ಚೀನಾ ಮತ್ತೆ ಪ್ರಕ್ಷುಬದ್ಧ! ಮತ್ತೊಂದು ಹೊಸ ವೈರಸ್ ಸೃಷ್ಟಿ.. ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ..

author-image
Ganesh
Updated On
5 ವರ್ಷದ ಬಳಿಕ ಚೀನಾದಿಂದ ಮತ್ತೆ ವೈರಸ್ ಪಿಶಾಚಿ ಭಯ; ಏನಿದರ ಅಸಲಿಯತ್ತು?
Advertisment
  • ಚೀನಾದಿಂದ ಮತ್ತೆ ವಿಶ್ವಕ್ಕೆ ಅಪಾಯದ ಸೂಚನೆ
  • ಚೀನಾದ ಆಸ್ಪತ್ರೆಗಳೆಲ್ಲ ತುಂಬಿ ತುಳುಕುತ್ತಿವೆ ಎಂದು ವರದಿ
  • ಹೊಸ ವೈರಸ್​ ಸೋಂಕಿನ ಲಕ್ಷಣಗಳು ಏನೇನು?

ಜಗತ್ತನ್ನು ಬೆಚ್ಚಿಬೀಳಿಸಿದ್ದ ಕೊರೊನಾ ಮಹಾಮಾರಿಯ ವಿನಾಶ, ಇನ್ನೂ ಕಣ್ಮುಂದೆ ಇದೆ. ಈ ಕರಾಳ ಕಾಲದಲ್ಲಿ ಇಡೀ ಜಗತ್ತು ತತ್ತರಿಸಿ ಹೋಗಿತ್ತು. ಕೋವಿಡ್ -19ರ ಕೇಂದ್ರಬಿಂದುವಾಗಿದ್ದ ಚೀನಾ, ಐದು ವರ್ಷಗಳ ನಂತರ ಮತ್ತೊಮ್ಮೆ ಪ್ರಕ್ಷುಬ್ಧವಾಗಿದೆ!

ಅದಕ್ಕೆ ಕಾರಣ ಚೀನಾದಲ್ಲಿ ಮತ್ತೊಂದು ವೈರಸ್ ವೇಗವಾಗಿ ಹರಡುತ್ತಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV:Human metapneumovirus) ಎಂಬ ವೈರಸ್ ವೇಗವಾಗಿ ಹರಡುತ್ತಿದೆ. HMPV ಒಂದು RNA ವೈರಸ್ ಆಗಿದ್ದು, ಇದು ನ್ಯುಮೊವಿರಿಡೆ (pneumoviridae), ಮೆಟಾಪ್ನ್ಯೂಮೊವೈರಸ್ ಕುಲಕ್ಕೆ ಸೇರಿದೆ ಎಂದು ಹೇಳಲಾಗಿದೆ.

ಈ ವೈರಸ್‌ ಉಲ್ಬಣದಿಂದ ಚೀನಾದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಮಿತಿ ಮೀರುತ್ತಿದೆ. ಹೀಗಾಗಿ ಚೀನಾದಲ್ಲಿ ಮೆಡಿಕಲ್ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. HMPV ಸೋಂಕಿಗೆ ಒಳಗಾದವರಲ್ಲಿ ಕೋವಿಡ್-19 ರ ಲಕ್ಷಣಗಳಂತೆಯೇ ಕಂಡುಬರುತ್ತಿದೆ.

ಇದನ್ನೂ ಓದಿ:ರೋಹಿತ್ ಶರ್ಮಾ​ರನ್ನು​ ಡ್ರಾಪ್ ಮಾಡಿದ್ದೇಕೆ? ದೊಡ್ಡ ಹೇಳಿಕೆ ಕೊಟ್ಟ ಜಸ್​​ಪ್ರಿತ್ ಬುಮ್ರಾ..!

ಡಚ್ ಸಂಶೋಧಕರು ಈ ವೈರಸ್​ ಅನ್ನು 2001 ರಲ್ಲಿ ಪತ್ತೆ ಹಚ್ಚಿದ್ದರು. ಈ ವೈರಸ್ ಸುಮಾರು ಆರು ದಶಕಗಳಿಂದ ಉಳಿದುಕೊಂಡಿದೆ. ವೈರಸ್ ಹರಡುವುದನ್ನು ಆರೋಗ್ಯ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅದರಿಂದ ದೂರವಿರಲು ಕೋವಿಡ್ ಮಾದರಿಯ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಚೀನಾ ಈ ಕ್ರಮಕ್ಕೆ ಮುಂದಾಗಿದೆ.

HMPV ವೈರಸ್ ಎಂದರೇನು?

ಈ ವೈರಸ್ ದೇಹ ಹೊಕ್ಕಿದ ಮೇಲೆ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡ್ತದೆ. ಕೆಮ್ಮು ಮತ್ತು ಸೀನುವಿಕೆಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಇದರ ಪ್ರೌಢಾವಸ್ಥೆಯ ಅವಧಿ ಮೂರರಿಂದ ಐದು ದಿನಗಳು. ಈ ವೈರಸ್ ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರೋರ ಮೇಲೆ ಆಕ್ರಮಣ ಮಾಡುತ್ತದೆ.

ಲಕ್ಷಣಗಳು ಏನು..?

ಕೆಮ್ಮು, ಜ್ವರ, ಮೂಗು ಕಟ್ಟುವುದು, ಶೀತ ಈ ವೈರಸ್‌ನ ಸಾಮಾನ್ಯ ಲಕ್ಷಣಗಳಾಗಿವೆ. HMPV ವೈರಸ್ ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಆಗಾಗ್ಗೆ ಕೈ ತೊಳೆಯುವುದಾಗಿದೆ. ಜೊತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಾಗಿದೆ.

ಇದನ್ನೂ ಓದಿ:BIGG BOSS; ಬಿಗ್​​ಬಾಸ್​​ನಲ್ಲಿ ಉಮ್ಮಾ ಟಾಸ್ಕ್​.. ಮೂರು ತಿಂಗಳು ಆಗಿದೆ ಪ್ರ್ಯಾಕ್ಟೀಸ್ ಇಲ್ಲವೆಂದ ಧನು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment