/newsfirstlive-kannada/media/post_attachments/wp-content/uploads/2025/05/RCB-16.jpg)
ಪಂಜಾಬ್​ನ ಹೋಮ್​​ಗ್ರೌಂಡ್​ನಲ್ಲಿ ನಿನ್ನೆ ನಡೆದ್ದು ಆರ್​​ಸಿಬಿಯ ರಾಯಲ್​ ಮೆರೆದಾಟ. ಆರ್​​ಸಿಬಿ ಸಿಂಹಗಳು ಎದುರಾಳಿ ಪಡೆಯ ಭದ್ರಕೋಟೆಯಲ್ಲಿ ಘರ್ಜಿಸ್ತಾ ಇದ್ರೆ, ಪಂಜಾಬ್​ ಕಿಂಗ್ಸ್​ ತಂಡದ ಶೇರ್​ಗಳು ಬಿಲ ಸೇರಿದ್ವು. ಗ್ರೌಂಡ್​​ಗಿಳಿದ ಮೊದಲ ಕ್ಷಣದಿಂದ ಹಿಡಿದು ಅಂತಿಮ ಹಂತದವರೆಗೆ ಆರ್​​ಸಿಬಿಯದ್ದೇ ದರ್ಬಾರ್​ ನಡೆಯಿತು.
ಪವರ್​ ಪ್ಲೇನಲ್ಲಿ ಪಂಚ್​..
ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಆರ್​​ಸಿಬಿ ರಜತ್​ ಪ್ಲಾನ್ ಆರಂಭದಲ್ಲೇ ಸಕ್ಸಸ್​ ಕಾಣ್ತು. ಪಂಜಾಬ್​ ಓಪನರ್​ಗಳು ಬಾಲ ಬಿಚ್ಚೋಕೆ ಆರ್​​ಸಿಬಿ ಬೌಲರ್ಸ್​ ಬಿಡಲಿಲ್ಲ. 2ನೇ ಓವರ್​ನಲ್ಲೇ ದಯಾಳ್​ ಮೊದಲ ಬಲಿ ಪಡೆದ್ರು. ಪ್ರಿಯಾಂಶ್​ ಆರ್ಯ 7 ರನ್​ಗಳಿಸಿ ಔಟಾದ್ರೆ ಪ್ರಭ್​ ಸಿಮ್ರನ್​​ ಸಿಂಗ್​ 18 ರನ್​ಗಳಿಸಿ ನಿರ್ಗಮಿಸಿದ್ರು.
ಇದನ್ನೂ ಓದಿ: ಭಾರೀ ಮಳೆ.. ಕರ್ನಾಟಕದ ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ..
ಕಮ್​ಬ್ಯಾಕ್​ ಪಂದ್ಯದಲ್ಲಿ ಫುಲ್​ ಜೋಷ್​ನಲ್ಲಿ ಹೇಜಲ್​ವುಡ್​ ಬೌಲಿಂಗ್​ ಮಾಡಿದ್ರು. ತಂಡಕ್ಕೆ ಚೇತರಿಕೆ ನೀಡುವ ಲೆಕ್ಕಾಚಾರದಲ್ಲಿದ್ದ ಜೋಸ್​ ಇಂಗ್ಲಿಸ್​, ಶ್ರೇಯಸ್​​ ಅಯ್ಯರ್​ಗೆ ಸೆಟಲ್​ ಆಗೋಕೂ ಬಿಡಲಿಲ್ಲ. ಬ್ಯಾಕ್​ ಟು ಬ್ಯಾಕ್​ ಇಬ್ಬರ ವಿಕೆಟ್​ ಉರುಳಿಸಿದ ಹೇಜಲ್​​ವುಡ್​​ ಪಂಜಾಬ್​ ಪವರ್​ ಕಟ್​ ಮಾಡಿದ್ರು. ಪಂಜಾಬ್​ 38 ರನ್​ಗೆ 4 ವಿಕೆಟ್​ ಕಳೆದುಕೊಳ್ತು.
ಸುಯಶ್​ ಶರ್ಮಾ ಸ್ಪಿನ್​ ಶಾಕ್​
7ನೇ ಓವರ್​ನ 3 ಎಸೆತದಲ್ಲಿ ಯಶ್​ ದಯಾಳ್​ ನೆಹಾಲ್​ ವಡೇರಾ ವಿಕೆಟ್​ ಉರುಳಿಸಿದ್ರು. ಆ ಬಳಿಕ ಬೌಲಿಂಗ್​ಗೆ ಬಂದ ಸುಯಶ್​ ಶರ್ಮಾ ಅಕ್ಷರಶಃ ಸ್ಪಿನ್​ ಜಾದೂ ಮಾಡಿದ್ರು. ಶಶಾಂಕ್​ ಸಿಂಗ್​, ಮುಷೀರ್​ ಖಾನ್​, ಮಾರ್ಕಸ್​ ಸ್ಟೋಯ್ನಿಸ್​​ ಮೂವರೂ ಸುಯಶ್ ಶರ್ಮಾ ಸ್ಪಿನ್​ ಖೆಡ್ಡಾಗೆ ಸುಲಭಕ್ಕೆ ಬಿದ್ರು. ಅಲ್ಲಿಗೆ 78 ರನ್​ಗಳಿಸುವಷ್ಟರಲ್ಲಿ ಪಂಜಾಬ್​ 8 ವಿಕೆಟ್​ ಕೊಳ್ತು.
10 ಓವರ್​, 101 ರನ್​.. ಪಂಜಾಬ್​ನ ಖೇಲ್​ ಖತಂ
ಸ್ಟೋಯಿನಿಸ್​ ಪತನದ ಬಳಿಕ ಕಣಕ್ಕಿಳಿದ ಹರ್ಪ್ರಿತ್​ ಬ್ರಾರ್​ ರೊಮಾರಿಯೋ ಶೆಫರ್ಡ್​ ಬೌಲಿಂಗ್​ನಲ್ಲಿ ಕಕ್ಕಾಬಿಕ್ಕಿಯಾದ್ರು. ಶೆಫರ್ಡ್​ ಹಾಕಿದ ಬಾಲ್​ ಹೇಗ್​ ಬಂದು ವಿಕೆಟ್​ ಎಗರಿಸ್ತು ಅನ್ನೋದು ಬ್ರಾರ್​ಗೆ ಗೊತ್ತೆ ಆಗಲಿಲ್ಲ. ಅಂತಿಮ ಘಟ್ಟದಲ್ಲಿ ಹೋರಾಡಿದ ಅಜಮತುಲ್ಲಾ 18 ರನ್​ಗಳಿಸಿ ತಂಡವನ್ನ 100 ಗಡಿ ದಾಟಿಸಿದ್ರು. ಹೋರಾಟ ಹೆಚ್ಚು ಹೊತ್ತು ನಡೀಲಿಲ್ಲ. ಹೇಜಲ್​ವುಡ್​​​ ಕೊನೆಯ ವಿಕೆಟ್​ ಕಬಳಿಸಿ ಪಂಜಾಬ್​ ಆಟಕ್ಕೆ ಫುಲ್​ ಸ್ಟಾಫ್​ ಇಟ್ರು. 14.1 ಓವರ್​​ಗಳಲ್ಲಿ 101 ರನ್​ಗಳಿಸಿ ಪಂಜಾಬ್​ ಆಲೌಟ್​​ ಆಯ್ತು.
ಟಾರ್ಗೆಟ್​ ಬೆನ್ನತ್ತಿದ ಆರ್​​ಸಿಬಿ ಕೊಹ್ಲಿ ವಿಕೆಟ್​ನ ಬೇಗನೆ ಕಳೆದುಕೊಳ್ತು. 2 ಬೌಂಡರಿ ಬಾರಿಸಿದ ಕೊಹ್ಲಿ 12 ರನ್​ಗಳಿಸಿ ಆಟ ಮುಗಿಸಿದ್ರು. ಬಳಿಕ ಕಣಕ್ಕಿಳಿದ ಮಯಾಂಕ್​ ಅಗರ್​ವಾಲ್​ ಜೆಮಿಸನ್​ ಬೌಲಿಂಗ್​ ಸ್ಟ್ರಗಲ್​ ಮಾಡಿದ್ರು. ಇನ್ನೊಂದು ತುದಿಯಲ್ಲಿದ್ದ ಫಿಲ್​ ಸಾಲ್ಟ್​ ಅಬ್ಬರದ ಆಟವಾಡಿದ್ರು.
ಜೆಮಿಸನ್​ ಮೇಲೆ ಮಯಾಂಕ್-ಸಾಲ್ಟ್​ ಅಟ್ಯಾಕ್​
ಆರಂಭದಿಂದಲೂ ಅಗ್ರೆಸ್ಸಿವ್​ ಆಟವಾಡಿದ ಫಿಲ್​ ಸಾಲ್ಟ್​​ ಕ್ಲಾಸ್​ ಬೌಂಡರಿಗಳನ್ನ ಬಾರಿಸಿ ಗಮನ ಸೆಳೆದ್ರು. ಆರಂಭದಲ್ಲಿ ಕಾಟ ಕೊಟ್ಟ ಜೆಮಿಸನ್​ ಮೇಲೆ ಮಯಾಂಕ್​, ಸಾಲ್ಟ್​ 6ನೇ ಓವರ್​ನಲ್ಲಿ ಅಟ್ಯಾಕ್​ ಮಾಡಿದ್ರು. ಒಂದೇ ಓವರ್​​ನಲ್ಲಿ 21 ರನ್​ ಚಚ್ಚಿದ್ರು.
ಪಂಜಾಬ್​ಗೆ ನೀರು ಕುಡಿಸಿದ ಫಿಲ್​ ಸಾಲ್ಟ್
1 ಬೌಂಡರಿ, 2 ಸಿಕ್ಸರ್​ ಸಿಡಿಸಿ ಮಯಾಂಕ್​ ಅಗರ್​ವಾಲ್​ ಆಟ ಅಂತ್ಯಗೊಳಿಸಿದ್ರೆ, ಪಂಜಾಬ್​ಗೆ ನೀರು ಕುಡಿಸಿದ ಫಿಲ್​ ಸಾಲ್ಟ್​​ ಹಾಫ್​ ಸೆಂಚುರಿ ಸಿಡಿಸಿದ್ರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. 207 ಸ್ಟ್ರೈಕ್​ರೇಟ್​ನಲ್ಲಿ ಮಿಂಚಿದ ಫಿಲ್​ ಸಾಲ್ಟ್​​ 3 ಸಿಕ್ಸರ್​, 6 ಬೌಂಡರಿ ಬಾರಿಸಿದ್ರು. ಜಸ್ಟ್​ 27 ಎಸೆತಗಳಲ್ಲಿ ಅಜೇಯ 56 ರನ್​ಗಳಿಸಿದ್ರು.
4ನೇ ಬಾರಿಗೆ ಫೈನಲ್​ಗೆ ಎಂಟ್ರಿ
10ನೇ ಓವರ್​ನ ಕೊನೆಯ ಎಸೆತವನ್ನ ಸಿಕ್ಸರ್​ ಸಿಡಿಸಿದ ರಜತ್​ ಪಾಟಿದಾರ್​ ಆರ್​​ಸಿಬಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 60 ಎಸೆತಗಳು ಬಾಕಿ ಇರುವಂತೆ ಭರ್ಜರಿ ಜಯಭೇರಿ ಬಾರಿಸಿದ 4ನೇ ಬಾರಿಗೆ ಫೈನಲ್​ಗೆ ರಾಯಲ್​ ಎಂಟ್ರಿ ನೀಡಿತು.
ಇದನ್ನೂ ಓದಿ: ಫೈನಲ್​ಗೆ ಎಂಟ್ರಿ ಕೊಟ್ಟ ಆರ್​ಸಿಬಿ.. ಕರ್ನಾಟಕದಲ್ಲಿ ಸಂಭ್ರಮ ಹೇಗಿತ್ತು..? Photos
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ