/newsfirstlive-kannada/media/post_attachments/wp-content/uploads/2025/07/B-SAROJA-DEVI-9.jpg)
ಕನ್ನಡದ ಮೇರು ನಟಿ, ಚತುರ್ಭಾಷಾ ತಾರೆ ಬಿ.ಸರೋಜಾ ದೇವಿ ಇನ್ನು ನೆನಪು ಮಾತ್ರ. ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಇದೀಗ ನಿಧನ ಹೊಂದುವ ಮೊದಲು ನಟಿಗೆ ಏನಾಯ್ತು ಅನ್ನೋ ವಿವರ ಲಭ್ಯವಾಗಿದೆ.
ಬೆಳಗ್ಗೆ ಆಗಿದ್ದೇನು..?
ಬಿ.ಸರೋಜಾ ದೇವಿ ಅವರು ಬೆಂಗಳೂರಿನ ಮನೆಯಲ್ಲಿದ್ದರು. ಬೆಳಗ್ಗೆ ಏಳುತ್ತಿದ್ದಂತೆಯೇ ಏಕಾಏಕಿ ತಲೆಸುತ್ತು ಬಂದು ನೆಲಕ್ಕೆ ಬಿದ್ದಿದ್ದಾರೆ. ಇದನ್ನು ನೋಡಿ ಮನೆಯವರು ಗಾಬರಿಯಾಗಿದ್ದಾರೆ. ಆರೈಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಬೆನ್ನಲ್ಲೇ ಹತ್ತಿರದ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲೇ ಸರೋಜಾ ದೇವಿ ನಿಧನ ಹೊಂದಿದ್ದರು. ಅವರು ಮೃತಪಡುವಾಗ ಸಮಯ ಬೆಳಗ್ಗೆ 8.30 ಆಗಿತ್ತು. 9.30ಕ್ಕೆ ಮನೆಗೆ ಪಾರ್ಥಿವ ಶರೀರ ರವಾನೆ ಮಾಡಲಾಯಿತು.
ಇದನ್ನೂ ಓದಿ: ಬಿ.ಸರೋಜಾದೇವಿ, SM ಕೃಷ್ಣ ನಡುವೆ ಮದುವೆ ಪ್ರಸ್ತಾಪ.. ಆದರೆ ಸಂಬಂಧವಾಗಿ ಬದಲಾಗಲಿಲ್ಲ; ಯಾಕೆ ಗೊತ್ತಾ?
ಸರೋಜಾ ದೇವಿ ಇಬ್ಬರು ಮಕ್ಕಳು ಹಾಗೂ ಅಕ್ಕನ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರು ಅಕ್ಕನ ಮೊಮ್ಮಕ್ಕಳನ್ನೇ ದತ್ತು ಪಡೆದುಕೊಂಡಿದ್ದರು. ಸರೋಜಾ ದೇವಿ ಪತಿ ಶ್ರೀಹರ್ಷ 1986ರಲ್ಲಿ ನಿಧನ ಹೊಂದಿದ್ದಾರೆ.
ಅಂತ್ಯ ಸಂಸ್ಕಾರದ ಬಗ್ಗೆ ಮಾತನಾಡಿರುವ ಪುತ್ರ ಗೌತಮ್, ನಾಳೆ ಬೆಳಗ್ಗೆ 11.30ಕ್ಕೆ ಹೊರಡುತ್ತೇವೆ. ಚನ್ನಪಟ್ಟಣ ತಾಲೂಕಿನ ಕಣ್ವ ಡ್ಯಾಮಿನ ದಶಾವರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸುತ್ತೇವೆ. ಬೆಳಗ್ಗೆ 8.30ಕ್ಕೆ ತಾಯಿಯವ್ರು ಕೊನೆಯುಸಿರೆಳೆದರು ಅಂತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಈ ಮನೆಯ ಜೊತೆಗೆ ಭಾವನಾತ್ಮಕ ಸಂಬಂಧ.. ಸರೋಜಾ ದೇವಿ ಅಗಲಿಕೆಗೆ ಕಣ್ಣೀರಿಟ್ಟ ಇವರು ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ