Fighter: ಹೃತಿಕ್ ರೋಷನ್‌ ’ಫೈಟರ್‘ ಚಿತ್ರದ ಹೊಸ ಪೋಸ್ಟರ್​ ರಿಲೀಸ್​​; ಏನಿದರ ಸ್ಪೆಷಲ್‌?

author-image
Veena Gangani
Updated On
Fighter: ಹೃತಿಕ್ ರೋಷನ್‌ ’ಫೈಟರ್‘ ಚಿತ್ರದ ಹೊಸ ಪೋಸ್ಟರ್​ ರಿಲೀಸ್​​; ಏನಿದರ ಸ್ಪೆಷಲ್‌?
Advertisment
  • ವಿಶೇಷ ದಿನದಂದು ಹೃತಿಕ್ ರೋಷನ್ ನಟನೆಯ ಸಿನಿಮಾ ರಿಲೀಸ್​
  • ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಪಡೆದುಕೊಂಡ ‘ಫೈಟರ್’ ಚಿತ್ರ
  • ‘ಫೈಟರ್’ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟ

ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ಫೈಟರ್ ಸಿನಿಮಾ ಜನವರಿ 25 ಅಂದರೆ ಗಣರಾಜ್ಯೋತ್ಸವ ದಿನದಂದು ರಿಲೀಸ್​ ಆಗುತ್ತಿದೆ. ಇದೇ ಹೊತ್ತಲ್ಲಿ ಫೈಟರ್ ಸಿನಿಮಾದ ಹೊಸ ಪೋಸ್ಟರ್​​​ವೊಂದನ್ನು ಬಿಡುಗಡೆ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಭಾರತದ ಅತಿದೊಡ್ಡ ಆಕ್ಷನ್ ಸಿನಿಮಾ ಇದಾಗಿದೆ. ಟೀಸರ್ ಮತ್ತು ಹಾಡುಗಳು ಮೂಲಕ ಪ್ರೇಕ್ಷಕರ ಗಮನ ಸೆಳೆದಿತ್ತು.

publive-image

ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅನಿಲ್ ಕಪೂರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ, ಈ ಚಿತ್ರ ಟ್ರೈಲರ್ ಜನವರಿ 15 ನಾಳೆ ಮಧ್ಯಾಹ್ನ 12:00ಕ್ಕೆ ಬಿಡುಗಡೆಯಾಗಲಿದೆ. ನಟ ಹೃತಿಕ್ ರೋಷನ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟರ್​ವೊಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಫೈಟರ್ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್ ಮತ್ತು ದೇಶಭಕ್ತಿಯ ಅಂಶಗಳ ಮೇಲೈಸಿರುವ ಈ ಚಿತ್ರ ಭಾರೀ ವೆಚ್ಚದಲ್ಲಿ ತಯಾರಾಗುತ್ತಿದೆ.

ಇದನ್ನು ಓದಿ: BIGG BOSS: ಬಿಗ್​ಬಾಸ್‌ಗೆ ಹೋಗಿ ಬಂದ್ಮೇಲೆ ಬದುಕು ಬದಲಾಗುತ್ತಾ? ಸೀಸನ್‌ 10 ಸ್ಪರ್ಧಿಗಳು ಹೇಳಿದ್ದೇನು?

ಈ ಫೈಟರ್​ ಚಿತ್ರ ತೆರೆಗೆ ಬರಲು ಇನ್ನೂ ಇನ್ನು 11 ದಿನಗಳು ಮಾತ್ರ ಬಾಕಿ ಇದೆ. ಸದ್ಯ ನಟ ಹೃತಿಕ್ ರೋಷನ್ ಹಾಗೂ ನಿರ್ಮಾಪಕರು ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾದ ಈ ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment