ದಿನಕ್ಕೆ ಎರಡು ನಿಮಷ ಧ್ಯಾನದಿಂದ ಬದುಕಲ್ಲಿ ನಡೆಯುತ್ತೆ ಮಹಾಪವಾಡ
ಧ್ಯಾನ ಎನ್ನುವುದು ಕೇವಲ ಆಧ್ಯಾತ್ಮದ ಭಾಗವಲ್ಲ, ಬದುಕಿನ ಭಾಗವೂ ಹೌದು
ಎರಡು ನಿಮಿಷ ಧ್ಯಾನಕ್ಕೆ ಮಾಡಿದದಲ್ಲಿ ದೈಹಿಕ, ಮಾನಸಿಕ ಸಮಸ್ಯೆಗಳು ಮಾಯ
ಧ್ಯಾನ ತಪಸ್ಸು ಇವೆಲ್ಲವು ಕೇಲವ ಆಧ್ಯಾತ್ಮದ ಭಾಗ ಎಂದೇ ಹೇಳಲಾಗುತ್ತದೆ. ಒಂದು ವಯಸ್ಸಿನವರಿಗೆ ಮಾತ್ರ ಸೀಮಿತ ಅನ್ನುವ ಅಸಡ್ಡೆ ಹಾಗೂ ಮೂಢನಂಬಿಕೆ ಎನ್ನುವ ಉದಾಸೀನವೂ ಕೂಡ ಹಲವರಲ್ಲಿದೆ. ಆದ್ರೆ ಧ್ಯಾನವೊಂದು ಆಧ್ಯಾತ್ಮದ ಪಥದಲ್ಲಿ ಸಾಗುವವರ ಸ್ವತ್ತಷ್ಟೇ ಅಲ್ಲ. ಸಾಮಾನ್ಯ ಜನರ ಜೀವನದ ಮೇಲೆ, ಸಂವೇದನೆಯ ಮೇಲೆ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೂ ಧನಾತ್ಮಕ ಪರಿಣಾಮ ಬೀರಬಲ್ಲಂತಹ ಒಂದು ನಿತ್ಯ ಕ್ರಿಯೆ ಎಂದು ಅನೇಕ ಸಾಧಕರು ಹೇಳುತ್ತಾರೆ.
ಇದನ್ನೂ ಓದಿ: Hydrated; ಅತಿಯಾಗಿ ನೀರು ಕುಡಿದರೂ ಅಪಾಯ.. ಆರೋಗ್ಯಕ್ಕೆ ಹೇಗೆ ಹಾನಿಯಾಗುತ್ತೆ?
ಧ್ಯಾನ ಅನ್ನುವುದು ಒಂದು ಭಾರಿ ಬದುಕಿನ ಒಂದು ಭಾಗವಾದರೆ ಸಾಕು, ಅದು ನಿಮ್ಮನ್ನು ಮಾನಸಿಕವಾಗಿ ಕಾಡುವ ಖಿನ್ನತೆ, ಆತಂಕ ಇಂತಹ ಹಲವು ಸಮಸ್ಯೆಗಳಿಂದ ದೂರ ಇಡಬಲ್ಲದು. ಹಾರ್ಡರ್ಡ್ ವಿಶ್ವವಿದ್ಯಾಲಯ ಮಾಡಿರುವ ಇತ್ತೀಚಿನ ಒಂದು ಅಧ್ಯಯನ ನಮ್ಮ ಗಮನದ ಕೇಂದ್ರವು ಶೇಕಡಾ 45 ರಷ್ಟು ಆಗಾಗ ಬೇರೆಡೆಗೆ ಹೋಗುತ್ತದೆ. ಹೀಗಾಗಿ ನಾವು ನಿತ್ಯ ಧ್ಯಾನವನ್ನು ರೂಢಿಸಿಕೊಂಡಲ್ಲಿ ಇಂತಹ ಸಮಸ್ಯೆಗಳಲ್ಲಿ ಅಮೂಲ್ಯವಾದ ಬದಲಾವಣೆಯನ್ನು ನಾವು ಕಾಣಬಹುದು ಎಂದು ಆ ಅಧ್ಯಯನದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ MPOX ಕನ್ಫರ್ಮ್.. ಕರ್ನಾಟಕಕ್ಕೂ ಶುರುವಾಯ್ತು ಡೇಂಜರ್ ಮಹಾಮಾರಿ ಆತಂಕ..!
ಹಾಗಂತ ನೀವು ನಿತ್ಯ ಗಂಟೆಗಟ್ಟಲೇ ದೇವರ ಮುಂದೆ ಕುಳಿತು ಧ್ಯಾನ ಮಾಡಬೇಕಾಗಿಲ್ಲ . ದಿನಕ್ಕೆ ಕನಿಷ್ಠ ಎರಡು ನಿಮಿಷ ನೀವು ಧ್ಯಾನವನ್ನು ಮಾಡುವುದನ್ನು ರೂಢಿಸಿಕೊಂಡ್ರೆ ನಿಮ್ಮ ಏಕಾಗ್ರತೆಯ ಶಕ್ತಿಯಲ್ಲಿ ದೊಡ್ಡ ಮಟ್ಟದ ಬಲ ಬರುತ್ತದೆ. ಮನಸ್ಸು ಪ್ರಫುಲ್ಲವಾಗಿರುತ್ತದೆ. ಶಾಂತಚಿತ್ತದ ಮನಸ್ಸು ನಿಮ್ಮದಾಗುತ್ತದೆ.
ಆದ್ರೆ ಧ್ಯಾನ ಮಾಡುವುದಕ್ಕೂ ಒಂದು ವಿಧಾನವಿದೆ. ಸದ್ಯ ಜಗತ್ತು ತುಂಬಾ ಗದ್ದಲ ಮಾಡುತ್ತೆ ಮನೆಯಲ್ಲಿರುವ ಫ್ಯಾನ್ನಿಂದ ಹಿಡಿದು ರಸ್ತೆಯಲ್ಲಿ ಓಡಾಡುವ ವಾಹನಗಳು. ಪಕ್ಕದ ಮನೆಯ ಜಗಳದಿಂದ ಹಿಡಿದು ನಲ್ಲಿಯಲ್ಲಿ ತೊಟ್ಟಿಕ್ಕುವ ಹನಿಯ ಶಬ್ದವೂ ಕೂಡ ನಮ್ಮನ್ನು ಧ್ಯಾನದಿಂದ ಕದಲುವಂತೆ ಮಾಡುತ್ತವೆ. ಆದ್ರೆ ನೆನಪಿರಲಿ ಅದ್ಯಾವುದನ್ನು ನೀವು ಅಸಹನೀಯ ಎಂದುಕೊಂಡು ಧ್ಯಾನಕ್ಕೆ ಕೂರಬಾರದು. ಅವುಗಳ ಪಾಡಿಗೆ ಅವುಗಳನ್ನು ಅರಚಲು ಬಿಟ್ಟು ನಿಮ್ಮ ಕಿವಿ ಕೇವಲ ನಿಮ್ಮ ಉಸಿರಾಟದ ಮೇಲೆ ಕೇಂದ್ರಿಕೃತವಾಗುವಂತೆ ಅದೊಂದನ್ನೇ ಗಮನಿಸುವಂತೆ ಮನಸ್ಸಿಟ್ಟು ಧ್ಯಾನಕ್ಕೆ ಕೂರಬೇಕು
ನಿಧಾನವಾಗಿ ದೀರ್ಘ ಉಸಿರು ತೆಗೆದುಕೊಳ್ಳುತ್ತಾ ಅದರೆಡೆಗೆ ಗಮನವನ್ನು ಕೇಂದ್ರಿಕರಿಸಿ ರಬೇಕು ಈ ರೀತಿಯ ಧ್ಯಾನವು ನಿಮ್ಮ ನರಮಂಡಲವನ್ನು ಶಾಂತಚಿತ್ತಗೊಳಿಸುತ್ತದೆ ಹೊಸ ಶಕ್ತಿಯನ್ನು ತುಂಬುತ್ತದೆ.
ಓಶೋ ಧಾಮದ ಧ್ಯಾನ ಶಿಕ್ಷಣ ನೀಡುವ ಧ್ಯಾನ್ ಪ್ರಾಚಿ ಅವರು ಹೇಳುವ ಪ್ರಕಾರ ಧ್ಯಾನಕ್ಕೆ ಸಮಯ ಅಂತ ಬೇಕಾಗುವುದಿಲ್ಲ ಅದು ನಿಮ್ಮ ಶಕ್ತಿ ಹಾಗೂ ನಿಮ್ಮ ಗಮನವನ್ನು ಮಾತ್ರ ಕೇಳುತ್ತದೆ. ಬದುಕಿನ ಜಂಜಡದಲ್ಲಿ ಕಳೆದು ಹೋಗುವವರ ಬಳಿ ಸಮಯವಿರುವುದಿಲ್ಲ. ಹೀಗಾಗಿ ಅವರು ಎರಡು ನಿಮಿಷಗಳ ಅವಧಿಯಲ್ಲಿಯೂ ಅದ್ಭುತ ಧ್ಯಾನ ಮಾಡಲು ಸಾಧ್ಯ. ಎಂದು ಅವರು ಹೇಳಿದ್ದಾರೆ
ಧ್ಯಾನ ಒಂದೇ ದಿನಕ್ಕೆ ಗುರುತರವಾದ ಬದಲಾವಣೆಯನ್ನು ತಂದಿಡಲಾರದು. ಅದಕ್ಕಾಗಿ ತುಂಬಾ ಸಮಯ ಬೇಕು ಒಂದು ಹಿಡಿತ ಸಿಗುವವರೆಗೂ ಅದು ಅಷ್ಟು ಸರಳವಲ್ಲ. ಒಂದು ಬಾರಿ ಹಿಡಿತ ಸಿಕ್ಕಿದ್ದೇ ಆದಲ್ಲಿ ಅದು ನಮ್ಮ ಬದುಕಲ್ಲಿ ಮಾಡುವ ಬದಲಾವಣೆಗಳೇ ಬೇರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ