ಉರಿ ಬಿಸಿಲಿನಲ್ಲೂ ಮಡಿಕೆ ನೀರು ಯಾಕೆ ತಂಪಾಗಿರುತ್ತದೆ..? ಮಣ್ಣಿನ ಪಾತ್ರೆಯ ವಿಶೇಷತೆ ಏನು..?

author-image
Ganesh
Updated On
ಉರಿ ಬಿಸಿಲಿನಲ್ಲೂ ಮಡಿಕೆ ನೀರು ಯಾಕೆ ತಂಪಾಗಿರುತ್ತದೆ..? ಮಣ್ಣಿನ ಪಾತ್ರೆಯ ವಿಶೇಷತೆ ಏನು..?
Advertisment
  • ರೆಫ್ರಿಜರೇಟರ್ ನೀರು ಕುಡಿದರೆ ಏನೆಲ್ಲ ಸಮಸ್ಯೆ ಆಗುತ್ತದೆ..?
  • ಮಣ್ಣಿನ ಪಾತ್ರೆಯ ಮಹತ್ವ ಏನು ಗೊತ್ತಾ ನಿಮಗೆ..?
  • ಮಣ್ಣಿನ ಪಾತ್ರೆಯಲ್ಲಿ ನೀರು ಸಂಗ್ರಹಿಸುವಾಗ ಯಾವ ಕ್ರಮ ಅಗತ್ಯ?

ರಾಜ್ಯದಲ್ಲಿ ಬಿಸಿಲಿನ ತಾಪ ಮುಂದುವರೆದಿದೆ. ಸಾಂದರ್ಭಿಕವಾಗಿ ಬೀಳುವ ಸಣ್ಣ ಮಳೆ ಖಂಡಿತವಾಗಿಯೂ ಪರಿಹಾರ ನೀಡುತ್ತದೆ. ಆದರೆ, ಗಮನಾರ್ಹ ಪರಿಣಾಮ ಬೀರಲ್ಲ. ಅಂತಹ ಪರಿಸ್ಥಿತಿಯಲ್ಲಿ ಅನೇಕರು ಫ್ರಿಡ್ಜ್‌ನಲ್ಲಿ ತಣ್ಣೀರು ಇಡಲು ಪ್ರಾರಂಭಿಸಿರಬಹುದು.

ಕೆಲವರು ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಟ್ಟು ಅಲ್ಲಿಂದ ನೀರು ಕುಡಿಯುತ್ತಾರೆ. ಕೆಲವರಿಗೆ ರೆಫ್ರಿಜರೇಟರ್ ನೀರು ಸರಿಹೋಗುವುದಿಲ್ಲ. ಅದರಿಂದ ಗಂಟಲು ನೋವು, ಶೀತದಂತಹ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದರೆ ಮಣ್ಣಿನ ಪಾತ್ರೆಯಿಂದ ನೀರು ಕುಡಿಯುವುದರಿಂದ ಇದು ಸಂಭವಿಸುವುದಿಲ್ಲ.

ಇದನ್ನೂ ಓದಿ: ದೇಹದ ಈ ಐದು ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡ್ರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ..!

publive-image

ಮಣ್ಣಿನ ಪಾತ್ರೆಯ ನೀರು ತಂಪು..

ಮಣ್ಣಿನ ಮಡಿಕೆಯಲ್ಲಿರುವ ನೀರು ಆರೋಗ್ಯದ ಮೇಲೆ ಸಮಸ್ಯೆ ಬೀರಲ್ಲ. ಅದರ ರುಚಿಯಲ್ಲಿ ಸಿಹಿ ಇರುತ್ತದೆ. ಪ್ರಶ್ನೆ ಏನೆಂದರೆ ಮಣ್ಣಿನ ಮಡಕೆಯಲ್ಲಿರುವ ನೀರು ಹೇಗೆ ತಂಪಾಗಿರುತ್ತದೆ. ವಾಸ್ತವವಾಗಿ.. ಮಡಿಕೆಯ ಗೋಡೆಗಳಲ್ಲಿ ಲೆಕ್ಕವಿಲ್ಲದಷ್ಟು ಸಣ್ಣ, ಸಣ್ಣ ರಂಧ್ರಗಳಿರುತ್ತವೆ. ಅವುಗಳ ಮೂಲಕ ನೀರು ಸೋರುತ್ತಲೇ ಇರುತ್ತದೆ. ಇದರಿಂದ ಮಡಿಕೆಯ ಮೇಲ್ಮೈ ಯಾವಾಗಲೂ ತೇವವಾಗಿರುತ್ತದೆ. ಈ ರಂಧ್ರಗಳಿಂದ ನೀರು ಹೊರಬಂದು ದ್ರವ ರೂಪ ಪಡೆಯುತ್ತದೆ. ನೀರಿನ ಶಾಖದ ಒಂದು ಭಾಗ ಆವಿಯಾಗುವಿಕೆಯಲ್ಲಿ ಖಾಲಿಯಾಗುತ್ತದೆ. ಉಗಿಯಾಗುವಲ್ಲಿ ನೀರಿನ ಸಣ್ಣ ಕಣಗಳು ನೀರಿನಿಂದಲೇ ಶಕ್ತಿ ಪಡೆಯುತ್ತವೆ. ಹೀಗಾಗಿ ಮಡಿಕೆಯಲ್ಲಿ ನೀರು ಹೆಚ್ಚು ತಂಪಾಗಿರುತ್ತದೆ.

ಇದನ್ನೂ ಓದಿ: ಹಲ್ಲುಗಳ ಹುಳುಕು, ನೋವು, ಮುರಿದ್ರೆ ಚಿಂತೆ ಬೇಡ.. ವಿಜ್ಞಾನಿಗಳಿಂದ ನಿಮಗೆ ಗುಡ್​ನ್ಯೂಸ್​!

publive-image

ಮಡಕೆ ನೀರಿನ ಪ್ರಯೋಜನಗಳು

  • ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
  •  ರೋಗಗಳ ವಿರುದ್ಧ ಹೋರಾಡಲು ಶಕ್ತಿ
  •  ದೇಹದ ಟೆಸ್ಟೋಸ್ಟೆರಾನ್(Testosterone) ಮಟ್ಟ ಹೆಚ್ಚಿಸುತ್ತದೆ
  •  ಹೊಟ್ಟೆಯಲ್ಲಿನ ಆಮ್ಲೀಯತೆಯ ಸಮಸ್ಯೆ ನಿವಾರಣೆ
  •  ಅತಿಯಾದ ಬಾಯಾರಿಕೆಯಾದರೆ ಗಂಟಲಿಗೆ ಪರಿಹಾರ
  •  ಆದರೆ ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು
  •  ನೀರನ್ನು ಆಗಾಗ ಬದಲಾಯಿಸುತ್ತ ಇರಬೇಕು..

ಇದನ್ನೂ ಓದಿ: ಪ್ರಾಣಿಗಳೂ ಕನಸು ಕಾಣುತ್ತವೆ.. ನಿದ್ರೆಯಲ್ಲಿದ್ದಾಗ ಅವು ಏನನ್ನು ನೋಡುತ್ತವೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment