ಡೆಬಿಟ್ ಕಾರ್ಡ್ ಇಲ್ಲದೆಯೂ ನೀವು UPI ಪಿನ್ ಬದಲಾಯಿಸಬಹುದು.. ಅದು ಹೇಗೆ..?

author-image
Ganesh
Updated On
ಡೆಬಿಟ್ ಕಾರ್ಡ್ ಇಲ್ಲದೆಯೂ ನೀವು UPI ಪಿನ್ ಬದಲಾಯಿಸಬಹುದು.. ಅದು ಹೇಗೆ..?
Advertisment
  • ಹಲವು ವರ್ಷಗಳಿಂದ ಒಂದೇ ಪಿನ್ ಬಳಸುತ್ತಿದ್ದೀರಾ..?
  • ತುಂಬಾ ದಿನಗಳಿಂದ ಒಂದೇ ಪಿನ್ ಬಳಸುತ್ತಿದ್ದರೆ ಡೇಂಜರ್!
  • ನಿಮ್ಮ ಬ್ಯಾಂಕ್ ಅಕೌಂಟ್ ಸೇಫ್ ಆಗಿಡೋದು ಹೇಗೆ..?

ದೇಶದಲ್ಲಿ ಲಕ್ಷಾಂತರ ಜನ ಡಿಜಿಟಲ್ ಹಣದ ವಹಿವಾಟಿನ ಸೇತುವೆ UPI ಬಳಸುತ್ತಾರೆ. UPI ಬಳಸುವುದು ತುಂಬಾ ಸುಲಭವಾಗಿದ್ದರೂ ಅದನ್ನು ಸುರಕ್ಷಿತವಾಗಿಡುವುದು ಕೂಡ ತುಂಬಾನೇ ಮುಖ್ಯ. ಯುಪಿಐ ಪಿನ್ ಆಗಾಗ ಬದಲಾಯಿಸುತ್ತಿರಬೇಕು. ಒಂದೇ UPI ಪಿನ್ ಹಲವು ವರ್ಷಗಳಿಂದ ಬಳಸುತ್ತಿದ್ದರೆ ನೀವು ಮೋಸ ಹೋಗ್ತೀರಿ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಈ ಹಿಂದೆ UPI ಪಿನ್ ಬದಲಾಯಿಸಲು ಡೆಬಿಟ್ ಕಾರ್ಡ್ ಬೇಕಿತ್ತು. ಸದ್ಯಕ್ಕೆ ಅದರ ಅಗತ್ಯ ಇಲ್ಲ. ಡೆಬಿಟ್ ಕಾರ್ಡ್ ಇಲ್ಲದೆಯೂ ಯುಪಿಐ ಪಿನ್ ಬದಲಾಯಿಸಬಹುದು. ಅದಕ್ಕಾಗಿ ಹೊಸ ನಿಯಮ ಪರಿಚಯಿಸಲಾಗಿದೆ.

ATM ಕಾರ್ಡ್ ಇಲ್ಲದೇ ಹೇಗೆ..?

  • ಈ ಪ್ರಕ್ರಿಯೆಗೆ ನಿಮ್ಮ ಮೊಬೈಲ್ ಸಂಖ್ಯೆಯು ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗಿರೋದು ಅಗತ್ಯ
  • UPI Aap ಓಪನ್ ಮಾಡಬೇಕು
  • ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ ಮತ್ತು ಲಾಗಿನ್ ಮಾಡಬೇಕು
  • ಮುಂದೆ, UPI ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆ ಆಯ್ಕೆ ಮಾಡಿಕೊಳ್ಳಿ
  • UPI ಪಿನ್ ಆಯ್ಕೆ ಸೆಲೆಕ್ಟ್ ಮಾಡಿ
  • ಇಲ್ಲಿ ಎರಡು ಆಯ್ಕೆಗಳು ಇರುತ್ತವೆ. ಡೆಬಿಟ್ ಕಾರ್ಡ್, ಆಧಾರ್ ಒಟಿಪಿ ಬಳಸಿ ಪಾಸ್‌ವರ್ಡ್ ಬದಲಾಯಿಸುವುದು
  • ಆಧಾರ್ OTP ಸೆಲೆಕ್ಟ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ನಮೂದಿಸಿ ಸುಲಭವಾಗಿ ಬದಲಾಯಿಸಬಹುದು.

ಈ ಆನ್‌ಲೈನ್ ಹಣ ವರ್ಗಾವಣೆಯ ಪ್ರಕ್ರಿಯೆ ಮೂಲಕ ಎಲ್ಲಿಂದಲಾದರೂ ಸುಲಭವಾಗಿ ಹಣ ವರ್ಗಾಯಿಸಬಹುದು. ಹಣದ ವಹಿವಾಟು ನಡೆಸಲು ಬ್ಯಾಂಕ್‌ಗಳಿಗೆ ಅಥವಾ ಎಟಿಎಂಗಳಿಗೆ ಹೋಗುವ ಅಗತ್ಯವಿಲ್ಲ. ಎಲ್ಲೇ ಇದ್ದರೂ, ಯಾವುದೇ ಸಮಯದಲ್ಲೂ ಹಣ ಕಳುಹಿಸಲು ಸಾಧ್ಯವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment