newsfirstkannada.com

WhatsApp: ವಾಟ್ಸ್​ಆ್ಯಪ್​ನಲ್ಲಿ ‘HD’ ಫೋಟೋ ಸುಲಭವಾಗಿ ಕಳುಹಿಸಬಹುದು.. ಹೇಗೆ ಗೊತ್ತಾ?

Share :

Published April 3, 2024 at 1:43pm

  ಮೆಟಾ ಒಡೆತನದ ವಾಟ್ಸ್​ಆ್ಯಪ್​ನಲ್ಲಿರುವ ಈ ಆಯ್ಕೆ ಬಗ್ಗೆ ಗೊತ್ತಾ?

  ವಾಟ್ಸ್​ಆ್ಯಪ್​ನಲ್ಲಿ HD ಫೋಟೋ ಸುಲಭವಾಗಿ ಕಳುಹಿಸಬಹುದು

  HD ಫೋಟೋ ಕಳುಹಿಸುವ ಸುಲಭವಾದ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ

ಮೆಟಾ ಒಡೆತನದ ಜನಪ್ರಿಯ ಆ್ಯಪ್​ ವಾಟ್ಸ್​ಆ್ಯಪ್ ವಿಶ್ವದಾದ್ಯಂತ​ ಬಹುಸಂಖ್ಯಾ ಬಳಕೆದಾರರನ್ನು ಹೊಂದಿದೆ. ದೈನಂದಿನ ವ್ಯವಹಾರದಿಂದ ಹಿಡಿದು ರಾತ್ರಿ ಗುಡ್​ನೈಟ್​​ ಸಂದೇಶ ಕಳುಹಿಸುವವರೆಗೆ ವಾಟ್ಸ್​ಆ್ಯಪ್ ಅನ್ನು ಅವಲಂಬಿತರಾದವರು ಅನೇಕರಿದ್ದಾರೆ. ಅದರಲ್ಲೂ ಭಾರತದಲ್ಲಿ ಬಹುಸಂಖ್ಯಾ ಜನರು ಜಾನ್​ ಕೌಮ್​ ಮತ್ತು ಬ್ರಿಯಾನ್​ ಆಕ್ಟನ್​ ಸಿದ್ಧಪಡಿಸಿದ ವಾಟ್ಸ್​ಆ್ಯಪ್​ಗೆ ಒಗ್ಗಿಕೊಂಡಿದ್ದಾರೆ.

ಆದರೆ ಬಹುತೇಕ ವಾಟ್ಸ್​ಆ್ಯಪ್​ ಬಳಕೆದಾರರು ಹೇಳಿಕೊಂಡ ಸಮಸ್ಯೆ ಎಂದರೆ ವಾಟ್ಸ್​ಆ್ಯಪ್​ನಲ್ಲಿ ಕಳುಹಿಸುವ ಫೋಟೋ, ವಿಡಿಯೋ ಕ್ಲಾರಿಟಿ ಕಳೆದುಕೊಳ್ಳುತ್ತದೆ. ಇದಕ್ಕಾಗಿ ಬಹುತೇಕರು ಡಾಕುಮೆಂಟ್​ ಮೊರೆ ಹೋಗುತ್ತಾರೆ. ಆದರೆ ಇದರಿಂದ ಡೇಟಾ ಹೆಚ್ಚಾಗಿ ಖರ್ಚಾಗುತ್ತದೆ. ಆದರೆ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಹೆಚ್ಚಿನ ಡೇಟಾ ಖರ್ಚು ಮಾಡದೆ ವಾಟ್ಸ್​ಆ್ಯಪ್​​ನಲ್ಲಿ ಹೆಚ್​ಡಿ ಫೋಟೋವನ್ನು ಕಳುಹಿಸಬಹುದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಾಟ್ಸ್​ಆ್ಯಪ್​ನಲ್ಲಿ ಹೆಚ್​ಡಿ ಫೋಟೋ ಕಳುಹಿಸಲು ಹೀಗೆ ಮಾಡಿ

ಹಂತ 1: ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್​ ತೆರೆಯಿರಿ ಬಳಿಕ ಚಾಟ್​​ ಥ್ರೆಡ್​​ ಆಯ್ಕೆ ಮಾಡಿ
ಹಂತ 2: ಆ್ಯಂಡ್ರಾಯ್ಡ್​ನಲ್ಲಿ ಪೇಪರ್​ಕ್ಲಿಪ್​ ಮತ್ತು ಐಒಎಸ್​ನಲ್ಲಿ ‘+’ ಇರುವ ಅಟ್ಯಾಚ್​ಮೆಂಟ್​ ಐಕಾನ್​ ಮೇಲೆ ಕ್ಲಿಕ್​ ಮಾಡಿ.
ಹಂತ 3: ನೀವು ಹಂಚಿಕೊಳ್ಳುವ ಚಿತ್ರವನ್ನು ಆರಿಸಿ.
ಹಂತ 4: ಚಿತ್ರವನ್ನು ಆರಿಸಿದ ಬಳಿಕ ನಿಮಗೆ ಫೋಟೋದ ಮೇಲ್ಭಾಗದಲ್ಲಿ ‘HD’ ಬಟನ್​ ಕಾಣಿಸುತ್ತದೆ. ನಂತರ ‘send’ ಬಟನ್​ ಮೇಲೆ ಕ್ಲಿಕ್​ ಮಾಡಿದರೆ ಹೆಚ್​ಡಿ ರೂಪದಲ್ಲಿ ಫೋಟೋ ಸೆಂಡ್​ ಆಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WhatsApp: ವಾಟ್ಸ್​ಆ್ಯಪ್​ನಲ್ಲಿ ‘HD’ ಫೋಟೋ ಸುಲಭವಾಗಿ ಕಳುಹಿಸಬಹುದು.. ಹೇಗೆ ಗೊತ್ತಾ?

https://newsfirstlive.com/wp-content/uploads/2024/04/Whatsapp-1.jpg

Load More