Advertisment

ಬೆಂಗಳೂರಲ್ಲಿ ನಡೆದ ಅತ್ಯಾಚಾರ ಕೇಸ್​​ಗೆ ಟ್ವಿಸ್ಟ್; ಆರೋಪಿ ಅರೆಸ್ಟ್, ಆತನ ಹಿನ್ನೆಲೆ ಏನು?​

author-image
Veena Gangani
Updated On
ಬೆಂಗಳೂರಲ್ಲಿ ನಡೆದ ಅತ್ಯಾಚಾರ ಕೇಸ್​​ಗೆ ಟ್ವಿಸ್ಟ್; ಆರೋಪಿ ಅರೆಸ್ಟ್, ಆತನ ಹಿನ್ನೆಲೆ ಏನು?​
Advertisment
  • ಸಿಸಿಟಿವಿಯಲ್ಲಿನ ಬೈಕ್ ನಂಬರ್ ಆಧರಿಸಿ ಆರೋಪಿಯ ಬಂಧನ
  • ಕೋರಮಂಗಲದ ಪಬ್​ನಲ್ಲಿ ಸ್ನೇಹಿತರ ಜೊತೆ ಯುವತಿ ಪಾರ್ಟಿ
  • ಕೃತ್ಯದ ನಂತರ ಆಡುಗೋಡಿಯ ಮನೆಯಲ್ಲಿದ್ದ ಆರೋಪಿ

ಬೆಂಗಳೂರು: ಮೊನ್ನೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೋಗುವ ವೇಳೆ ಯುವತಿ ಮೇಲೆ ಅತ್ಯಾಚಾರ ಎಸೆಗಿರುವ ಆರೋಪಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಈ ಕೇಸ್​ ಸಂಬಂಧ ಪೊಲೀಸರು ಹೆಚ್​ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

Advertisment

ಇದನ್ನೂ ಓದಿ:ಡ್ರಾಪ್ ಕೊಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ; ಬೆಚ್ಚಿಬಿದ್ದ ಸಿಲಿಕಾನ್​ ಸಿಟಿ

publive-image

ಇದೀಗ ಸಿಸಿಟಿವಿಯಲ್ಲಿನ ಬೈಕ್ ನಂಬರ್ ಆಧರಿಸಿ ಆರೋಪಿಯನ್ನು ಬೆಂಗಳೂರಿನ ಆಡುಗೋಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯೂ ಮೂಲತಃ ತಮಿಳುನಾಡು ಮೂಲದವ. ಡ್ರಾಪ್ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದ ಆರೋಪಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದನಂತೆ. ಆರೋಪಿಯನ್ನು ಕರೆದುಕೊಂಡ ಬಂದಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

publive-image

ಏನಿದು ಪ್ರಕರಣ?

ಯುವತಿಯೊಬ್ಬಳು ಶನಿವಾರ ರಾತ್ರಿ ಕೋರಮಂಗಲದ ಪಬ್​ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಕಾರಿನಲ್ಲಿ ಮನೆಗೆ ಹೊರಟಿದ್ದಳು. ಈ ವೇಳೆ ಎಂಪೈರ್ ಸರ್ಕಲ್ ಬಳಿ ಕಾರು ಮತ್ತು ಆಟೋ ನಡುವೆ ಅಪಘಾತ ಆಗಿದೆ. ಆಗ ಆಟೋ ಚಾಲಕ ಹಾಗೂ ಕಾರು ಚಾಲಕನ ಮಧ್ಯೆ ಗಲಾಟೆ ಆಗಿದೆ. ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಹೊಯ್ಸಳ ವಾಹನ ಬಂದಿದೆ. ಆಗ ಯುವತಿ ಅಲ್ಲಿಂದ ಅಪರಿಚಿತ ಬೈಕ್​ಗೆ ಕೈಮಾಡಿ ಲಿಫ್ಟ್ ಪಡೆದಿದ್ದಾಳೆ. ನಂತರ ಮಾರ್ಗ ಮಧ್ಯೆ ಇಳಿದು ಮತ್ತೊಂದು ಬೈಕ್​ನಲ್ಲಿ ಡ್ರಾಪ್ ಪಡೆದುಕೊಂಡಿದ್ದಾಳೆ ಎನ್ನಲಾಗಿದೆ. ಈ ವೇಳೆ ಅಪರಿಚಿತ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ರೇಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಸದ್ಯ ಆರೋಪಿಯನ್ನು ಪೊಲೀಸ್​ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment