? ಸಿಂಗಲ್ ಆಗಿರೋರು​ ಓದಬೇಕಾದ ಸ್ಟೋರಿ!
Advertisment
  • ಈ ವಾರಗಳು ಒಂದೊಂದು ದಿನವು ಒಂದೊಂದು ವಿಶೇಷತೆಯಿಂದ ಕೂಡಿರುತ್ತೆ
  • ಪ್ರೇಮಿಗಳಿಗೆ ಈ ವಾರ ತುಂಬಾನೇ ಇಂಪಾರ್ಟೆಂಟ್ ಆಗಿರುತ್ತೆ ಏಕೆ ಗೊತ್ತಾ?
  • ಲವ್​ ಬರ್ಡ್ಸ್​ಗಳು ಅಷ್ಟೇ ಅಲ್ಲ, ಸಿಂಗಲ್ಸ್​ ಕೂಡ ವಾಗ್ದಾನ ಮಾಡೋ ದಿನ

ವ್ಯಾಲೆಂಟೈನ್ಸ್ ವೀಕ್​ನಲ್ಲಿ ಇಂದು ತುಂಬಾನೇ ಮುಖ್ಯವಾದ ದಿನ. ಈ ವ್ಯಾಲೆಂಟೈನ್ಸ್ ವಾರಗಳು ಒಂದೊಂದು ದಿನವು ಒಂದೊಂದು ವಿಶೇಷತೆಯಿಂದ ಕೂಡಿರುತ್ತೆ. ಪ್ರೇಮಿಗಳ ವಾರದಲ್ಲಿ ಐದನೇ ದಿನವಾದ ಇಂದು ಪ್ರಾಮಿಸ್ ಡೇ.. ಲವ್​ ಬರ್ಡ್ಸ್​ಗಳು ಹೃದಯದಿಂದ ತಮ್ಮ ಮನದರಸಿಗೆ ವಾಗ್ದಾನ ನೀಡೋ ದಿನ.

ಇದನ್ನೂ ಓದಿ: ರೀಲ್ಸ್‌ಗಾಗಿ ಶಾಲಾ ವಿದ್ಯಾರ್ಥಿಗಳಿಂದ ಐಷಾರಾಮಿ ಕಾರುಗಳ ಮೆರವಣಿಗೆ; ವಿಡಿಯೋ ವೈರಲ್ ಆದ್ಮೇಲೆ ಏನಾಯ್ತು?

publive-image

ಪ್ರೇಮಿಗಳ ವಿಚಾರದಲ್ಲಿ ಪರಸ್ಪರ ನೀಡೋ ಭರವಸೆಗಳು ಯಾವತ್ತಿಗೂ ಸಹ ತುಂಬಾನೇ ಮುಖ್ಯವಾಗಿರುತ್ತೆ. ಆದರಿಂದ ಈ ದಿನ ಪ್ರೇಮಿಗಳು ತಮ್ಮ ಪ್ರೇಯಸಿಗೂ ಪ್ರಿಯಕರನಿಗೆ ನೀಡೋ ಮಾತು ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡ್ತಾವೆ. ಸಂಗಾತಿಗಾಗಲಿ ಅಥವಾ ಪ್ರೇಮಿಗಳಿಗಾಗಲಿ ಜೀವನ ಪೂರ್ತಿ ಜೊತೆಗೆ ಇರುತ್ತೇವೆ ಎಂದು ಭರವಸೆ ನೀಡುವ ಮೂಲಕ ಪ್ರಾಮಿಸ್ ಆಚರಿಸುತ್ತಾರೆ.

publive-image

ಹಾಗಂತ ಈ ದಿನವನ್ನು ಪ್ರೇಮಿಗಳು ಮಾತ್ರವಲ್ಲ ಸಿಂಗಲ್ ಆಗಿರೋ ಬ್ಯಾಚುಲರ್​ಗಳೂ ಕೂಡ ಆಚರಿಸಿಬಹುದು. ಅದೇಗೆ ಅಂತೀರಾ.. ಜೀವನದಲ್ಲಿ ಎಲ್ಲದಕ್ಕಿಂತ ಸೆಲ್ಫ್ ಲವ್ ತುಂಬಾನೇ ಮುಖ್ಯ. ಅಂದ್ರೆ ನಿಮ್ಮನ್ನ ನೀವು ಪ್ರೀತಿಸಿಕೊಳ್ಳೋದು. ನಾವೆಲ್ಲ ಲೈಫ್​ನಲ್ಲಿ ಎಡವೋದೇ ಈ ವಿಷ್ಯದಲ್ಲಿ, ಎಲ್ಲರನ್ನ ಇಷ್ಟ ಪಡೋ ನಾವು ನಮ್ಮನ ನಾವೇ ಇಷ್ಟ ಪಡಲ್ಲ. ನಮ್ಮನ್ನ ನಾವೇ ಪ್ರೀತಿ ಮಾಡಲ್ಲ.

publive-image

ಸದಾಕಾಲ ನಮ್ಮಲ್ಲಿರುವ ಕೊಂಕುಗಳ ಬಗ್ಗೆ ಹೇಳಿ ಹೇಳಿ ಕೊರಗ್ತಾನೆ ಇರ್ತಿವಿ. ಆದ್ರೆ ಈ ದಿನ ನಿಮಗೆ ನೀವೆ ಒಂದೊಳ್ಳೆ ಪ್ರಾಮಿಸ್ ಮಾಡ್ಕೊಳ್ಳಿ. ಬೆಳ್ಳಗ್ಗೆ ಬೇಗ ಏಳ್ತೀನಿ ಅಂತಾನೋ.. ಹೊಸದಾಗಿ ಪುಸ್ತಕ ಓದೋ ಅಭ್ಯಾಸ ಮಾಡ್ತೀನಿ ಅಂತಾನೋ.. ಎಲ್ಲದಕ್ಕಿಂತ ಹೆಚ್ಚಾಗಿ ಇವತ್ತಿನಿಂದ ನನ್ನನ್ನು ನಾನು ಪ್ರೀತಿಸೋದಕ್ಕೆ ಶುರು ಮಾಡ್ತೀನಿ ಅಂತಾನೋ.. ಹೀಗೆ ನಿಮ್ಮನ್ನ ನೀವು ಸ್ಟ್ರಾಂಗ್ ಮಾಡ್ಕೊಳ್ಳೋಕೆ ಸಹಾಯ​ ಮಾಡೋ ಯಾವುದಾದರೊಂದು ನಿಮಗೆ ನೀವೇ ಪ್ರಾಮಿಸ್​ ಮಾಡ್ಕೊಳ್ಳಿ. ಯಾಕಂದ್ರೆ ಈ ದಿನವನ್ನ ಪ್ರೇಮಿಗಳು ಮಾತ್ರ ಆಚರಿಸಬೇಕು ಅಂತೇನಿಲ್ಲ, ನಿಮಗಾಗಿ ನೀವೇ ಒಂದೊಳ್ಳೆ ಪ್ರಾಮಿಸ್ ಮಾಡ್ಕೊಂಡು ಲೈಫ್​ನಲ್ಲಿ ಖುಷಿಯಾಗಿರಿ. ಏನೇ ಆದ್ರೂ ನಿಮ್ಮ ನೀವು ಪ್ರೀತ್ಸೋದನ್ನ ಬಿಡಲ್ಲ ಅಂತ ಪ್ರಾಮಿಸ್ ಮಾಡಿ..

ವಿಶೇಷ ವರದಿ: ಮರಲಿಂಗ್. ಎಮ್. ಎಚ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment