/newsfirstlive-kannada/media/post_attachments/wp-content/uploads/2025/02/JOB_EXAM_1.jpg)
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿತ್ತು. ಈ ಅರ್ಜಿಗಳನ್ನು ಸ್ವೀಕರಿಸಿದ್ದ ಸಂಸ್ಥೆಯು ಎಲ್ಲವನ್ನು ಪರಿಶೀಲನೆ ಮಾಡಿದೆ. ಇದರ ಬೆನ್ನಲ್ಲೇ ಪರೀಕ್ಷೆ ದಿನಾಂಕವನ್ನು ಘೋಷಣೆ ಮಾಡಿರುವ ಜೊತೆಗೆ ಪ್ರವೇಶ ಪತ್ರ (Admit Card) ಗಳನ್ನು ಬಿಡುಗಡೆ ಮಾಡಿದೆ.
ಪರೀಕ್ಷೆ ನಡೆಯುವ 7 ರಿಂದ 10 ದಿನಗಳ ಮೊದಲೇ ಪ್ರವೇಶ ಪತ್ರಗಳನ್ನು ಹೆಚ್​​ಪಿಸಿಎಲ್​ ರಿಲೀಸ್ ಮಾಡಿದೆ. ಹೀಗಾಗಿ ಯಾರು ಯಾರು ಈ ಮೊದಲು ಅರ್ಜಿ ಸಲ್ಲಿಕೆ ಮಾಡಿದ್ದೀರೋ ಅವರೆಲ್ಲಾ ಈಗ ಅಡ್ಮಿಟ್ ಕಾರ್ಡ್​ ಅನ್ನು ಇಲಾಖೆಯ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು. ಉಳಿದಂತೆ ಪರೀಕ್ಷೆಯ ದಿನಾಂಕ, ಸ್ಥಳ, ಸಮಯ ಇತ್ಯಾದಿ ಮಾಹಿತಿ ಹಾಲ್​ ಟಿಕೆಟ್​ನಲ್ಲಿ ನೀಡಲಾಗಿರುತ್ತದೆ.
ನ್ಯೂಸ್​ಫಸ್ಟ್​ ಲಿಂಕ್-HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ.. ಆಯ್ಕೆ ಆದವರಿಗೆ ಆರಂಭದಲ್ಲೇ 30,000 ರೂ ಸಂಬಳ
/newsfirstlive-kannada/media/post_attachments/wp-content/uploads/2025/01/JOB_EXAMS.jpg)
234 ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಬೇಸಡ್ ಪರೀಕ್ಷೆಗಳನ್ನು ಹೆಚ್​​ಪಿಸಿಎಲ್ ನಡೆಸುತ್ತಿದೆ. ಮಾರ್ಚ್​ 27 ರಂದು ದೇಶದ್ಯಾಂತ ಈ ಪರೀಕ್ಷೆಗಳು ಇರುತ್ತವೆ. ಈ ಉದ್ಯೋಗಗಳ ಬಗ್ಗೆ ಈಗಾಗಲೇ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಮಾಹಿತಿ ಬೇಕು ಎಂದರೆ ಈ ಕೆಳಗೆ ನೀಡಿರುವ ಲಿಂಕ್​ ಅನ್ನು ಕ್ಲಿಕ್ ಮಾಡಬಹುದು.
ಈ ಉದ್ಯೋಗಕ್ಕೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
- ಅಧಿಸೂಚನೆ ರಿಲೀಸ್ ಮಾಡಲಾಗಿದ್ದ ದಿನಾಂಕ- 15 ಜನವರಿ 2025
- ಅರ್ಜಿ ಸಲ್ಲಿಕೆ ಮಾಡಲು ಆರಂಭಿಸಲಾಗಿದ್ದ ದಿನಾಂಕ- 15 ಜನವರಿ 2025
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 14 ಫೆಬ್ರವರಿ 2025 ಆಗಿತ್ತು
- ಪರೀಕ್ಷೆಯ ಪ್ರವೇಶ ಪತ್ರ (ಅಡ್ಮಿಟ್ ಕಾರ್ಡ್) ರಿಲೀಸ್- ಮಾರ್ಚ್ 2025
- ಇದೀಗ ಪರೀಕ್ಷಾ ದಿನಾಂಕ ಘೋಷಣೆ ಮಾಡಿದೆ- 27 ಮಾರ್ಚ್​ 2025
ಪ್ರವೇಶ ಪತ್ರ ಡೌನ್​ಲೋಡ್ ಮಾಡುವ ಲಿಂಕ್- https://www.hindustanpetroleum.com/
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us