Advertisment

13ನೇ ವಯಸ್ಸಿನಲ್ಲಿ ಸಿನಿಮಾ ಆಫರ್​; 60 ವರ್ಷದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ.. ಸರೋಜಾದೇವಿ ಸಿನಿ ಬದುಕು..

author-image
Ganesh
Updated On
13ನೇ ವಯಸ್ಸಿನಲ್ಲಿ ಸಿನಿಮಾ ಆಫರ್​; 60 ವರ್ಷದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ.. ಸರೋಜಾದೇವಿ ಸಿನಿ ಬದುಕು..
Advertisment
  • ಸ್ಯಾಂಡಲ್​ವುಡ್​ ಹಿರಿಯ ನಟಿ ಸರೋಜಾ ದೇವಿ ಇನ್ನಿಲ್ಲ
  • ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದ ಸರೋಜಾದೇವಿ
  • ಮಲ್ಲೇಶ್ವರಂನ ಮಣಿಪಾಲ್​ ಆಸ್ಪತ್ರೆಯಲ್ಲಿ ಸರೋಜಾದೇವಿ ನಿಧನ

ಸ್ಯಾಂಡಲ್​ವುಡ್​ ಹಿರಿಯ ನಟಿ, ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾದೇವಿ, ಮಲ್ಲೇಶ್ವರಂನ ಮಣಿಪಾಲ್​ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷಗಳಾಗಿತ್ತು.

Advertisment

ಭಾರತದ ಸಿನಿ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ನಟಿಯಾಗಿದ್ದ ಸರೋಜಾದೇವಿ, ಚರ್ತುಭಾಷಾ ನಟಿ ಎಂದೇ ಹೆಸರು ವಾಸಿಯಾಗಿದ್ದರು. ಸರೋಜಾ ದೇವಿ ಅವರ ಜನ್ಮನಾಮ ರಾಧಾದೇವಿ ಎಂದಾಗಿತ್ತು. ಬೈರಪ್ಪ ಗೌಡ- ರುದ್ರಮ್ಮ ದಂಪತಿಗೆ 1938 ಜನವರಿ 7ರಂದು ಬೆಂಗಳೂರಿನಲ್ಲಿ ಸರೋಜಾದೇವಿ ಮಗಳಾಗಿ ಜನಿಸಿದ್ದರು. ತಂದೆ ಪೊಲೀಸ್​ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸರೋಜಾ ದೇವಿ ಬೈರಪ್ಪ ದಂಪತಿಗೆ ನಾಲ್ಕನೇ ಮಗಳಾಗಿದ್ದರು.

ಇದನ್ನೂ ಓದಿ: Breaking: ಸ್ಯಾಂಡಲ್​​ವುಡ್​ನ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಇನ್ನಿಲ್ಲ

publive-image

ಸರೋಜಾ ದೇವಿಯನ್ನು ಅವರನ್ನು ತಾತ ದತ್ತು ನೀಡಲು ಮುಂದಾಗಿದ್ದರು. ಆದ್ರೆ ತಂದೆ ಬೈರಪ್ಪ ಅವ್ರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಸರೋಜಾ ದೇವಿಗೆ ಡ್ಯಾನ್ಸ್​ ಕಲಿಯೋದಕ್ಕೆ ಉತ್ತೇಜಿಸಿದ್ದರು. ನಟನೆಯನ್ನ ವೃತ್ತಿಯಾಗಿಸಿಕೊಳ್ಳಲು ಸಪೋರ್ಟ್​ ಮಾಡಿದ್ದು ತಂದೆಯರು. ತಾಯಿ ರುದ್ರಮ್ಮ ಸಿನಿಮಾದಲ್ಲಿ ಸ್ವಿಮ್ಮಿಂಗ್​ ಸೂಟ್​ ಮತ್ತು ಸ್ಲೀವ್​ ಲೇಸ್​ ಧರಿಸಿದಂತೆ ತಾಕೀತು ಮಾಡಿದ್ದರು. ತಾಯಿಯ ಮಾತನ್ನ ಪಾಲಿಸಿದ ಸರೋಜಾ ದೇವಿ ಯಾವತ್ತೂ ಸಿನಿಮಾದಲ್ಲಿ ಅಂತಾ ಡ್ರೇಸ್​ಗಳನ್ನ ಹಾಕಿರಲಿಲ್ಲ.

Advertisment

ಇದನ್ನೂ ಓದಿ: Breaking: ಸ್ಯಾಂಡಲ್​​ವುಡ್​ನ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಇನ್ನಿಲ್ಲ

13ನೇ ವಯಸ್ಸಿನಲ್ಲೇ ಸರೋಜಾ ದೇವಿಗೆ ಸಿನಿಮಾ ಆಫರ್​ ಬಂದಿತ್ತು. ಬಿ.ಆರ್​.ಕೃಷ್ಣಮೂರ್ತಿ ಮೊದಲು ದೇವಿಯನ್ನ ಹಾಡು ಹೇಳುವಾಗ ನೋಡಿದ್ದರು. ನಂತರ ಅವೇ ಮೊದಲು ಸಿನಿಮಾ ಆಫರ್​ ಮಾಡಿದ್ದರು. ಆದ್ರೆ ಸರೋಜಾ ದೇವಿ ಸಿನಿಮಾ ಆಫರ್​ರನ್ನ ತಿರಸ್ಕರಿಸಿದ್ದರು. ನಂತರದ ದಿನಗಳಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ನಟನೆ ಮಾಡಿದರು. 60 ವರ್ಷದಲ್ಲಿ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡರು.

publive-image
ಸ್ಯಾಂಡಲ್​ವುಡ್​ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡಿದ್ದರೆ, ಕಾಲಿವುಡ್​​ನಲ್ಲಿ ಕನ್ನಡದ ಗಿಳಿ ಎಂದು ಬಿರುದು ಬಂದಿತ್ತು. 1955ರಲ್ಲಿ ತನ್ನ 17ನೇ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ‘ಮಹಾಕವಿ ಕಾಳಿದಾಸ’ ಸರೋಜಾ ದೇವಿ ಅಭಿನಯದ ಮೊದಲ ಚಿತ್ರವಾಗಿದೆ. 1958ರಲ್ಲಿ ತಮಿಳಿನಲ್ಲಿ ಬಹುಬೇಡಿಕೆ ನಟಿಯಾಗಿದರು. ಅವರಿಗೆ ‘ನಾಡೋಡಿ ಮಾನಾನ್’​ ಸಿನಿಮಾ ತಮಿಳಿನಲ್ಲಿ ಸಕ್ಸಸ್​ ತಂದುಕೊಟ್ಟ ಸಿನಿಮಾ. 1959ರಲ್ಲಿ ‘ಪಾಂಡುರಂಗ ಮಾಹಾತ್ಯಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

Advertisment

1970ವರೆಗೂ ತೆಲಗು ಇಂಡಸ್ಟ್ರೀಯಲ್ಲಿ ಯಶಸ್ವಿ ನಟಿಯಾಗಿದ್ದರು. 1967ರಲ್ಲಿ ಮದುವೆಯಾದ ಬಳಿಕವೂ 1974ರವೆಗೂ ತಮಿಳಿನಲ್ಲಿ ಬೇಡಿಕೆ ನಟಿಯಾಗಿದ್ದರು. 1980ರವೆಗೂ ಕನ್ನಡ ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ, 1959ರಿಂದ ಬಾಲಿವುಡ್​ನಲ್ಲೂ ತನ್ನ ಛಾಪು ಮೂಡಿಸಿದ್ದರು. 161 ಸಿನಿಮಾಗಳಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿರೋ ಅಭಿನಯ ಸರಸ್ವತಿಯಾಗಿದ್ದರು.

ಸರೋಜಾದೇವಿಗೆ ಸಂದ ಪ್ರಶಸ್ತಿಗಳು

ರಾಷ್ಟ್ರಪ್ರಶಸ್ತಿಗಳು

  •  2008ರಲ್ಲಿ ಜೀವಮಾನ ಸಾಧನೆಗಾಗಿ ಭಾರತ ಸರ್ಕಾರದಿಂದ ಪ್ರಶಸ್ತಿ
  • 1992ರಲ್ಲಿ ಪದ್ಮಭೂಷಣ ಪ್ರಶಸ್ತಿ ಮುಡಿಗೇರಿಸಿಕೊಂಡ ಸರೋಜಾದೇವಿ
  • 1969ರಲ್ಲಿ ಪದ್ಮಶ್ರೀ ಅವಾರ್ಡ್​ಗೆ ಭಾಜನಾರಾದ ಅಭಿನಯ ಸರಸ್ವತಿ

ರಾಜ್ಯಪ್ರಶ್ತಿಗಳು

  • 2010ರಲ್ಲಿ ಜೀವಮಾನ ಸಾಧನೆಗಾಗಿ ತಮಿಳುನಾಡು ಸರ್ಕಾರದಿಂದ ಗೌರವ
  •  2009ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ರಾಜಕುಮಾರ್​ ನ್ಯಾಷನಲ್​ ಅವಾರ್ಡ್​
  •  2009ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್​ಟಿಆರ್​ ನ್ಯಾಷನಲ್​ ಪ್ರಶಸ್ತಿ
  •  2001ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್​ಟಿಆರ್​ ನ್ಯಾಷನಲ್​ ಪ್ರಶಸ್ತಿ
  •  1993ರಲ್ಲಿ ತಮಿಳುನಾಡು ಸರ್ಕಾರದಿಂದ ಎಂಜಿಆರ್​ ಪ್ರಶಸ್ತಿ
  •  1989ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
  •  1980ರಲ್ಲಿ ಕರ್ನಾಟಕ ರಾಜ್ಯದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
  •  1969ರಲ್ಲಿ ಕುಲ ವಿಲಕ್ಕು ಸಿನಿಮಾದ ಉತ್ತಮ ನಟನೆಗಾಗಿ ತಮಿಳುನಾಡು ಸರ್ಕಾರದಿಂದ ಸ್ಟೇಟ್​ ಫಿಲ್ಮ್ ಅವಾರ್ಡ್​
  •  1965ರಲ್ಲಿ ಕರ್ನಾಟಕ ಸರ್ಕಾರದಿಂದ ಅಭಿನಯ ಸರಸ್ವತಿ ಅವಾರ್ಡ್​
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment