ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಶಾಕಿಂಗ್​ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್

author-image
Veena Gangani
Updated On
1000 ಸಂಚಿಕೆ ಪೂರೈಸುತ್ತಿದ್ದಂತೆ ವೀಕ್ಷಕರಿಗೆ ಶಾಕಿಂಗ್ ಸುದ್ದಿ; ಪುಟ್ಟಕ್ಕನ ಮಕ್ಕಳು ಮುಕ್ತಾಯ ಆಗುತ್ತಾ?
Advertisment
  • ಕೊನೆಗೂ ಕಂಠಿ, ಸ್ನೇಹಾ ಮದುವೆಗೆ ಅಡ್ಡಿಯಾಗಿದ್ದ ಆತಂಕ ದೂರ!
  • 3 ವರ್ಷಗಳ ಕಾಲ ರಂಜಿಸಿಕೊಂಡು ಬರುತ್ತಿರೋ ಪುಟ್ಟಕ್ಕನ ಮಕ್ಕಳು
  • ಸದ್ಯದಲ್ಲೇ ಧಾರಾವಾಹಿ ಮುಕ್ತಾಯವಾಗಲಿದೆ ಟಾಪ್​ ಸೀರಿಯಲ್

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅಭಿಮಾನಿಗಳಿಗೆ ಬಿಗ್​ ಶಾಕ್​ ನ್ಯೂಸ್​ ಇದು. ಸದ್ಯದಲ್ಲೇ ಧಾರಾವಾಹಿ ಮುಕ್ತಾಯವಾಗಲಿದೆ. ಸುಮಾರು 3 ವರ್ಷಗಳ ಕಾಲ ರಂಜಿಸಿರೋ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮುಕ್ತಾಯವಾಗ್ತಿದೆ.

ಇದನ್ನೂ ಓದಿ: ಅಪ್ಪನಾಗೋ ಖುಷಿಯಲ್ಲಿರೋ ವಾಸುಕಿ ವೈಭವ್​ಗೆ ಕ್ಯೂಟ್ ಸರ್​ಪ್ರೈಸ್​ ಕೊಟ್ಟ ಅರುಣ್​ ಸಾಗರ್ ದಂಪತಿ

publive-image

ಇನ್ನು ಕೆಲವೇ ದಿನಗಳ ಕಾಲ ಧಾರಾವಾಹಿ ಪ್ರಸಾರವಾಗಲಿದೆ. ಹೌದು, ಈ ಹಿಂದೆ ನ್ಯೂಸ್​​ ಫಸ್ಟ್​ ಜೊತೆಗೆ ನಿರ್ದೇಶಕರು ಹಾಗೂ ನಿರ್ಮಾಪಕರಾದ ಆರೂರು ಜಗದೀಶ್​ ಅವರು ಮಾತ್ನಾಡಿದ್ದಾಗ ರೇಟಿಂಗ್​ ಚನ್ನಾಗಿ ಇರೋವಾಗಲೇ ಧಾರಾವಾಹಿಗೆ ಒಂದೋಳ್ಳೆ ಕ್ಲೈಮ್ಯಾಕ್ಸ್​ ಕೊಟ್ಟು ಮುಗಿಸ್ತಿವೆ ಎಂದಿದ್ರು. ಈಗ ಆ ಸಮಯ ಬಂದೇ ಬಿಟ್ಟಿದೆ.

publive-image

ಸ್ಟೋರಿಯಲಿ ಕಂಠಿ, ಸ್ನೇಹಾ ಮದುವೆಗೆ ಅಡ್ಡಿಯಾಗಿದ್ದ ಆತಂಕಗಳು ದೂರಾಗಿದ್ದು, ಬಂಗಾರಮ್ಮ ಪುಟ್ಟಕ್ಕ ಒಂದಾಗಿ ಮದುವೆ ಮಾಡಿಸ್ತಿದ್ದಾರೆ. ಹ್ಯಾಪಿ ಮ್ಯಾರೀಡ್​ ಲೈಫ್​ ಜೊತೆಗೆ ಧಾರಾವಾಹಿ ಮುಗಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬರಲಿದ್ದು, ಸುದೀರ್ಘ ಪಯಣಕ್ಕೆ ಅಂತ್ಯ ಹಾಡಲಿದೆ ಪುಟ್ಟಕ್ಕನ ಮಕ್ಕಳು.

publive-image

ಪುಟ್ಟಕ್ಕನ ಮಕ್ಕಳು ಬಹಳ ಮನ್ನಣೆ ಪಡೆದಿರೋ ಧಾರಾವಾಹಿ. ಲಾಂಚಿಂಗ್​ನಿಂದ ಇಂದಿಗೂ ಅಭಿಮಾನಿಗಳು ಕಮ್ಮಿ ಆಗಿಲ್ಲ. ಶುರುವಿನಿಂದಲೂ ನಂಬರ್​​ ಒನ್​ ಸ್ಥಾನದಲ್ಲೇ ರಾರಾಜಿಸಿರೋ ಸೀರಿಯಲ್ ಆಗಿತ್ತು​. ಪುಟ್ಟಕ್ಕನ ಮಕ್ಕಳು ಸಮಯ ಬದಲಾದ್ರೂ ಸೌಂಡ್​ ಮಾಡ್ತಿರೋ ಧಾರಾವಾಹಿ ಆಗಿತ್ತು. ಈ ಹಿಂದೆ 7.30ಕ್ಕೆ ಬರ್ತಿದ್ದ ಪುಟ್ಟಕ್ಕ ಧಾರಾವಾಹಿ 6.30ಕ್ಕೆ ಬದಲಾಗಿ ಪ್ರಸಾರ ಕಾಣುತ್ತಿತ್ತು. ಆದ್ರೇ ಇದೀಗ ಪೂರ್ತಿಯಾಗಿ ಸೀರಿಯಲ್​ ಮುಕ್ತಾಯ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment