/newsfirstlive-kannada/media/post_attachments/wp-content/uploads/2023/07/Credit-card.jpg)
ಕ್ರೆಡಿಟ್ ಕಾರ್ಡ್ (Credit card) ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಮೊದಲು ಏನಾದರು ಖರೀದಿಸಲು ಹಣವಿಲ್ಲದಿದ್ದಾಗ, ಇತರರಿಂದ ಎರವಲು ಪಡೆಯಬೇಕಾಗಿತ್ತು. ಈಗ ವಾತಾವರಣ ಬದಲಾಗಿದೆ. ಅಂಥ ಪರಿಸ್ಥಿತಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಕಾರ್ಯ ಪೂರ್ಣಗೊಳಿಸಬಹುದು.
2023ರಲ್ಲಿ ಬಿಡುಗಡೆಯಾದ ಮಾಹಿತಿ ಪ್ರಕಾರ.. ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆ 10 ಕೋಟಿ ದಾಟಿದೆ. 2022ರಲ್ಲಿ 1.22 ಕೋಟಿ ಹೊಸ ಕ್ರೆಡಿಟ್ ಕಾರ್ಡ್ ನೀಡಲಾಗಿದೆ. 2023 ರಲ್ಲಿ ಅದರ ಸಂಖ್ಯೆ 1.67 ಕೋಟಿ ತಲುಪಿದೆ ಎಂದು ಹೇಳಿದೆ.
ಇದನ್ನೂ ಓದಿ:WhatsApp ನಿಂದ ಮತ್ತೊಂದು ಬೆಂಕಿ ಫೀಚರ್; ಇನ್ಮೇಲೆ ಕೇಳಂಗೇ ಇಲ್ಲ..!
ಕ್ರೆಡಿಟ್ ಕಾರ್ಡ್ ಬಳಸಿದರೆ ಪ್ರತಿ ತಿಂಗಳು ಬಿಲ್ ಪಾವತಿ ಮಾಡಲಾಗುತ್ತದೆ. ನಿಗದಿತ ಸಮಯಕ್ಕೆ ಬಿಲ್ ಪಾವತಿ ಮಾಡದಿದ್ದರೆ ಸಿಬಿಲ್ ಸ್ಕೋರ್ (CIBIL Score) ಮೇಲೆ ಪೆಟ್ಟು ಬೀಳುತ್ತದೆ. ಇದರಿಂದ ಭವಿಷ್ಯದಲ್ಲಿ ಸಾಲ ಸೌಲಭ್ಯ ಸಾಧ್ಯತೆ ಕಮ್ಮಿಯಾಗುತ್ತದೆ. ಹೀಗೆ ಮಾಡಿದರೆ ನಿಮ್ಮ CIBIL ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರಲ್ಲ.
ಸಿಬಿಲ್ ಸ್ಕೋರ್ಗಾಗಿ ನೀವು ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಕೆ ಮಾಡಬೇಕು. ಯಾವತ್ತೂ ಕ್ರೆಡಿಟ್ ಕಾರ್ಡ್ ಪೂರ್ಣ ಮಿತಿಯನ್ನು ಮೀರಿ ಖರ್ಚು ಮಾಡಬಾರದು. ಉದಾಹರಣೆಗೆ ಕ್ರೆಡಿಟ್ ಕಾರ್ಡ್ ಮಿತಿಯು 100,000 ರೂಪಾಯಿ ಆಗಿದ್ದರೆ, 20 ಸಾವಿರದಿಂದ 30 ಸಾವಿರದವರೆಗೆ ಬಳಸಿಕೊಳ್ಳಬೇಕು. ಇದರಿಂದ ಪ್ರತಿ ತಿಂಗಳು ಹಣ ಪಾವತಿ ಮಾಡಲು ಸಹಾಯ ಆಗುತ್ತದೆ. ಜೊತೆಗೆ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಲ್ಲ.
ಇದನ್ನೂ ಓದಿ: ಭಿಕ್ಷುಕನ ಕೈಯಲ್ಲಿ ಐಫೋನ್ 16 ಪ್ರೋ ಮ್ಯಾಕ್ಸ್! ಬೆಚ್ಚಿ ಬಿದ್ದ ಇಂಟರ್ನೆಟ್ ಜಗತ್ತು!
ಕ್ರೆಡಿಟ್ ಬಳಕೆಯ ಅನುಪಾತ ಅಧಿಕವಾಗಿದ್ದರೆ ನೀವು ಎಚ್ಚೆತ್ತುಕೊಳ್ಳಬೇಕು. ಇದರರ್ಥ ನೀವು ಮತ್ತೆ ಮತ್ತೆ ಕ್ರೆಡಿಟ್ ಕಾರ್ಡ್ ಮಿತಿ ಸಂಪೂರ್ಣ ಖರ್ಚು ಮಾಡ್ತಿದ್ದೀರಿ ಎಂದು. ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೆಚ್ಚು ಅವಲಂಬಿತರಾದ ಸಿಬಿಲ್ ಸ್ಕೋರ್ಗೆ ಹೊಡೆತ ಬೀಳುತ್ತದೆ. ಸಿಬಿಲ್ ಸ್ಕೋರ್ 700ಕ್ಕಿಂತ ಕಡಿಮೆಯಿದ್ದರೆ ಒಳ್ಳೆಯದಲ್ಲ. ಇಂಥ ಸಂದರ್ಭದಲ್ಲಿ ಯಾವುದೇ ಸಾಲ ಮತ್ತು ಹೊಸ ಕ್ರೆಡಿಟ್ ಕಾರ್ಡ್ ಸಿಗಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ