/newsfirstlive-kannada/media/post_attachments/wp-content/uploads/2024/05/heat-wave.jpg)
ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಜಾಸ್ತಿಯಾಗುತ್ತಿದೆ. ಮಧ್ಯಾಹ್ನ ಜನ ಮನೆಯಿಂದ ಹೊರ ಬರೋದಕ್ಕೂ ಭಯ ಪಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ರಾಜ್ಯದಲ್ಲಿ ನಾಳೆ 30ಕ್ಕೂ ಹೆಚ್ಚು ಡಿಗ್ರಿ ಉಷ್ಣಾಂಶ ದಾಖಲಾಗುವ ಮುನ್ಸೂಚನೆ ಇದೆ.
ಬಿಸಿಲಿನ ಶಾಖ ಹೆಚ್ಚಾಗುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರೂ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹೀಗಾಗಿ ಜನ ಮುಂಜಾಗ್ರತಾ ಕ್ರಮವಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕಿದೆ.
ಬಿಸಿಲಿನಿಂದ ಬಚಾವ್ ಆಗೋದು ಹೇಗೆ?
- ಬಿಸಿಲಿನಲ್ಲಿ ಹೆಚ್ಚು ಕಾಲ ಕಳೆಯುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು.
- ಸುಡು ಬಿಸಿಲಿನಲ್ಲಿ ಆಗಾಗ ನೆರಳಿನಡಿ ಆಶ್ರಯ, ನಿಮ್ಮ ಆರೋಗ್ಯಕ್ಕೆ ಅಭಯ ಪಡೆಯಿರಿ.
- ಮಧ್ಯಾಹ್ನ 12ರಿಂದ 4ರವರೆಗೆ ಬಿಸಿಲಿನಿಂದ, ದೈಹಿಕ ಒತ್ತಡ ಮತ್ತು ದಣಿವಾಗಿ ಆರೋಗ್ಯಕ್ಕೆ ಮಾರಕವಾಗಬಹುದು.
- ಹೀಗಾಗಿ ಈ ಸಮಯದಲ್ಲಿ ಕೆಲಸಗಳಿಗೆ ವಿರಾಮ ನೀಡಿ ಆರೋಗ್ಯ ಕಾಪಾಡಿಕೊಳ್ಳಿ.
- ಛತ್ರಿಯಿಂದ ಸೂರ್ಯನ ಶಾಖಕ್ಕೆ ಕತ್ರಿ ಹಾಕಿ ಆರೋಗ್ಯದ ಬಗ್ಗೆ ಗಮನಹರಿಸಿ.
- ಬೇಸಿಗೆಯಲ್ಲಿ ಮನೆ ವಾತಾವರಣ ತಂಪಾಗಿರಿಸಿ, ಕುಟುಂಬದ ಆರೋಗ್ಯ ರಕ್ಷಿಸಿ.
- ಸೂರ್ಯನ ಶಾಖ, ಬಳಲಿಕೆ, ಬೆವರು ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು.
- ತಿಳಿ ಬಣ್ಣದ ಸಡಿಲವಾದ ಬಟ್ಟೆ ಧರಿಸಿ, ನಿಮ್ಮ ದೇಹಕ್ಕೆ ತಗಲುವ ಶಾಖ ಕಡಿತಗೊಳಿಸಿ.
ಇಂತಹ ಬಿಸಿಲಿನ ವಾತಾವರಣ ಆರೋಗ್ಯಕ್ಕೆ ಒಳ್ಳೆಯದಲ್ಲ. ಉರಿ ಬಿಸಿಲು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ