/newsfirstlive-kannada/media/post_attachments/wp-content/uploads/2024/11/Bmtc-bus-Driver-Heart-attack-Conductor.jpg)
ಬೆಂಗಳೂರು: ಬಿಎಂಟಿಸಿ ಬಸ್‌ಗಳಂದ್ರೆ ಕಿಲ್ಲರ್ ಬಿಎಂಟಿಸಿ ಅನ್ನೋ ಕೆಟ್ಟ ಹಣೆಪಟ್ಟಿ ಇದೆ. ಈ ಕುಖ್ಯಾತಿಯ ಮಧ್ಯೆ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುವ ಸಿಬ್ಬಂದಿಗಳು ಸಾಕಷ್ಟು ಮಂದಿ ಇದ್ದಾರೆ. ಇದಕ್ಕೆ ಉದಾಹರಣೆಯಾದ ಒಂದು ಘಟನೆ ಇಂದು ಯಶವಂತಪುರದ ಬಳಿ ನಡೆದಿದೆ.
ಬಿಎಂಟಿಸಿ ಬಸ್‌ನಲ್ಲಿ ಪ್ರಾಣ ಬಿಟ್ಟ ಈ ಚಾಲಕನ ಕಥೆ ಕೇಳಿದ್ರೆ ಎಂತಹವರ ಕರುಳು ಚುರ್ ಅನ್ನುತ್ತೆ. ಬಿಎಂಟಿಸಿ ಡಿಪೋ 40ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕ ಕಿರಣ್ ಎಂದಿನಂತೆ ಇವತ್ತು ಡ್ಯೂಟಿಗೆ ಹಾಜರಾಗಿದ್ದರು. ನೆಲಮಂಗಲದಿಂದ ಯಶವಂತಪುರ ಕಡೆ ಬರ್ತಿದ್ದ BMTC ಬಸ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.
/newsfirstlive-kannada/media/post_attachments/wp-content/uploads/2024/11/Bmtc-bus-Driver-Heart-attack.jpg)
BMTC ಬಸ್ ಚಲಿಸುತ್ತಿರುವಾಗಲೇ ಡ್ರೈವರ್ ಕಿರಣ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಹಾಗೇ ನರಳಾಡಿದ ಕಿರಣ್ ತಕ್ಷಣವೇ ಡ್ರೈವರ್ ಸೀಟ್‌ನಿಂದ ಕುಸಿದು ಬೀಳುತ್ತಾ ಇದ್ದರು. ಇದನ್ನು ಗಮನಿಸಿದ ಕಂಡಕ್ಟರ್ ಓಬ್ಳೇಶ್ ಸಂಚರಿಸುತ್ತಿದ್ದ ಬಸ್​​ನ್ನು ನಿಲ್ಲಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ. ಬಸ್‌ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: ಜಯಂತ್​ ಚಿನ್ನುಮರಿಗೆ ಕೂಡಿ ಬಂತು ಕಂಕಣ ಭಾಗ್ಯ; ಚಂದನಾ ಅನಂತಕೃಷ್ಣ ಮದುವೆ ಯಾವಾಗ?
ಬಿಎಂಟಿಸಿ ಡ್ರೈವರ್ ಕಿರಣ್ ಅವರಿಗೆ ಹೃದಯಾಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡ್ರೈವಿಂಗ್ ವೇಳೆ ಚಾಲಕ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಪ್ರಾಣ ಬಿಟ್ಟ ಡ್ರೈವರ್‌ಗೆ ಇನ್ನೂ 39 ವರ್ಷ ವಯಸ್ಸಾಗಿತ್ತು ಅಷ್ಟೇ. ಹೃದಯಾಘಾತದ ಸಂದರ್ಭದಲ್ಲೂ ಕಿರಣ್ ಅವರು ಬಸ್ ನಿಲ್ಲಿಸಲು ಪ್ರಯತ್ನ ಪಟ್ಟಿದ್ದಾರೆ. ಕಂಡಕ್ಟರ್ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.
ಬಿಎಂಟಿಸಿ ಬಸ್ ಚಲಾಯಿಸುತ್ತಿರುವಾಗಲೇ ಡ್ರೈವರ್ ಕಿರಣ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಬಸ್ ಕಂಡಕ್ಟರ್ ಓಬ್ಳೇಶ್ ಸಂಚರಿಸುತ್ತಿದ್ದ ಬಸ್ ಅನ್ನು ನಿಲ್ಲಿಸಿ, 50ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.@RLR_BTM@BMTC_BENGALURU#BMTCBusIncident#Bengaluru#BusConductor#BusDriver… pic.twitter.com/RGFQNaUA50
— NewsFirst Kannada (@NewsFirstKan)
ಬಿಎಂಟಿಸಿ ಬಸ್ ಚಲಾಯಿಸುತ್ತಿರುವಾಗಲೇ ಡ್ರೈವರ್ ಕಿರಣ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಬಸ್ ಕಂಡಕ್ಟರ್ ಓಬ್ಳೇಶ್ ಸಂಚರಿಸುತ್ತಿದ್ದ ಬಸ್ ಅನ್ನು ನಿಲ್ಲಿಸಿ, 50ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.@RLR_BTM@BMTC_BENGALURU#BMTCBusIncident#Bengaluru#BusConductor#BusDriver… pic.twitter.com/RGFQNaUA50
— NewsFirst Kannada (@NewsFirstKan) November 6, 2024
">November 6, 2024
ಕಂಡಕ್ಟರ್‌ಗೆ ಬಹುಮಾನ ಘೋಷಣೆ!
ಬಿಎಂಟಿಸಿ ಕಂಡಕ್ಟರ್ ಓಬ್ಳೇಶ್ ಅವರ ಈ ಸಾಹಸ ಮತ್ತು ಸಮಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. BMTC ಮುಖ್ಯ ಸಂಚಾರ ವ್ಯವಸ್ಥಾಪಕರಾದ ಜಿ.ಟಿ ಪ್ರಭಾಕರ್ ರೆಡ್ಡಿ ಅವರು ಪ್ರಯಾಣಿಕರ ಜೀವ ಉಳಿಸಿದ ಕಂಡಕ್ಟರ್‌ಗೆ ಬಹುಮಾನ ಘೋಷಣೆ ಮಾಡಿದ್ದಾರೆ. ನಾಳೆ ಬೆಳಗ್ಗೆ ಬಿಎಂಟಿಸಿ ಆಫೀಸ್‌ಗೆ ಕರೆದು ಕಂಡಕ್ಟರ್‌ಗೆ ಸನ್ಮಾನ ಮಾಡುವುದಾಗಿ ನ್ಯೂಸ್ ಫಸ್ಟ್ ಮೂಲಕ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us