ಪಾಲಕರಾಗುವುದು ಅಷ್ಟು ಸುಲಭವಲ್ಲ.. ನಿಮ್ಮ ಮಗುವಿನ ಕೋಪೋದ್ರೇಕಗಳನ್ನು ತಡೆಯುವುದು ಹೇಗೆ?

author-image
Gopal Kulkarni
Updated On
ಪಾಲಕರಾಗುವುದು ಅಷ್ಟು ಸುಲಭವಲ್ಲ.. ನಿಮ್ಮ ಮಗುವಿನ ಕೋಪೋದ್ರೇಕಗಳನ್ನು ತಡೆಯುವುದು ಹೇಗೆ?
Advertisment
  • ನಿಮ್ಮ ಮಕ್ಕಳ ಹಠಮಾರಿತನಕ್ಕೆ ನೀವು ಸೋತು ಹೋಗುತ್ತಿದ್ದೀರಾ?
  • ಅವರು ಬೇಡಿದ್ದನ್ನು ಕೊಟ್ಟು ಹಾಳು ಮಾಡುತ್ತಿದ್ದೇವೆ ಎಂದು ಅನಿಸುತ್ತಿದೆಯಾ?
  • ಹಾಗಾದರೆ ಮಕ್ಕಳ ಹಠಮಾರಿತನ, ಕೋಪವನ್ನು ನಿರ್ವಹಣೆ ಮಾಡುವುದು ಹೇಗೆ?

ಮಕ್ಕಳು ಯಾರಿಗೆ ತಾನೆ ಇಷ್ಟ ಆಗಲ್ಲ. ಅವರ ನಗು, ತೊದಲು ಮಾತು, ಅಂಬೆಗಾಲಿನಿಂದ ಇಡುವ ತಪ್ಪು ತಪ್ಪು ಹೆಜ್ಜೆಗಳು ಹೀಗೆ ಅವರು ಮಾಡುವ ಒಂದೊಂದು ಆಟವನ್ನು ನೋಡುತ್ತಲೇ ಧನ್ಯತೆ ಪಡೆಯುತ್ತಾರೆ ಪೋಷಕರು. ಈ ಸಣ್ಣ ಸಣ್ಣ ಖುಷಿಗಳಾಚೆಯೂ ಅವರಿಗೆ ದೊಡ್ಡ ಸವಾಲು ಎಂದರೆ ಮಕ್ಕಳು ಹಿಡಿಯುವ ಆ ರಚ್ಚೆ. ಬೇಕು ಅಂದಿದ್ದು ಬೇಕು ಎಂದು ಕೂರುವ ಹಠಮಾರಿತನ, ಸಿಗುವತನಕ ಅವರಿಗೆ ಬರುವ ಕೋಪ ಹಾಗೂ ಅಳು. ಒಂದು ಬಾರಿ ಅವರು ಬೇಡಿದ್ದು ಸಿಕ್ಕ ಕೂಡಲೇ ಮಗುವಿನ ಮುಖದಲ್ಲಿ ಚಂದ್ರನಂತ ನಗೆಯೊಂದು ಹೊಳೆಯುತ್ತದೆ. ಈ ಹಂತದಲ್ಲಿ ಅನೇಕ ತಂದೆ ತಾಯಿಗಳು ಗೊಂದಲಕ್ಕಿಡಾಗುತ್ತಾರೆ.

ಮಕ್ಕಳು ಬೇಡಿದ್ದನ್ನು ಕೇಳಿದ್ದನ್ನು ಕೂಡಲೇ ಕೊಟ್ಟು ಬಿಟ್ಟರೆ ಅವರಿಗೆ ಒಂದು ಸಲುಗೆ ಸಿಗುತ್ತದೆ. ರಚ್ಚೆ ಹಿಡಿದರೆ ನನಗೆ ಬೇಕಾದದ್ದು ಸಿಗುತ್ತದೆ ಎಂಬ ಭಾವ ಬೆಳೆದು ಬಿಡುತ್ತದೆ. ಇದರಿಂದ ನಮ್ಮ ಮಕ್ಕಳನ್ನು ನಾವೇ ಹಾಳು ಮಾಡಿದಂತಾಗುತ್ತದೆ. ಒಂದು ವೇಳೆ ಕೊಡದಿದ್ದರೆ ಅವರ ಕೋಪೋದ್ರೇಕಗಳನ್ನು ಅಳುವನ್ನು ನೋಡಲಾಗದೇ ತಮ್ಮನ್ನು ತಾವು ನಿಷ್ಕಾಳಜಿ ತಂದೆ ತಾಯಿಗಳು ಎಂದು ತಮ್ಮನ್ನು ತಾವು ಭಾವಿಸಿಕೊಳ್ಳುತ್ತಾರೆ. ಈ ಹಂತವನ್ನು ದಾಟುವಷ್ಟರಲ್ಲಿ ಯಾವುದು ಸರಿ ಯಾವುದ ತಪ್ಪು ಎನ್ನುವ ಗೊಂದಲದಲ್ಲಿಯೇ ತಂದೆ ತಾಯಿಗಳು ಇರುತ್ತಾರೆ.

ಈ ತರಹದ ಸನ್ನಿವೇಶದ ಬಗ್ಗೆ ಅಹ್ಮದಾಬಾದ್​ ಮೂಲದ ಮಾನಸಿಕ ತಜ್ಞರಾದ ಡಾ ಸಾರ್ಥಕ್ ದವೆ ಹೇಳುವುದು ಹೀಗೆ. ಮಕ್ಕಳು ಹೀಗೆ ಹಠಮಾರಿತನ ಮಾಡುವುದು. ಕೋಪಗೊಳ್ಳುವುದು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಗಮನಿಸಿ ಕಲಿಯುವುದು ಸಾಮಾನ್ಯ. ಆದ್ರೆ ಮಕ್ಕಳು ತಮ್ಮ ಪಾಲಕರನ್ನು ಗಮನಿಸಿ ಒಂದು ಹಠಮಾರಿತನ್ನವನು ಕಲಿತರೆ ಕೊಂಚ ಸಮಸ್ಯೆ

ಅದರಲ್ಲೂ ಹದಿ ಹರೆಯಕ್ಕೆ ಬಂದ ಮಕ್ಕಳು ಸಹಜವಾಗಿ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವ ಬಯಕೆಯನ್ನು ಹೊಂದಿರುತ್ತಾರೆ. ಅದು ತುಂಬಾ ಬಲವಾದ ಬಯಕೆಯನ್ನು ಹೊಂದಿರುತ್ತಾರೆ. ಅದರಲ್ಲೂ ಅವರ ಇಗೋ ಮತ್ತು ಸೂಪರ್ ಇಗೋ ಇನ್ನು ಬೆಳವಣಿಗೆಯ ಹಂತದಲ್ಲಿ ಇರುತ್ತದೆ,. ಆವಾಗ ಅವರಿಗೆ ಏನಾದರೂ ಬೇಕಾದಲ್ಲಿ ಅದಕ್ಕಾಗಿ ಅವರು ಪರದಾಡುತ್ತಾರೆ. ವಿಪರೀತ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಒಂದು ವೇಳೆ ಅದು ಸಿಗದೇ ಹೋದಾಗ ಅವರು ಹತಾಶೆಗೆ ಒಳಗಾಗುತ್ತಾರೆ ಸಹಜವಾಗಿ ಅವರು ಸುತ್ತಮುತ್ತಲಿನ ವಾತಾವರಣವನ್ನು ನೋಡಿ ಕಲಿತ ಪ್ರತಿಕ್ರಿಯೆಯೇ ಅವರಿಂದ ಆಚೆ ಬರುತ್ತದೆ.

ಇದನ್ನೂ ಓದಿ:10 ಪತ್ನಿಯರು, 350 ಪ್ರೇಯಸಿಯರು, 88 ಮಕ್ಕಳು; ರಸಿಕತೆಯನ್ನೇ ಉಸಿರಾಡಿದ ಆ ರಾಜ ಯಾರು ಗೊತ್ತಾ?

ಅದು ಮಾತ್ರವಲ್ಲ ಇದಕ್ಕೂ ಮೊದಲು ಅವರು ತಮಗೆ ಬೇಕಾಗಿದ್ದನ್ನು ಸರಿಯಾದ ರೀತಿಯಲ್ಲಿ ನಟನೆ ಮಾಡಿಯೇ ಪಡೆದುಕೊಂಡಿರುತ್ತಾರೆ. ಹೀಗಾಗಿ ಆ ಸ್ವಭಾವವೇ ಮತ್ತಷ್ಟು ಬಲಗೊಳ್ಳುತ್ತದೆ ಮತ್ತು ಅದು ಪುನರಾವರ್ತನೆಯಾಗುತ್ತದೆ.

publive-image

ಮಕ್ಕಳ ಮಾನಸಿಕ ತಜ್ಞರಾದ ರಿದ್ಧಿ ದೋಶಿ ಪಟೇಲ್ ಅವರು ಹೇಳುವ ಪ್ರಕಾರ ಮಕ್ಕಳು ತಮಗೆ ಬೇಕಾದ್ದನ್ನು ಪಡೆಯಲು ಅವರು ಹಠಮಾರಿತನ ಮಾಡುತ್ತಾರೆ ಅರಚಾಡುತ್ತಾರೆ. ಕಾರಣ ಅವರ ಬಳಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಶಬ್ದ ಹಾಗೂ ಕೌಶಲ್ಯ ಎರಡು ಇರುವುದಿಲ್ಲ . ಇಲ್ಲವೇ ನಾವು ಅವರನ್ನು ಕಡೆಗಣಿಸಿದೆವು. ತಪ್ಪು ತಿಳಿದುಕೊಂಡೆವು ಎಂಬ ಭಾವ ಅವರಲ್ಲಿ ಬರುತ್ತದೆ.
ಇದನ್ನೂ ಓದಿ:ದಾಸವಾಳ ಕೇವಲ ತೋಟದಲ್ಲಿ ಬಿಡುವ ಹೂವಲ್ಲ ! ನಿಮ್ಮ ಆರೋಗ್ಯಕ್ಕೆ ಐದು ಪ್ರಯೋಜನಗಳನ್ನು ಕೊಡುವ ಪುಷ್ಪ

ಹಾಗಾದರೆ ಪಾಲಕರು ಏನು ಮಾಡಬೇಕು?

ಡಾ ಸಜೀಲಾ ಮೈನಿ ಅವರು ಹೇಳುವ ಪ್ರಕಾರ ಹಠಮಾರಿತನ ಹಾಗೂ ಕೋಪ ಮಾಡಿಕೊಂಡಾಗ ನಿಮ್ಮ ಮಕ್ಕಳಿಗೆ ನೀವು ಏನೂ ಕೊಡಬೇಡಿ. ಇದು ಮಕ್ಕಳನ್ನು ಮತ್ತಷ್ಟು ಹಠಮಾರಿತನಕ್ಕೆ ಕರೆದೊಯ್ಯುತ್ತದೆ. ಇಂತಹ ಸ್ವಭಾವಗಳಿಗೆ ನೀವು ಬಹುಮಾನ ಕೊಟ್ಟಂತಾಗುತ್ತದೆ ಹಾಗೆಯೇ ಹಠಮಾರಿತನ, ಕೋಪಗಳನ್ನು ನೀವು ಅವರಿಗೆ ನಿಮ್ಮ ಕೈಯಿಂದಲೇ ಉಣಿಸಿದಂತಾಗುತ್ತದೆ. ಹೀಗಾಗಿ ಅವರು ಹಠ ಮಾಡಿದಾಗ ಆದಷ್ಟು ನೀವು ಶಾಂತ ರೀತಿಯಿಂದ ವರ್ತಿಸಿ. ಸಮಾಧಾನವಾಗಿಯೇ ಅವರಿಗೆ ಪ್ರತಿಕ್ರಿಯೆ ನೀಡಿ. ಇದು ಆ ಘಳಿಗೆಯನ್ನು ಸರಳವಾಗಿ ದಾಟಿಸುವುದಕ್ಕೆ ಸಹಾಯಕವಾಗುತ್ತದೆ.

publive-image

ಅವರ ಭಾವನೆಗಳನ್ನು ಒಪ್ಪಿಕೊಳ್ಳಿ ನನಗೆ ಗೊತ್ತು ನಿನಗೆ ಕೋಪ ಬಂದಿದೆ ಅಂತ. ನೀನು ಅದರ ಬಗ್ಗೆ ಮಾತನಾಡಲೇಬೇಕೆ ಎಂದು ಸುಧಾರಿಸಿ ಕೇಳಿ. ಅವರು ಬೇಕಾದನ್ನು ನೀಡುವಾಗ ಕೆಲವು ಗಡಿಯನ್ನು ಹಾಕಿಕೊಳ್ಳಿ ಕೆಲವು ನಿಯಮಗಳನ್ನು ಮಾಡಿಕೊಳ್ಳಿ ಆವಾಗ ಮಕ್ಕಳಲ್ಲಿ ಸುರಕ್ಷಿತ ಭಾವ ಹಾಗೂ ನಾನು ಇವರಿಂದ ಏನು ನಿರೀಕ್ಷಿಸಬೇಕು ಎಂಬುದು ಅರ್ಥವಾಗುತ್ತದೆ.ಇದು ಬೇಕು ಎಂದಾಗ ಅವರ ಮುಂದೆ ಆಯ್ಕೆ ಇಡಿ. ಅದು ಬೇಡ ಇದು ತೊಗೊ ಎಂದು ಹೇಳಿ ಅದರಿಂದ ಮಕ್ಕಳು ನಾನು ಪೂರ್ಣವಾಗಿ ತಿರಸ್ಕೃತಗೊಂಡಿಲ್ಲ ಎಂಬ ಭಾವದಲ್ಲಿರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment