ಬದುಕಿನ ನಯನ ಚೆನ್ನಾಗಿದ್ದರೆ ಮಾತ್ರ ಜೀವನ.. ಈ ಅಭ್ಯಾಸ ನಿಮಗೆ ಇದೆಯಾ?

author-image
Ganesh
Updated On
ಬದುಕಿನ ನಯನ ಚೆನ್ನಾಗಿದ್ದರೆ ಮಾತ್ರ ಜೀವನ.. ಈ ಅಭ್ಯಾಸ ನಿಮಗೆ ಇದೆಯಾ? 
Advertisment
  • ದೃಷ್ಟಿ ಸರಿಯಾಗಿಲ್ಲದಿದ್ರೆ ಯಾವುದೇ ಕೆಲಸ ನಡೆಯಲ್ಲ
  • ಕಣ್ಣಿನ ಸಮಸ್ಯೆಗಳು ಹೆಚ್ಚಾಗಲು ಕಾರಣಗಳೇನು ಗೊತ್ತಾ?
  • ಕಣ್ಣುಗಳ ಆರೋಗ್ಯಕ್ಕೆ ನಾವು ನಿತ್ಯ ಏನು ಮಾಡಬೇಕು?

ಕಣ್ಣುಗಳಿಗೆ ದೃಷ್ಟಿ ಬಹಳ ಮುಖ್ಯ. ಅವು ಸರಿಯಾಗಿದ್ದರೆ ಏನು ಬೇಕಾದರೂ ಮಾಡಬಹುದು. ದೃಷ್ಟಿ ಸರಿಯಾಗಿ ಇಲ್ಲದಿದ್ದರೆ ಯಾವುದೇ ಕೆಲಸ ನಡೆಯಲ್ಲ. ಅದಕ್ಕಾಗಿ ಕಣ್ಣುಗಳು ದೇಹದ ಪ್ರಮುಖ ಅಂಗಗಳಾಗಿವೆ. ಈ ವಿಚಾರ ಗೊತ್ತಿದ್ದರೂ ನಮ್ಮ ನಿರ್ಲಕ್ಷ್ಯದಿಂದ ಸಮಸ್ಯೆ ತಂದುಕೊಳ್ತೇವೆ. ಕಣ್ಣುಗಳ ಆರೋಗ್ಯಕ್ಕೆ ನೀವು ಏನು ಮಾಡಬೇಕು ಅನ್ನೋ ವಿವರ ಇಲ್ಲಿದೆ.

ಆದಷ್ಟು ಸ್ಕ್ರೀನಿಂಗ್ ತಪ್ಪಿಸಿಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಲು ಸ್ಕ್ರೀನಿಂಗ್ ಕಾರಣ. ಅತಿಯಾಗಿ ಸೆಲ್ ಫೋನ್​, ಲ್ಯಾಪ್​ಟಾಪ್, ಟಿವಿ ನೋಡುವುದರಿಂದ ತೊಂದರೆ ಆಗ್ತಿದೆ. ರೇಡಿಯೇಶನ್​ನಿಂದಾಗಿ ಕಣ್ಣಿನ ಸಮಸ್ಯೆ ಉಂಟಾಗುತ್ತಿದೆ. ಇದು ಕಣ್ಣುಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ. ಕಣ್ಣುಗಳು ಒಣಗುತ್ತವೆ, ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಸ್ಕ್ರೀನಿಂಗ್ ಅವಧಿಯನ್ನು ಕಡಿಮೆ ಮಾಡಿಕೊಳ್ಳಿ.

ಇದನ್ನೂ ಓದಿ:ಕಪ್ಪು ಒಣದ್ರಾಕ್ಷಿ ತಿನ್ನಬೇಕೋ, ತಿನ್ನಬಾರದೋ..? ಇವು ಆರೋಗ್ಯಕ್ಕೆ ಹೇಗೆ ಉಪಯೋಗ?

publive-image

ಸನ್​ಗ್ಲಾಸ್ ಧರಿಸಿ
ಕಣ್ಣುಗಳು ಆರೋಗ್ಯವಾಗಿರಲು ಸನ್ ಗ್ಲಾಸ್ ಧರಿಸಬೇಕು. ಹೊರಗಿನಿಂದ ಬರುವ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು ಸನ್​ ಗ್ಲಾಸ್ ಧರಿಸಬೇಕು. ಇದರಿಂದ ಸೂರ್ಯನ ಬೆಳಕು ನೇರವಾಗಿ ಕಣ್ಣಿಗೆ ಬೀಳುವುದಿಲ್ಲ. ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.

ನೀರು ಕುಡಿಯಿರಿ
ಕಣ್ಣುಗಳು ಯಾವಾಗಲೂ ತೇವವಾಗಿರುವುದು ಅವಶ್ಯಕ. ನಿಮ್ಮ ಕಣ್ಣುಗಳನ್ನು ತೇವಾಂಶದಿಂದ ಇರಿಸಿಕೊಳ್ಳಲು ಹೆಚ್ಚು ನೀರನ್ನು ಕುಡಿಯಿರಿ. ನೀರು ಕುಡಿಯುವುದರಿಂದ ಕಣ್ಣುಗಳು ಒಣಗುವುದಿಲ್ಲ. ಕಣ್ಣಿನ ನಯಗೊಳಿಸುವಿಕೆಯನ್ನೂ ಕಾಪಾಡಿಕೊಳ್ಳಬಹುದು.

publive-image

ಟೆಸ್ಟ್ ಮಾಡಿಸಿಕೊಳ್ಳಿ
ನಿಯಮಿತವಾಗಿ ಕಣ್ಣಿನ ಪರೀಕ್ಷೆಗಳನ್ನು ಮಾಡಿಕೊಳ್ಳಬೇಕು. ಕಣ್ಣುಗಳಲ್ಲಿ ಏನಾದರೂ ದೋಷ ಕಂಡು ಬಂದರೆ ಕೂಡಲೇ ಸರಿಪಡಿಸಿಕೊಳ್ಳಬಹುದು. ಇಲ್ಲದಿದ್ದರೆ ಅದು ದೊಡ್ಡದಾಗಿ ಬೆಳೆಯುವ ಅಪಾಯವಿದೆ.

ಇದನ್ನೂ ಓದಿ:ಈ ಹತ್ತು ಆಹಾರಗಳ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ? ಆರೋಗ್ಯಕ್ಕೆ ತುಂಬಾ ಅಪಾಯ!

ಆಹಾರ
ಕಣ್ಣುಗಳು ಆರೋಗ್ಯವಾಗಿರಲು ಸರಿಯಾದ ಆಹಾರ ಸೇವಿಸಬೇಕು. ನಾವು ಸೇವಿಸುವ ಆಹಾರದಿಂದ ಕಣ್ಣುಗಳು ಶೇಕಡಾ 75 ರಷ್ಟು ಆರೋಗ್ಯಕರವಾಗಿರುತ್ತವೆ. ಹಾಗೆಯೇ ರಾತ್ರಿಯ ನಿದ್ದೆಯೂ ಅತ್ಯಗತ್ಯ. ಸರಿಯಾಗಿ ನಿದ್ದೆ ಮಾಡಿದರೆ ಮಾತ್ರ ಕಣ್ಣುಗಳು ಚೆನ್ನಾಗಿ ಕಾಣುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment