/newsfirstlive-kannada/media/post_attachments/wp-content/uploads/2025/04/nooru-janmaku.jpg)
ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈಗ ಅದಕ್ಕೆ ಹೊಸ ಸೇರ್ಪಡೆ ಹಾರರ್ ಥ್ರಿಲ್ಲರ್ ಜಾನರ್ನ ಸ್ಟೋರಿ ಎಂದರೆ ಅದು ನೂರು ಜನಮ್ಮಕ್ಕೂ. ಸೂಪರ್ ಹಿಟ್ ಧಾರಾವಾಹಿ ಗೀತಾ ನಾಯಕ ಧನುಷ್ ಗೌಡ ಮತ್ತೆ ವೀಕ್ಷಕರ ಮುಂದೆ ಮತ್ತೆ ಬಂದಿದ್ದಾರೆ.
ಇದನ್ನೂ ಓದಿ: 35 ಬಾಲ್ಗೆ ಸೆಂಚುರಿ ಹೊಡೆದ ವೈಭವ್ ಯಾರು? 14 ವರ್ಷದ ಈ ಪೋರನಿಗಾಗಿ ದ್ರಾವಿಡ್ ಪಟ್ಟು ಹಿಡಿದಿದ್ದರು..
ಗೀತಾ ಸೀರಿಯಲ್ ಮುಕ್ತಾಯದ ನಂತರ ಸ್ಟಾರ್ ಸುವರ್ಣದ ಗೌರಿಶಂಕರ ಧಾರಾವಾಹಿಯಲ್ಲಿ ಪರಿಚಿತ್ ಅನ್ನೋ ಅತಿಥಿ ಪಾತ್ರ ನಿರ್ವಹಿಸಿದ್ದರು. ಇದಾದ ನಂತರ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇದಾದ ಬಳಿಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ನೂರು ಜನಮ್ಮಕ್ಕೂ ಧಾರಾವಾಹಿ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.
ಇನ್ನೂ, ಕೆಲವೊಂದು ಕಡೆ ಒಟ್ಟಿಗೆ ಕೆಲಸ ಮಾಡ್ತಾ ಸ್ವಂತ ಕುಟಂಬದ ರೀತಿ ಬಾಂಧವ್ಯ ಬೆಳೆದು ಬಿಡುತ್ತೆ. ಧಾರಾವಾಹಿಗಳು ವರ್ಷಾನುಗಟ್ಟಲೆ ನಡೆಯೋದ್ರಿಂದ ಕಲಾವಿದರ ನಡುವೆ ಸ್ನೇಹ ಸಂಬಂಧ ತುಸು ಗಾಢವಾಗಿಯೇ ಬೆಳೆಯುತ್ತೆ. ನೂರು ಜನ್ಮಕ್ಕೂ ಧಾರಾವಾಹಿ ಕೂಡ ಇಂತಹದೊಂದು ಸುಮಧುರ ಸ್ನೇಹಕ್ಕೆ ಸಾಕ್ಷಿಯಾಗಿದೆ.
ಹೌದು, ನಾಯಕ ಧನುಷ್, ನಾಯಕಿಯರಾದ ಚಂದನಾ, ಶಿಲ್ಪಾ, ಅನುಪಲ್ಲವಿ ಸೇರಿದಂತೆ ಯಂಗ್ ಕಲಾವಿದರ ನಡುವೆ ಉತ್ತಮ ಬಾಂಡಿಂಗ್ ಇದೆ. ಸ್ನೇಹಿತರು ಅಂದ್ಮೇಲೆ ವೀಕೆಂಡ್ಗೆ ಪಾರ್ಟಿ, ಮೋಜು ಮಸ್ತಿ ಇರ್ಲೇ ಬೇಕು ಅಲ್ವಾ? ಜೊತೆಗೆ ಒಂದಿಷ್ಟು ರೀಲ್ಸ್ ಇದೆಲ್ಲಾ ಇದ್ರೆನೇ ಅದಕ್ಕೆಲ್ಲಾ ಒಂದು ಶೋಭೆ.
View this post on Instagram
ದೊಡ್ಡ ಕಲಾವಿದರ ಬಳಗ ಇರೋ ಧಾರಾವಾಹಿ ಪ್ರಾರಂಭದ ದಿನಗಳಲ್ಲಿ ಪ್ರತಿ ದಿನ ಪ್ರಸಾರ ಆಗುತ್ತಿತ್ತು. ಸದ್ಯ ವಾರಂತ್ಯ ಅಂದ್ರೆ ಶನಿವಾರ ಹಾಗೂ ಭಾನುವಾರ ಮಾತ್ರ ಸೀಮತ ಆಗಿದೆ. ದುಷ್ಟ ಶಕ್ತಿ ದೈವ ಶಕ್ತಿಯ ನಡುವಿನ ಹೋರಾಟ ನೂರು ಜನ್ಮಕ್ಕೂ. ಇತ್ತಿಚೀಗೆ ಮೈತ್ರಿ ಬೆಟ್ಟದ ಮೇಲಿಂದ ಬೀಳೋ ಸನ್ನಿವೇಶ ಪ್ರಸಾರವಾಗಿತ್ತು. ಆ ದೃಶ್ಯವನ್ನ ಗ್ರೀನ್ ಮ್ಯಾಟ್ನಲ್ಲಿ ರೆಕಾರ್ಡ್ ಮಾಡಿ, ನಂತರ ಗ್ರಾಫಿಕ್ಸ್ ಮಾಡಲಾಗಿತ್ತು. ಆ ಶೂಟಿಂಗ್ ಝಲಕ್ ಅನ್ನು ನಟ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ