/newsfirstlive-kannada/media/post_attachments/wp-content/uploads/2025/01/TEA-WATER.jpg)
ಕೂದಲು ಉದುರುವಿಕೆ ಅನ್ನೋದು ಇಂದಿನ ದಿನಮಾನದಲ್ಲಿ ಸಾಮಾನ್ಯವಾಗಿ ಹೋಗಿದೆ. ಇಂತಹುದೇ ವಯಸ್ಸಿನವರುವಂತಲ್ಲ ಎಲ್ಲ ವಯೋಮಾನದವರಿಗೂ ಈ ಸಮಸ್ಯೆ ಕಾಮನ್ ರೀತಿ ಆಗಿ ಹೋಗಿದೆ. ಆದ್ರೆ ಸದ್ಯ ಒಂದು ಮನೆಮದ್ದಿನಿಂದ ನೀವು ನಿಮ್ಮ ತಲೆಕೂದಲನ್ನು ತೊಳೆದಲ್ಲಿ ಹೇರ್ಫಾಲ್ ನಿಲ್ಲಿಸಬಹುದು.
ಚಹಾದ ನೀರಿನಿಂದ ನೀವು ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆದರೆ, ಕೂದಲು ಉದುರುವಿಕೆ ಬೇಗ ನಿಲ್ಲುತ್ತದೆ ಹಾಗೂ ತಲೆ ಬೋಳಾಗುವುದರಿಂದಲೂ ನೀವು ಪಾರಾಗಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ವಿಶ್ವದಲ್ಲೇ ಅತಿ ಹೆಚ್ಚು ಸ್ನಾನ ಮಾಡುವವರ ದೇಶ ಯಾವುದು? ದಿನಕ್ಕೆ ಎಷ್ಟು ಬಾರಿ ಗೊತ್ತಾ?
ಪ್ರಮುಖವಾಗಿ ಬ್ಲ್ಯಾಕ್ ಮತ್ತು ಗ್ರೀನ್ ಟೀ ಇವು ಹೆಚ್ಚು ನ್ಯೂಟ್ರಿಷಿಯನ್ ಹೊಂದಿರುತ್ತವೆ. ಇವುಗಳು ಹೊಂದಿದ ನ್ಯೂಟ್ರಿಷನ್ಗಳ ಅಂಶ ಕೂದಲಿನ ಆರೋಗ್ಯಕ್ಕೆ ತುಂಬಾ ಸಹಾಯಕ. ಕೆಲವು ಪದಾರ್ಥಗಳನ್ನು ಟೀ ವಾಟರ್ನಲ್ಲಿ ಹಾಕಿ ಬಳಸುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ.
ಕ್ಯಾಟೆಚಿನ್ಸ್: ಈ ಆ್ಯಂಟಿಆಕ್ಸಿಡೆಂಟ್ಗಳು ಕೂದಲಿನೊಂದಿಗೆ ಸಂಪರ್ಕ ಹೊಂದಿರುವ dihydrotestosterone ಎಂಬ ಹಾರ್ಮೋನ್ನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಕಾಫೀನ್: ಇದು ಪ್ರಮುಖವಾಗಿ ಬ್ಲ್ಯಾಕ್ ಹಾಗೂ ಗ್ರೀನ್ ಟೀನಲ್ಲಿ ಕಂಡು ಬರುತ್ತದೆ. ಕಾಫೀನ್ hair follicles ಗಳನ್ನು ಉತ್ತೇಜಿಸುವ ಮೂಲಕ ಕೂದಲಿನ ದೃಢವಾದ ಬೆಳವಣಿಗೆಗೆ ಸಹಾಯಕವಾಗುತ್ತದೆ.
ಪಾಲಿಪೆನೊಲ್ಸ್: ಟೀನಲ್ಲಿರುವ ಈ ಅಂಶ ನೆತ್ತಿಯಲ್ಲಿ ರಕ್ತಪರಿಚಲನೆಯು ಸರಿಯಾಗಿ ಆಗುವಂತೆ ನೋಡಿಕೊಳ್ಳೂತ್ತದೆ. ಅದು ಮಾತ್ರವಲ್ಲ ಕೂದಲಿನ ಆರೋಗ್ಯಕ್ಕೆ ಬೇಕಾಗಿರುವ ಸಮರ್ಪಕ ನ್ಯೂಟ್ರಿಯಂಟ್ಸ್ಗಳನ್ನು ಪೂರೈಸುತ್ತದೆ
ವಿಟಮಿನ್ ಸಿ ಮತ್ತು ಇ: ಟೀ ನಲ್ಲಿರುವ ಈ ಪೋಷಕಾಂಶಗಳು ಕೂದಲು ಸೀಳುವಿಕೆ ಹಾಗೂ ಇತರ ಹಾನಿಗಳನ್ನು ತಪ್ಪಿಸುತ್ತದೆ. ಟೀ ವಾಟರ್ನಿಂದ ಕೂದಲುಗಳನ್ನು ತೊಳೆಯುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಕೂದಲಿಗೆ ಹೊಸ ಹೊಳಪು ನೀಡುತ್ತದೆ.
ಇದನ್ನು ಉಪಯೋಗಿಸುವುದು ಹೇಗೆ ಅಂತ ನೋಡುವುದಾದ್ರೆ
ಎರಡರಿಂದ ಮೂರು ಬ್ಯಾಗ್ ಗ್ರೀನ್ ಇಲ್ಲವೇ ಬ್ಲ್ಯಾಕ್ ಟೀ ತೆಗೆದುಕೊಳ್ಳಿ
2 ರಿಂದ 3 ಕಪ್ ನೀರು ತೆಗೆದುಕೊಳ್ಳಿ ಬೇಕಾದರೆ ಇದರಲ್ಲಿ ಲೆವೆಂಡರ್ ಇಲ್ಲವೇ ರೋಸ್ಮೇರಿ ಎಸೆನ್ಷಿಯಲ್ ಆಯಿಲ್ ಬಳಸಬಹುದು
ಟೀ ಪುಡಿ ಹಾಕಿದ ನೀರನ್ನು ಐದರಿಂದ ಹತ್ತು ನಿಮಿಷಗಳ ಕಾಲ ಕುದಿಸಿ. ನೀವು ಸ್ಟಾಂಗ್ ಟೀಗಾಗಿ ಎಷ್ಟು ನಿಮಿಷ ಟಿ ಪುಡಿಯನ್ನು ಕುದಿಸುತ್ತಿರೋ ಅಷ್ಟು ನಿಮಿಷ ಕುದಿಸಿ.
ಇದನ್ನೂ ಓದಿ:ಭಾರತೀಯರು ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು? ನಮ್ಮ ಪುರಾತನ ಆಹಾರ ಕ್ರಮ ಹೇಗಿತ್ತು?
ಚಹಾದ ನೀರನ್ನು ಆರಲು ತಂಪಾದ ಜಾಗದಲ್ಲಿ ಇಡಿ, ಯಾವುದೇ ಕಾರಣಕ್ಕೂ ಬಿಸಿ ಚಹಾದ ನೀರಿನಿಂದ ಕೂದಲು ತೊಳೆಯಬೇಡಿ.
ಬಿಸಿ ಆರಿದ ಮೇಲೆ ಆ ಚಹಾದ ನೀರನ್ನು ಒಂದು ಸ್ಪ್ರೇ ಬಾಟಲ್ನಲ್ಲಿ ತುಂಬಿ ಚೆನ್ನಾಗಿ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ ಬಳಿಕ ಚೆನ್ನಾಗಿ ಮಸಾಜ್ ಮಾಡಿ. ನಂತರ ಒಂದು ಅರ್ಧ ಗಂಟೆಯ ಬಳಿಕ ಸಲ್ಫೆಡ್ ಫ್ರೀ ಶಾಂಪೂವಿನಿಂದ ನಿಮ್ಮ ಕೂದಲಗಳನ್ನು ತೊಳೆಯಿರಿ ಈ ರೀತಿ ಮಾಡುವುದರಿಂದ ನಿಮ್ಮ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ