/newsfirstlive-kannada/media/post_attachments/wp-content/uploads/2025/05/PHONE.jpg)
ಮಳೆಗಾಲ ಶುರುವಾಗಿದೆ. ಸ್ಮಾರ್ಟ್​ಫೋನ್​ಗಳ ಚಿಂತೆ ಸಹಜ! ಯಾವುದೋ ಒಂದು ರೀತಿಯಲ್ಲಿ ಮೊಬೈಲ್​​ಗೆ ನೀರು ಸೇರುವ ಆತಂಕ ಇದ್ದೇ ಇದೆ. ಇತ್ತೀಚಿನ ಬಹುತೇಕ ಫೋನ್​ಗಳು ವಾಟರ್​ಪ್ರೂಫ್ ಹೊಂದಿವೆ.
ಅವು ಜಲನಿರೋಧಕವಾಗಿದ್ದರೂ ಫೋನ್‌ಗಳಿಗೆ ನೀರು ಸೇರೋದ್ರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು. ಕೆಲವೊಮ್ಮೆ ನೀರು ಬಿದ್ದಾಗ ಬಟ್ಟೆಯಿಂದ ಒರೆಸುತ್ತೇವೆ. ಆದರೆ ಈ ಟೆಕ್ನಿಕ್ ಸರಿಯಾಗಿ ವರ್ಕೌಟ್ ಆಗಲ್ಲ.
ಏನು ಮಾಡಬೇಕು..?
ಮೊದಲು ನೀವು ಬಳಸುತ್ತಿರುವ ಫೋನ್ ವಾಟರ್​ಪ್ರೂಫ್ ಹೊಂದಿದೆಯೇ ಎಂದು ಕಂಡುಕೊಳ್ಳಿ. ಇದಕ್ಕಾಗಿ ಫೋನ್‌ನ ಐಪಿ ರೇಟಿಂಗ್ ಪರಿಶೀಲಿಸಬೇಕು. ಫೋನ್ ಖರೀದಿಸುವಾಗ IP67, IP68, IPX8 ನಂತಹ ವಿಭಿನ್ನ ರೇಟಿಂಗ್‌ಗಳ ಬಗ್ಗೆ ಕೇಳಿರಬಹುದು. IP68 ರೇಟಿಂಗ್ ಹೊಂದಿರುವ ಫೋನ್ 30 ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಯಾವುದೇ ಹಾನಿಯಾಗಲ್ಲ.
ಒಂದು ವೇಳೆ ನಿಮ್ಮ ಫೋನಿನಲ್ಲಿ ವಾಟರ್​​ಪ್ರೂಫ್ ವ್ಯವಸ್ಥೆ ಇಲ್ಲದಿದ್ರೆ, ಒದ್ದೆಯಾಗಲು ಬಿಡಬೇಡಿ. ನೀರು ಹೋದರೆ ಹಾನಿಯಾಗಬಹುದು. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತದೆ.
ಮಳೆಗಾಲದಲ್ಲಿ ಫೋನ್​​ಗಾಗಿ ವಿಶೇಷ ವಾಟರ್​ಪ್ರೂಫ್ ಪೌಚ್ ಪಡೆಯಿರಿ. ವಿಶೇಷ ಪ್ಲಾಸ್ಟಿಕ್ ಕವರ್ ಮೂಲಕ ನಿಮ್ಮ ಫೋನ್ ರಕ್ಷಿಸಿಕೊಳ್ಳಬಹುದಾಗಿದೆ. ವಾಟರ್​​ಪ್ರೂಫ್ ಕವರ್​ನೊಂದಿಗೆ ಮೊಬೈಲ್ ರಕ್ಷಣೆ ಮಾಡಿಕೊಂಡರೆ ಫೋನ್ ಒದ್ದೆಯಾದರೂ ಸಮಸ್ಯೆ ಆಗಲ್ಲ.
ಇದನ್ನೂ ಓದಿ: RCB vs PBKS ಪಂದ್ಯ​.. ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದೇನು..?
ವಾಟರ್​​ಪ್ರೂಫ್ ಕವರ್ ಹೊಂದಿದ್ದರೂ ಫೋನ್ ಸುಲಭವಾಗಿ ಬಳಸಬಹುದು. ಆ ಕವರ್​ಗಳು ಪಾರದರ್ಶಕವಾಗಿರೋದ್ರಿಂದ ಮೊಬೈಲ್​ ಅನ್ನ ಸುಲಭವಾಗಿ ಬಳಸಬಹುದಾಗಿದೆ. ವಿವಿಧ ರೀತಿಯ ವಾಟರ್​​ಪ್ರೋಫ್ ಕವರ್​​ಗಳು ಮೊಬೈಲ್ ಅಂಗಡಿಯಲ್ಲಿ ಸಿಗುತ್ತವೆ. ಇ-ಕಾಮರ್ಸ್ ವೆಬ್‌ಸೈಟ್‌ನಿಂದಲೂ ಖರೀದಿಸಬಹುದಾಗಿದೆ.
ಅದಕ್ಕಾಗಿ 300 ರೂಪಾಯಿಗಳವರೆಗೆ ಖರ್ಚು ಮಾಡಿದರೆ ಫೋನ್ ನೀರಿನಿಂದ ಮಾತ್ರವಲ್ಲದೆ ಧೂಳು ಮತ್ತು ಕೊಳೆಯಿಂದಲೂ ರಕ್ಷಿಸಬಹುದು. ಮಳೆಯಲ್ಲಿ ಫೋನ್ ಬಳಸಿದ ನಂತರ ಒಣ ಬಟ್ಟೆಯಿಂದ ಫೋನ್ ಚೆನ್ನಾಗಿ ಒರೆಸಿ. ಚಾರ್ಜಿಂಗ್ ಪೋರ್ಟ್ ಮತ್ತು ಹೆಡ್‌ಫೋನ್ ಜ್ಯಾಕ್‌ನಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳಿ.
ಇದನ್ನೂ ಓದಿ: ಆರ್​ಸಿಬಿಗೆ ಐದು ವೀಕ್ನೆಸ್.. ಕೊಂಚ ಯಾಮಾರಿದ್ರೂ ಗೆಲುವು ಕಷ್ಟ, ಇರಲಿ ಎಚ್ಚರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ