Advertisment

ವಿನೇಶ್‌ ಫೋಗಟ್‌ 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ? ಒಲಿಂಪಿಕ್ಸ್‌ನಲ್ಲೂ ಕುಸ್ತಿಪಟುಗೆ ಮೋಸ ಆಯ್ತಾ?

author-image
admin
Updated On
ವಿನೇಶ್‌ ಫೋಗಟ್‌ 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ? ಒಲಿಂಪಿಕ್ಸ್‌ನಲ್ಲೂ ಕುಸ್ತಿಪಟುಗೆ ಮೋಸ ಆಯ್ತಾ?
Advertisment
  • ಚಿನ್ನದ ಪದಕ ಗೆಲ್ಲುವ ವಿನೇಶ್ ಫೋಗಟ್ ಕನಸು ನುಚ್ಚುನೂರು
  • 50 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ನಿನ್ನೆ ವೀರಾವೇಶದ ಆಟ ಪ್ರದರ್ಶನ
  • ರಾತ್ರಿ 50 ಕೆ.ಜಿಯ ಒಳಗಡೆ ತೂಕವನ್ನು ಹೊಂದಿದ್ದ ವಿನೇಶ್ ಫೋಗಟ್!

ಪ್ಯಾರಿಸ್‌: ವಿನೇಶ್ ಫೋಗಟ್‌ ಚಿನ್ನದ ಪದಕ ಗೆದ್ದೇ ಗೆಲ್ತಾರೆ. ಗೆದ್ದು ಬಾ ವಿನೇಶ್‌ ಅನ್ನೋ ಶುಭಾಶಯ ನಿನ್ನೆ ರಾತ್ರಿಯಿಂದಲೇ ಭಾರತದ ಮೂಲೆ, ಮೂಲೆಯಲ್ಲಿ ಮಾರ್ದನಿಸಿತ್ತು. ಆದರೆ ಬೆಳಗ್ಗೆಯಾಗುತ್ತಲೇ ಇಂತಹದೊಂದು ಕಹಿಸುದ್ದಿ ಕೇಳುತ್ತೇವೆ ಅನ್ನೋ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ ಕುಸ್ತಿಪಂದ್ಯದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಭಾರತದ ಮಹಿಳಾ ಕುಸ್ತಿಪಟು ಒಲಿಂಪಿಕ್ಸ್‌ನಿಂದಲೇ ಅನರ್ಹರಾಗಿದ್ದಾರೆ.

Advertisment

ಇದನ್ನೂ ಓದಿ: ವಿನೇಶ್ ಪೋಗಟ್ ಏನೇನ್‌ ತಿಂತಾರೆ? ಸಿಂಪಲ್​ ಫುಡ್‌ನಿಂದ ಹರಿಯಾಣದ ಕುಸ್ತಿಪಟು ಸ್ಟ್ರಾಂಗ್​​ ಆಗಿದ್ದು ಹೇಗೆ? 

50 ಕೆ.ಜಿ ವಿಭಾಗದ ವಿಭಾಗದ ಕುಸ್ತಿಯಲ್ಲಿ ಫೈನಲ್ ಪ್ರವೇಶಿದ್ದ ವಿನೇಶ್ ಫೋಗಟ್‌ ಅವರು ಅನರ್ಹರಾಗಿದ್ದು ಖಚಿತವಾಗಿದೆ. ಒಲಿಂಪಿಕ್ಸ್ ಆಡಳಿತ ಮಂಡಳಿ ಈ ಶಾಕಿಂಗ್ ಸುದ್ದಿಯನ್ನು ಅಧಿಕೃತವಾಗಿ ಪ್ರಕಟ ಮಾಡಿದೆ. ವಿನೇಶ್ ಫೋಗಟ್ ಅವರ ಕನಸು ನುಚ್ಚು ನೂರಾಗಿದ್ದು, ಕೋಟ್ಯಾಂತರ ಕ್ರೀಡಾಭಿಮಾನಿಗಳು ತೀವ್ರ ಆಘಾತಗೊಂಡಿದ್ದಾರೆ.

publive-image

ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಅವರು ಕೇವಲ 100 ಗ್ರಾಂ ತೂಕದಿಂದ ಪದಕ ವಂಚಿತರಾಗಿದ್ದಾರೆ. 50 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ನಿನ್ನೆ ವೀರಾವೇಶದ ಆಟ ಪ್ರದರ್ಶಿಸಿ ವಿನೇಶ್ ಫೈನಲ್‌ ಪ್ರವೇಶಿಸಿದ್ದರು. ಆದರೆ ನಿನ್ನೆ 50 ಕೆ.ಜಿಯ ಒಳಗಡೆ ತೂಕವನ್ನ ಹೊಂದಿದ್ದ ವಿನೇಶ್ ಫೋಗಟ್ ಅವರು ಇವತ್ತು ಬೆಳಗ್ಗೆ ಪರಿಶೀಲನೆಯ ವೇಳೆ 100 ಗ್ರಾಂ ತೂಕ ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ಜಸ್ಟ್ 100 ಗ್ರಾಂ ತೂಕ ಹೆಚ್ಚಳದಿಂದಾಗಿ ವಿನೇಶ್ ಫೋಗಟ್ ಅವರು ಒಲಿಂಪಿಕ್ ಪದಕದಿಂದ ಮಿಸ್ ಆಗಿದ್ದಾರೆ.

Advertisment

publive-image

ನಿನ್ನೆ ರಾತ್ರಿ ಫೈನಲ್ ಪ್ರವೇಶಿಸಿದ ಖುಷಿಯಲ್ಲಿದ್ದ ವಿನೇಶ್ ಫೋಗಟ್‌ ಅವರು ಇಂದು ಬೆಳಗ್ಗೆ ಒಲಿಂಪಿಕ್ಸ್‌ನಿಂದಲೇ ಅನರ್ಹಗೊಂಡಿದ್ದಾರೆ. ಚಿನ್ನದ ಪದಕ ಗೆಲ್ಲುವ ಉತ್ಸಾಹದಲ್ಲಿದ್ದ ವಿನೇಶ್ ಅವರು ಇವತ್ತು ಭಾರತೀಯ ಕಾಲಮಾನ ರಾತ್ರಿ 9.45ಕ್ಕೆ ಇದ್ದ ಕುಸ್ತಿಯ ಫೈನಲ್ಸ್ ಪಂದ್ಯ ಆಡಬೇಕಿತ್ತು. ವಿನೇಶ್ ಫೋಗಟ್‌ ಅನರ್ಹರಾಗಿರುವುದಕ್ಕೆ ಒಲಿಂಪಿಕ್ಸ್‌ನಲ್ಲೂ ಏನಾದರೂ ಮೋಸ ಆಯ್ತಾ ಅನ್ನೋ ಮಾತುಗಳು ಕೇಳಿ ಬಂದಿದೆ.

ಇದನ್ನೂ ಓದಿ:ದಿಟ್ಟ ಹೋರಾಟಕ್ಕೆ ಸಂದ ಜಯ.. 82 ಬಾರಿ ಗೆದ್ದ ಕುಸ್ತಿಪಟುಗೆ ಮಣ್ಣು ಮುಕ್ಕಿಸಿದ ವಿನೇಶ್ ಪೋಗಟ್!

100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ?
ವಿನೇಶ್ ಫೋಗಟ್ ಅವರು ನಿನ್ನೆ ಕ್ವಾರ್ಟರ್‌ ಫೈನಲ್, ಸೆಮಿಫೈನಲ್ ಆಡುವಾಗ 50 ಕೆಜಿ ತೂಕ ಇದ್ದರು. ನಿನ್ನೆ ರಾತ್ರಿ 50 ಕೆಜಿ ಇದ್ದ ವಿನೇಶ್ ಫೋಗಟ್ 150 ಗ್ರಾಂ ತೂಕ ಹೆಚ್ಚಿಸಿಕೊಂಡಿದ್ದು ಹೇಗೆ ಅನ್ನೋದು ಪ್ರಮುಖವಾಗಿದೆ. ಒಂದೇ ದಿನದಲ್ಲಿ 2 ಕೆಜಿ ತೂಕ ಜಾಸ್ತಿ ಆದ ವಿನೇಶ್ ಫೋಗಟ್ ಅವರು ಫೈನಲ್ ಪಂದ್ಯಕ್ಕೆ ಸಜ್ಜಾಗಿದ್ದಾರೆ. ನಿನ್ನೆ ಸೆಮಿಫೈನಲ್‌ ಪಂದ್ಯ ಮುಗಿದ ಮೇಲೆ ಊಟ ಮಾಡಿದ ಫೋಗಟ್ ಅವರು ದೇಹದ ತೂಕ ನೋಡಿ ಶಾಕ್ ಆಗಿದ್ದಾರೆ.

Advertisment

ಇದನ್ನೂ ಓದಿ: ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು.. ದೇಹದ ತೂಕ ದಿಢೀರ್‌ ಹೆಚ್ಚಾಗಲು ಕಾರಣವೇನು? ಅಸಲಿಗೆ ಆಗಿದ್ದೇನು? 

ವಿನೇಶ್ ಫೋಗಟ್ ಅವರು ನಿನ್ನೆ ಇಡೀ ರಾತ್ರಿ ಮಲಗೇ ಇಲ್ಲ. ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್‌ ಮಾಡಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ರಾತ್ರಿ ಪೂರ್ತಿ ವರ್ಕೌಟ್ ಮಾಡಿದ ವಿನೇಶ್ ಫೋಗಟ್ ಅವರು 1.85 ಕಿ.ಲೋ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಆದರೆ 150 ಗ್ರಾಂ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಈ 150 ಗ್ರಾಂ ತೂಕ ಕಡಿಮೆಯಾಗದ ಹಿನ್ನೆಲೆಯಲ್ಲಿ ವಿನೇಶ್ ಫೋಗಟ್ ಅವರು 50 ಕೆಜಿ 150 ಗ್ರಾಂಗೆ ತಲುಪಿದ್ದಾರೆ. 150 ಗ್ರಾಂ ತೂಕ ಹೆಚ್ಚಾದ ಹಿನ್ನೆಲೆಯಲ್ಲಿ ವಿನೇಶ್ ಫೋಗಟ್ ಅವರು ಒಲಿಂಪಿಕ್ಸ್ ಫೈನಲ್ ಪಂದ್ಯದಿಂದಲೇ ಅನರ್ಹರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment