/newsfirstlive-kannada/media/post_attachments/wp-content/uploads/2025/02/HUSBAND-KIDNEY-1.jpg)
ಪಶ್ಚಿಮ ಬಂಗಾಳದಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಹತ್ತು ಲಕ್ಷಕ್ಕಾಗಿ ಗಂಡನ ಕಿಡ್ನಿಯನ್ನು ಒತ್ತಾಯದಿಂದ ಮಾರಿಸಿದ ಪತ್ನಿ, ಆ ಹಣ ತೆಗೆದುಕೊಂಡು ತನ್ನ ಬಾಯ್ಫ್ರೆಂಡ್ ಜೊತೆ ಓಡಿ ಹೋದ ಘಟನೆ ನಡೆದಿದೆ.
ಈ ಒಂದು ಘಟನೆ ಹೌರಾ ಜಿಲ್ಲೆಯ ಸಂಕ್ರೈಲ್ನಲ್ಲಿ ನಡೆದಿದೆ. ವರದಿಯ ಪ್ರಕಾರ ಹೆಂಡತಿ ತನ್ನ ಗಂಡನ ಕಿಡ್ನಿಯನ್ನು ಮಗಳು ಶಿಕ್ಷಣ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹಣ ಬೇಕು ಎಂದು ಹಠ ಹಿಡಿದು ಒತ್ತಾಯದಿಂದ ಕಿಡ್ನಿ ಮಾರಿಸಿದ್ದಾಳೆ ಬಳಿಕ ಆ ಹಣವನ್ನು ತೆಗೆದುಕೊಂಡು ತನ್ನ ಬಾಯ್ ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. ಪತ್ನಿಯ ಕಾಟ ತಾಳಲಾರದೆ ಆತ ಸತತ ಮೂರು ತಿಂಗಳು ಕಾಲ ಕಿಡ್ನಿ ಕೊಳ್ಳುವವರನ್ನು ಹುಡುಕಿದ್ದಾನೆ. ನಂತರ ತನ್ನ ಕಿಡ್ನಿಯನ್ನು ಮಾರಿದ್ದಾನೆ.ಇದರಿಂದ ತನ್ನ ಮನೆಯ ಹಣಕಾಸಿನ ತೊಂದರೆ ಪತ್ನಿ ಹೇಳದಂತೆ ಉತ್ತಮ ಸ್ಥಿತಿಗೆ ಬರಬಹುದು ಎಂದು ನಂಬಿದ್ದ. ಈ ಹಣದಿಂದ ಮನೆಯ ಬಡತನದ ಸಮಸ್ಯೆ ಮುಗಿದು ಮಗಳನ್ನು ಚೆನ್ನಾಗಿ ಓದಿಸಿ ಅವಳ ಮದುವೆಯನ್ನು ಮಾಡಬೇಕು ಎಂದು ಕನಸು ಕಂಡಿದ್ದ.
ಇದನ್ನೂ ಓದಿ:ಮಹಾಕುಂಭಮೇಳದ ಸಂಗಮದಲ್ಲಿ ಮಿಂದೆದ್ದ ಕೋಲ್ಡ್ಪ್ಲೇ ಕಲಾವಿದರು; ವಿಡಿಯೋ ಫುಲ್ ವೈರಲ್!
ಇತ್ತ ಪತಿ ತನ್ನ ಕಿಡ್ನಿ ಮಾರಿ ಮನೆತನ ಬಡತನ ನಿರ್ಮೂಲನೆ ಆಗಬಹುದು ಎಂದು ಕನಸು ಕಾಣುತ್ತಿದ್ದರೆ ಅತ್ತ. ಪೇಂಟ್ ಮಾರುತ್ತಿದ್ದ ರವಿ ದಾಸ್ ಎಂಬುವವನ ಜೊತೆ ಅವನ ಪತ್ನಿ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಳು. ಪತಿ ಕಿಡ್ನಿ ಮಾರಿ ಅದರಿಂದ ಬಂದ 10 ಲಕ್ಷ ರೂಪಾಯಿ ಹಣವನ್ನು ಪತ್ನಿಯ ಕೈಗೆ ಕೊಟ್ಟಿದ್ದೆ ತಡ ಆಕೆ ರವಿದಾಸ್ ಜೊತೆ ಹಣದೊಂದಿಗೆ ಪಲಾಯನ ಮಾಡಿದ್ದಾಳೆ.
ಇದನ್ನೂ ಓದಿ:ನೀವು ಚಿನ್ನದ ಮೇಲೆ ಹೂಡಿಕೆ ಶುರು ಮಾಡಿದ್ದಲ್ಲಿ ಹಿಂದೆ ಪಡೆದ ಲಾಭ ಈಗ ಸಿಗುವುದಿಲ್ಲ; ಯಾಕೆ ಗೊತ್ತಾ?
ಕೊನೆಗೆ ಪತ್ನಿಯ ಅಸಲಿ ರೂಪ ಗೊತ್ತಾದಾಗ ಗಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಕೊನೆಗೆ ಪತ್ನಿ ರವಿದಾಸ್ ಜೊತೆ ಇರುವ ಸುದ್ದಿ ಗೊತ್ತಾದಾಗ ಆ ಜೋಡಿ ಇದ್ದ ಮನೆಗೆ ಹೋಗಿ ತನ್ನ 10 ವರ್ಷದ ಮಗಳನ್ನು ಕರೆದುಕೊಂಡು ಬರಬೇಕೆಂದು ಹೋಗಿದ್ದಾನೆ. ಆದ್ರೆ ಆತನ ಹೆಂಡತಿ ಮತ್ತು ರವಿದಾಸ್ ಬಾಗಿಲನ್ನೇ ತೆಗೆದಿಲ್ಲ. ನೀ ಏನು ಬೇಕಾದರು ಮಾಡಿಕೋ ನಾನು ನಿನಗೆ ಡಿವೋರ್ಸ್ ಲೆಟರ್ ಕಳಿಸುತ್ತೇನೆ ಎಂದು ಹೇಳಿ ಮನೆಯಿಂದ ಆಚೆ ಒಂದು ಹೆಜ್ಜೆಯನ್ನು ಇಡದೇ ಆತನಿಗೆ ಆವಾಜ್ ಹಾಕಿದ್ದಾರೆ. ಮತ್ತೊಂದು ಕಡೆ ವೈದ್ಯರು ಕೂಡಲೇ ಆತನಿಗೆ ಕಿಡ್ನಿಯನ್ನು ನೀಡುವಂತೆ ಹೇಳಿದ್ದಾರೆ. 1994ರಲ್ಲಿಯೇ ಭಾರತದಲ್ಲಿ ಮಾನವ ಅಂಗಗಳ ವ್ಯಾಪಾರವನ್ನು ನಿಷೇಧ ಮಾಡಲಾಗಿದೆ. ಆದರೂ ಕೂಡ ವೈದ್ಯರು ಕಿಡ್ನಿ ನೀಡಬೇಕು ಕಸಿಗಾಗಿ ರೋಗಿ ಮತ್ತು ಆತನ ಮನೆಯವರು ಕಾಯುತ್ತಿದ್ದಾರೆ ಎಂದು ಒತ್ತಾಯ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ