/newsfirstlive-kannada/media/post_attachments/wp-content/uploads/2024/08/hair.jpg)
ಕೂದಲು ಎಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ? ಹೀಗಾಗಿ ಕೂದಲು ಉದುರಬಾರದು, ಉದ್ದವಾಗಿ ಬೆಳೆಯಬೇಕು, ಕೂದಲನ್ನು ಬಲಿಷ್ಠ ಹಾಗೂ ಸುಂದರವಾಗಿ ಬೆಳೆಯಬೇಕೆಂದು ನಾನಾ ರೀತಿಯಲ್ಲಿ ಕೂದಲಿನ ಮೇಲೆ ಪ್ರಯೋಗ ಮಾಡುತ್ತಾರೆ. ಆದರೆ ಅದು ಫಲ ಕೊಡದೇ ಹೆಚ್ಚಿನ ಮಟ್ಟದಲ್ಲಿ ಕೂದಲು ಉದುರುವುದು ಹೆಚ್ಚಾಗುತ್ತದೆ. ಆದರೆ ಬೇಸಿಗೆಗಾಲದಲ್ಲಿ ನಿಮ್ಮ ಕೂದಲಿನ ಆರೈಕೆ ದುಪ್ಪಟ್ಟಾಗಿ ಇರಬೇಕು.
ಇದನ್ನೂ ಓದಿ:ಸಾಧು ಕೋಕಿಲಗೆ ತರಾಟೆ ತಗೊಂಡ ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್; ತಪ್ಪು ಮಾಡಿದ್ದು ಯಾರು?
ಹೌದು, ಉರಿ ಬಿಸಿಲಿಗೆ ದಿನೇ ದಿನೆ ದಪ್ಪವಿದ್ದ ಕೂದಲು ತೇಳುವಾಗಲು ಶುರುವಾಗುತ್ತದೆ. ಇದರಿಂದ ಅತಿಯಾದ ಒತ್ತಡ ಕೂಡ ಉಂಟಾಗುತ್ತದೆ. ಬೆಸಿಗೆ ಕಾಲದಲ್ಲಿ ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಬಳಸಿ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಾಕಷ್ಟು ನೀರು, ಹಣ್ಣು, ಮಾಂಸ, ಮೀನು ಮತ್ತು ಇತರ ರೀತಿಯ ಪ್ರೋಟೀನ್‌ಗಳನ್ನು ಸೇವಿಸಿ.
ಆದರೆ ನಿಮಗೆ ಗೊತ್ತಿರಲಿ.. ನೈಸರ್ಗಿಕವಾಗಿ ತಲೆ ಕೂದಲನ್ನು ಮೊದಲಿನಂತೆ ಉಳಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ನಿಮ್ಮ ಕೂದಲಿನ ಆರೋಗ್ಯವನ್ನು ನಿರ್ಧರಿಸುವಲ್ಲಿ ನಿಮ್ಮ ಜೀವನಶೈಲಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು ನಿಮ್ಮ ಜೀವನಶೈಲಿಯಲ್ಲಿ ನೀವು ಕೆಲವು ಅಗತ್ಯವಾದ ಮಾರ್ಗವನ್ನು ಅನುಸರಿಸಬೇಕಾಗುತ್ತದೆ.
- ಈಗಾಗಲೇ ಬೇಸಿಗೆ ಕಾಲ ಶುರುವಾಗಿದೆ. ಹೀಗಾಗಿ ದಿನಲೂ ತಲೆ ಸ್ನಾನ ಮಾಡಲು ಹೋಗಬೇಡಿ. ವಾರಕ್ಕೆ 2 ದಿನ ತಲೆ ಮಾಡಿದ್ರೆ ಉತ್ತಮ.
- ಬೇಸಿಗೆ ಕಾಲದಲ್ಲಿ ತಲೆಗೆ ನಯವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿ. ಇದರಿಂದ ಕೂದಲು ನಯವಾಗುತ್ತದೆ. ಜೊತೆಗೆ ಬಿಸಿಲಿನಿಂದ ತೊಂದರೆ ಆಗುವುದಿಲ್ಲ.
- ನೀವು ಅತಿಯಾಗಿ ಬಿಸಿಲಿನಲ್ಲಿ ಓಡಾಡುತ್ತಿದ್ದರೆ ತಲೆಗೆ ಬಟ್ಟೆ ಅಥವಾ ಟೋಪಿಯನ್ನು ಹಾಕಿಕೊಳ್ಳಿ. ಅಲ್ಲದೇ ನಿಮ್ಮ ಕಣ್ಣನ್ನು ಬಿಟ್ಟರೇ ಕೂದಲ ಸಮೇತ ಮುಖವನ್ನು ಬಟ್ಟೆಯಿಂದ ಕವರ್ ಮಾಡಿಕೊಳ್ಳಿ.
- ಬಹು ಮುಖ್ಯವಾಗಿ ಯುವತಿಯರು ಕೂದಲನ್ನು ಫ್ರೀಯಾಗಿ ಬಿಡುವುದನ್ನು ಆದಷ್ಟು ಅವೈಡ್ ಮಾಡಿ. ಏಕೆಂದರೆ ಅತಿಯಾದ ಬಿಸಿ ಗಾಳಿಯಿಂದ ನಿಮ್ಮ ಕೂದಲಿಗೆ ಹಾನಿ ಉಂಟು ಆಗುವ ಸಾಧ್ಯತೆ ಇರುತ್ತದೆ
- ಆಫೀಸಿನಿಂದ ಮನೆಗೆ ಹೋದ ಬಳಿಕ ಮತ್ತೆ ಕೂದಲನ್ನು ಬಿಗಿಯಾಗಿ ಕಟ್ಟುವುದನ್ನು ನಿಷೇಧಿಸಿ. ಏಕೆಂದರೆ ಬಿಗಿಯಾಗಿ ಕೂದಲನ್ನು ಕಟ್ಟಿದ್ದೇ ಆದರೆ ದದ್ದುಗಳು ಅಥವಾ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ