HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ.. ಆಯ್ಕೆ ಆದವರಿಗೆ ಆರಂಭದಲ್ಲೇ 30,000 ರೂ ಸಂಬಳ

author-image
Bheemappa
Updated On
HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ.. ಆಯ್ಕೆ ಆದವರಿಗೆ ಆರಂಭದಲ್ಲೇ 30,000 ರೂ ಸಂಬಳ
Advertisment
  • ಸಂಸ್ಥೆಯಲ್ಲಿ ಯಾವ ಯಾವ ಉದ್ಯೋಗಗಳು ಖಾಲಿ ಇವೆ?
  • ಈಗಾಗಲೇ ಅರ್ಜಿಗಳು ಆರಂಭ, ಕೂಡಲೇ ಅಪ್ಲೇ ಮಾಡಿ
  • ವಿದ್ಯಾರ್ಹತೆ, ಅರ್ಜಿ ಪ್ರಕ್ರಿಯೆ, ವೇತನ ಶ್ರೇಣಿ ಮಾಹಿತಿ ಇದೆ

ಹೊಸ ಹುದ್ದೆಗಳನ್ನು ಭರ್ತಿ ಮಾಡಲು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮುಂದಾಗಿದೆ. ಈ ಸಂಬಂಧ ಅರ್ಹ ಹಾಗೂ ಆಸಕ್ತಿ ಹೊಂದಿದ ಉದ್ಯೋಗ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಅಭ್ಯರ್ಥಿಗಳು ತಕ್ಷಣದಿಂದಲೇ ಅಪ್ಲೇ ಮಾಡಬಹುದು.

ಹೆಚ್​​ಪಿಸಿಎಲ್​ ಪ್ರಸ್ತುತ 200ಕ್ಕೂ ಅಧಿಕ ಉದ್ಯೋಗಗಳನ್ನು ನೇಮಕ ಮಾಡುತ್ತಿದೆ. ಡಿಪ್ಲೋಮಾ ಹಾಗೂ ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ ಇದೊಂದು ಅವಕಾಶ ಎನ್ನಬಹುದು. ಮಾರ್ಕೆಟಿಂಗ್ ವಿಭಾಗದಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಆಕಾಂಕ್ಷಿಗಳನ್ನು ನೇಮಿಸಲಾಗುತ್ತಿದೆ. ಈಗಾಗಲೇ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ವಯಸ್ಸಿನ ಮಿತಿ, ವಿದ್ಯಾರ್ಹತೆ, ಅಪ್ಲಿಕೇಶನ್ ಪ್ರಕ್ರಿಯೆ, ವೇತನ ಶ್ರೇಣಿ, ಪರೀಕ್ಷೆಯ ಮಾದರಿ ಮತ್ತು ಹೆಚ್ಚಿನ ವಿವರ ಇಲ್ಲಿದೆ.

ಈ ನೇಮಕಾತಿ ಅಭಿಯಾನದಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್‌ಸ್ಟ್ರುಮೆಂಟೇಶನ್ ಮತ್ತು ಕೆಮಿಕಲ್ ವಿಭಾಗಗಳಲ್ಲಿ ಹುದ್ದೆಗಳ ಖಾಲಿ ಇವೆ. ಹೆಚ್​​ಪಿಸಿಎಲ್ ಕೆಲಸಗಳಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೆ. ಇದಕ್ಕಾಗಿ https://www.hindustanpetroleum.com/ಈ ಲಿಂಕ್​ಗೆ ಭೇಟಿ ನೀಡಿ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ನೇಮಕಾತಿ ಮಾಹಿತಿಗಾಗಿ ಈ ಲೇಖನವನ್ನು ಗಮನಿಸಿ.

ಮಾಸಿಕ ವೇತನ- 30,000 ದಿಂದ 1,20,000 ರೂಪಾಯಿ

ಇದನ್ನೂ ಓದಿ: BELನಲ್ಲಿ 300ಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಖಾಲಿ.. ತಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಬಹುದು

publive-image

ಹುದ್ದೆಗಳ ವಿವರ ಹೇಗಿದೆ..?

  • ಜೂನಿಯರ್ ಎಕ್ಸಿಕ್ಯೂಟಿವ್ (ಮೆಕ್ಯಾನಿಕಲ್)= 130
  • ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್)= 65
  • ಜೂನಿಯರ್ ಎಕ್ಸಿಕ್ಯೂಟಿವ್ (ಇನ್‌ಸ್ಟ್ರುಮೆಂಟೇಶನ್)= 37
  • ಜೂನಿಯರ್ ಎಕ್ಸಿಕ್ಯೂಟಿವ್ (ಕೆಮಿಕಲ್)= 02

ಒಟ್ಟು ಉದ್ಯೋಗಗಳು- 234

ವಿದ್ಯಾರ್ಹತೆ

3 ವರ್ಷ ಡಿಪ್ಲೋಮಾ ಇನ್ ಮೆಕನಿಕಲ್ ಇಂಜಿನಿಯರ್
3 ವರ್ಷ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರ್
3 ವರ್ಷ ಡಿಪ್ಲೋಮಾ ಇನ್ ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರ್
3 ವರ್ಷ ಡಿಪ್ಲೋಮಾ ಇನ್ ಕೆಮಿಕಲ್ ಇಂಜಿನಿಯರ್

ಉದ್ಯೋಗಗಳ ವರ್ಗೀಕರಣ- ಸಾಮಾನ್ಯ (ಯುಆರ್) 96, ಇಡಬ್ಲುಎಸ್ 23, ಒಬಿಸಿ 63, ಎಸ್​ಸಿ 35 ಹಾಗೂ ಎಸ್​ಟಿ 17 ಉದ್ಯೋಗಗಳು ಇವೆ.

ಅರ್ಜಿ ಶುಲ್ಕ-

ಸಾಮಾನ್ಯ (ಯುಆರ್), ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- ಜಿಎಸ್​ಟಿ ಸೇರಿ 1180 ರೂಪಾಯಿ
ಎಸ್​ಸಿ, ಎಸ್​ಟಿ, ವಿಶೇಷ ಚೇತನರು, ಮಾಜಿ ಸೈನಿಕರಿಗೆ ವಿನಾಯತಿ ಇದೆ

ವಯೋಮಿತಿ- 25 ವರ್ಷಗಳು

ಆಯ್ಕೆ ಪ್ರಕ್ರಿಯೆ

  • ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ)
  • ಗುಂಪು ಚರ್ಚೆ (Group Discssion)
  • ವೈಯಕ್ತಿಕ ಸಂದರ್ಶನ
  • ವೈದ್ಯಕೀಯ ಪರೀಕ್ಷೆ

ಮುಖ್ಯವಾದ ದಿನಾಂಕಗಳು

ಅಧಿಸೂಚನೆ ರಿಲೀಸ್ ಮಾಡಲಾದ ದಿನಾಂಕ- 15 ಜನವರಿ 2025
ಅರ್ಜಿ ಸಲ್ಲಿಕೆ ಮಾಡಲು ಆರಂಭಿಸಲಾದ ದಿನಾಂಕ- 15 ಜನವರಿ 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವುದು- 14 ಫೆಬ್ರವರಿ 2025
ಪರೀಕ್ಷಾ ದಿನಾಂಕವನ್ನು ಮುಂದೆ ಘೋಷಣೆ ಮಾಡಲಾಗುತ್ತದೆ.

ಸಂಪೂರ್ಣ ಮಾಹಿತಿಗಾಗಿ- https://static-cdn.publive.online/newsfirstlive-kannada/media/pdf_files/documents/pdfRecruitment_of_Junior_Executive_Officer_2024-25_English_15012025.pdf

ಅರ್ಜಿ ಸಲ್ಲಿಕೆಗೆ-https://jobs.hpcl.co.in/Recruit_New/recruitlogin.jsp

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment