ಚರ್ಮದ ಸಮಸ್ಯೆಯಿದ್ದಲ್ಲಿ ಕ್ರೀಮ್​ಗಿಂತ ತುಳಸಿ ಬಳಸಿ ; ತುಳಸಿಯಲ್ಲಿವೆ ಸಾವಿರಾರು ಔಷಧಿ ಗುಣ

author-image
Gopal Kulkarni
Updated On
ಚರ್ಮದ ಸಮಸ್ಯೆಯಿದ್ದಲ್ಲಿ ಕ್ರೀಮ್​ಗಿಂತ ತುಳಸಿ ಬಳಸಿ ; ತುಳಸಿಯಲ್ಲಿವೆ ಸಾವಿರಾರು ಔಷಧಿ ಗುಣ
Advertisment
  • ಮನೆಯ ಮುಂದೆ ಬೆಳದಿರುವ ತುಳಸಿಯಲ್ಲಿದೆ ಔಷಧಿ ಗುಣಗಳು
  • ಯಾವೆಲ್ಲಾ ಸಮಸ್ಯೆಗೆ ತುಳಸಿ ದಳಗಳು ರಾಮಬಾಣ ಎಂದು ಗೊತ್ತಾ?
  • ಕೆಮ್ಮು, ಕಫ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ಔಷಧಿ ತುಳಸಿ

ತುಳಸಿ ಭಾರತೀಯ ಆಯುರ್ವೇದ ಪದ್ಧತಿಯ ಒಂದು ಅವಿಭಾಜ್ಯ ಅಂಗವಾಗಿ ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿದೆ. ಕೆಮ್ಮು ನೆಗಡಿಯಿಂದ ಹಿಡಿದು, ನೂರಾರು ಆರೋಗ್ಯ ಸಮಸ್ಯೆಗಳನ್ನು ಸರಳವಾರಿ ಪರಿಹರಿಸಬಲ್ಲ ಶಕ್ತಿ ತುಳಸಿಗಿದೆ. ಭಾರತೀಯ ಪರಂಪರೆ ಈ ಒಂದು ಗಿಡವನ್ನು ಶತಮಾನಗಳಿಂದಲೂ ಆರಾಧಿಸಿಕೊಂಡು ಬಂದಿದ್ದಾರೆ. ಇದರಲ್ಲಿರುವ ಔಷಧಿ ಗುಣ ಹಾಗೂ ಪೌರಾಣಿಕ ಹಿನ್ನೆಲೆಯಿಂದಾಗಿ ಇದು ಭಾರತೀಯ ಪರಂಪರೆಯಲ್ಲಿ ಸರ್ವಶ್ರೇಷ್ಠ ಗಿಡವೆಂದು ಪೂಜಿಸಲಾಗುತ್ತದೆ. ಈಗಾಗಲೇ ಹೇಳಿದಂತೆ ತುಳಸಿಯಲ್ಲಿ ಹಲವು ಔಷಧಿಯ ಗುಣಗಳಿವೆ. ಆದ್ರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಕೂದಲು ಉದುರವಿಕೆ ಸಮಸ್ಯೆಗಳಿಗೆ ತುಳಸಿ ರಾಮಬಾಣ ಎಂದು ಅನೇಕ ಸಂಶೋಧನೆಗಳು ರುಜುವಾತುಪಡಿಸಿವೆ.

publive-image

ತುಳಸಿ ಪರಂಪರೆಯನ್ನು ಅಧ್ಯಯನ ಮಾಡಿ ನೋಡಿದಾಗ ಚರ್ಮದ ಮೇಲಿನ ಮೊಡವೆ, ಚರ್ಮದ ಉರಿಯನ್ನು ಶಮನ ಮಾಡುವುದರಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಅದರ ಜೊತೆಗೆ ತಲೆಯ ಕೂದಲು ಬೆಳೆಯುವುದಕ್ಕೂ ಕೂಡ ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಇದು ಅನೇಕ ಅಧ್ಯಯನ ಹಾಗೂ ಸಂಶೋಧನೆಗಳು ಕೂಡ ಒಪ್ಪಿಕೊಂಡಿವೆ.

ಇದನ್ನೂ ಓದಿ:ಜನರು ನಿತ್ಯ ಅಂದಾಜು ಎಷ್ಟು ಹೆಜ್ಜೆ ನಡೆಯುತ್ತಿದ್ದಾರೆ? ಉತ್ತಮ ಆರೋಗ್ಯಕ್ಕೆ ಎಷ್ಟು ಹೆಜ್ಜೆ ನಡೆಯಬೇಕು?

ಚರ್ಮದ ಸಮಸ್ಯೆಗಳಿದ್ದರೆ ಅದರಲ್ಲೂ ಮೊಡವೆ ಹಾಗೂ ಚರ್ಮದ ಉರಿತಕ್ಕೆ ತುಳಸಿಯನ್ನು ಬಳಸಿದಲ್ಲಿ ಕೂಡಲೇ ಗುಣಮುಖವಾಗುತ್ತದೆ ಎಂದು ಹೇಳಲಾಗುತ್ತೆ. ಸದ್ಯ ತಲೆ ಕೂದಲು ಉದುರುವ ಸಮಸ್ಯೆ ಇದ್ದವರು ಮೊನಾಕ್ಸಾಡೈಲ್ ಸೇರಮ್​ ಬಳಸುವುದು ಕಾಮನ್ ಆದ್ರೆ ಮೊನಕ್ಷೈಡಲ್​ಗಿಂತ ತುಳಸಿಯಲ್ಲಿ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟುವ ಹಾಗೂ ಕೂದಲನ್ನು ವಾಪಸ್ಸು ಬೆಳೆಸುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ.

publive-image

ಇದು ಮಾತ್ರವಲ್ಲ ತುಳಸಿ ಎಲೆಯಲ್ಲಿ ಇನ್ನೂ ಹಲವು ಔಷಧಿಯ ಗುಣಗಳು ಇವೆ ತೂಕದ ಸಮತೋಲನ ಕಾಪಾಡುವ, ಒತ್ತಡ ನಿವಾರಿಸುವ, ಮಾನಸಿಕ ಸಮಸ್ಯೆಗಳಿಗೂ ಕೂಡ ತುಳಸಿಯನ್ನು ಸೇವಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:ಕರಿಮೆಣಸಿನಲ್ಲಿದೆ ಹಲವು ಆರೋಗ್ಯಕಾರಿ ಅಂಶಗಳು; ಯಾವೆಲ್ಲಾ ಸಮಸ್ಯೆಗಳಿಗೆ ರಾಮಬಾಣ ಗೊತ್ತಾ?

ಇನ್ನು ಕೇಶಕಾಂತಿಯನ್ನು ಕಾಪಾಡುವಲ್ಲಿ ತುಳಸಿ ಎಷ್ಟು ಪ್ರಮುಖ ಅಂದ್ರೆ ತಲೆಯ ಹೊಟ್ಟು (Dandruff)ನ್ನು ಸರಳವಾಗಿ ತೊಡೆದುಹಾಕುವಲ್ಲಿ ತುಳಸಿ ರಾಮಬಾಣ. ಇದು ಮಾತ್ರವಲ್ಲ ತುಳಸಿ ಎಲೆಗಳಿಂದ ಫೇಸಿಯಲ್ ಮಾಸ್ಕ್​, ಹೇರ್ ಮಾಸ್ಕ್ ಮಾಡಿಕೊಳ್ಳುವುದರಿಂದ ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಎರಡು ಟೇಬಲ್ ಸ್ಪೂನ್ ತುಳಸಿ ಎಲೆಯ ಪುಡಿ ಹಾಗೂ 2 ಟೆಬಲ್ ಸ್ಪೂನ್​ ಕೊಬ್ಬರಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವಿಕೆ, ಹೊಟ್ಟಿನ ಸಮಸ್ಯೆಯನ್ನು ನಿರ್ಮೂಲನೆ ಮಾಡಬಹುದು.

ತುಳಸಿ ಎಲೆಯಿಂದ ನಿತ್ಯ ಟೀ ಮಾಡಿಕೊಂಡು ಕುಡಿಯುವದರಿಂದ ಅಲರ್ಜಿಯಂತ ಸಮಸ್ಯೆಗಳು ದೂರ ಮಾಡಬಹುದು. ಕೆಮ್ಮು ನೆಗಡಿ, ಕಫದಂತ ಸಮಸ್ಯೆಗಳು ಹಾಯುವುದಿಲ್ಲ.ಇಂತಹ ಹಲವು ಆರೋಗ್ಯಕರ ಪ್ರಯೋಜನಗಳು ಇರುವುದರಿಂದ ತುಳಸಿಯನ್ನು ವೃಂದಾ ದೇವಣಿ ಎಂದೇ ಕರೆಯುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment