/newsfirstlive-kannada/media/post_attachments/wp-content/uploads/2025/01/JOBS_BEL.jpg)
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 234 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಈಗಾಗಲೇ ಸಾಕಷ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಇನ್ನು ಯಾರು ಈ ಉದ್ಯೋಗಗಳಿಗೆ ಅಪ್ಲೇ ಮಾಡಿಲ್ಲವೋ ಶೀಘ್ರವೇ ಅರ್ಜಿ ಸಲ್ಲಿಸಬೇಕು. ಏಕೆಂದರೆ ಫೆಬ್ರುವರಿ 14 ಅಂದರೆ ನಾಳೆಯೇ ಇದಕ್ಕೆ ಕೊನೆ ದಿನವಾಗಿದೆ.
ಈ ನೇಮಕಾತಿ ಅಭಿಯಾನದ ಮೂಲಕ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್‌ಸ್ಟ್ರುಮೆಂಟೇಶನ್ ಮತ್ತು ಕೆಮಿಕಲ್ ವಿಭಾಗಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವೇತನ ಶ್ರೇಣಿ, ಪರೀಕ್ಷೆಯ ಮಾದರಿ, ವಯಸ್ಸಿನ ಮಿತಿ, ವಿದ್ಯಾರ್ಹತೆ, ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಹೆಚ್ಚಿನ ವಿವರ ಇಲ್ಲಿದೆ. ಆಸಕ್ತ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಬಹುದು.
ಎಷ್ಟು ಉದ್ಯೋಗಗಳು ಇವೆ?
- ಜೂನಿಯರ್ ಎಕ್ಸಿಕ್ಯೂಟಿವ್ (ಇನ್‌ಸ್ಟ್ರುಮೆಂಟೇಶನ್)- 37 ಹುದ್ದೆಗಳು
- ಜೂನಿಯರ್ ಎಕ್ಸಿಕ್ಯೂಟಿವ್ (ಕೆಮಿಕಲ್)- 02 ಹುದ್ದೆಗಳು
- ಜೂನಿಯರ್ ಎಕ್ಸಿಕ್ಯೂಟಿವ್ (ಮೆಕ್ಯಾನಿಕಲ್)- 130 ಹುದ್ದೆಗಳು
- ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್)- 65 ಹುದ್ದೆಗಳು
ಒಟ್ಟು ಉದ್ಯೋಗಗಳು- 234
ತಿಂಗಳ ಸಂಬಳ- 30,000 ದಿಂದ 1,20,000 ರೂಪಾಯಿ
ಇದನ್ನೂ ಓದಿ:BMTC ಇಂದ ಅರ್ಜಿ ಆಹ್ವಾನ.. ಮೊದಲು ಬಂದವರಿಗೆ ಮೊದಲ ಅವಕಾಶ
ವಯೋಮಿತಿ- 25 ವರ್ಷಗಳು
ಶೈಕ್ಷಣಿಕ ಅರ್ಹತೆ
3 ವರ್ಷ ಡಿಪ್ಲೋಮಾ ಇನ್ ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರ್, ಕೆಮಿಕಲ್ ಇಂಜಿನಿಯರ್, ಮೆಕನಿಕಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಪೂರ್ಣವಾಗಿರಬೇಕು.
ಉದ್ಯೋಗಗಳ ವರ್ಗೀಕರಣ
ಸಾಮಾನ್ಯ (ಯುಆರ್) 96, ಇಡಬ್ಲುಎಸ್ 23, ಒಬಿಸಿ 63, ಎಸ್ಸಿ 35 ಹಾಗೂ ಎಸ್ಟಿ 17 ಉದ್ಯೋಗಗಳು ಇವೆ.
ಅರ್ಜಿ ಶುಲ್ಕ-
ಸಾಮಾನ್ಯ (ಯುಆರ್), ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- ಜಿಎಸ್ಟಿ ಸೇರಿ 1,180 ರೂಪಾಯಿ
ಎಸ್ಸಿ, ಎಸ್ಟಿ, ವಿಶೇಷ ಚೇತನರು, ಮಾಜಿ ಸೈನಿಕರಿಗೆ ವಿನಾಯತಿ ಇದೆ
ಆಯ್ಕೆ ಪ್ರಕ್ರಿಯೆ ಹೇಗಿದೆ?
- ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ)
- ಗುಂಪು ಚರ್ಚೆ (Group Discssion)
- ವೈಯಕ್ತಿಕ ಸಂದರ್ಶನ
- ವೈದ್ಯಕೀಯ ಪರೀಕ್ಷೆ
ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 15 ಜನವರಿ 2025
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಯಾವುದು- 14 ಫೆಬ್ರವರಿ 2025
ಪೂರ್ಣ ಮಾಹಿತಿಗಾಗಿ- https://static-cdn.publive.online/newsfirstlive-kannada/media/pdf_files/documents/pdfRecruitment_of_Junior_Executive_Officer_2024-25_English_15012025.pdf
ಅರ್ಜಿ ಸಲ್ಲಿಕೆಗೆ ವೆಬ್ಸೈಟ್- https://www.hindustanpetroleum.com/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ