newsfirstkannada.com

ಅಬ್ಬಾ! 5555 ಕೆಜಿ ನಾಣ್ಯಗಳಿಂದ ಆನೆ, ಅಂಬಾರಿ ಸಹಿತ ಬೃಹತ್ ತುಲಾಭಾರ; ಐತಿಹಾಸಿಕ ದಾಖಲೆ ಬರೆಯಲಿದೆ ಈ ಕಾರ್ಯಕ್ರಮ

Share :

Published January 30, 2024 at 7:39am

    ಫಕೀರ ಸಿದ್ದರಾಮ ಸ್ವಾಮೀಜಿ ಅಮೃತ ಮಹೋತ್ಸವ

    ಅಂಬಾರಿ, ಆನೆ ಸಹಿತ 5.5 ಟನ್ ತೂಕದ ತುಲಾಭಾರ ನಡೆಯಲಿದೆ

    ತುಲಾ ಭಾರಕ್ಕೆ 10 ರೂ ಮುಖಬೆಲೆಯ 75 ಲಕ್ಷದ 40 ಸಾವಿರ ರೂ ಬಳಕೆ

ಹುಬ್ಬಳ್ಳಿ: ಭಾರತದಲ್ಲೇ ಪ್ರಥಮ ಬಾರಿಗೆ ಶ್ರೀಗಳನ್ನು ಒಳಗೊಂಡಂತೆ 5 ಸಾವಿರದ 555 ಕೆಜಿ ನಾಣ್ಯಗಳಿಂದ ಆನೆ, ಅಂಬಾರಿ ಸಹಿತ ಬೃಹತ್ ತುಲಾಭಾರಕ್ಕೆ ಹುಬ್ಬಳ್ಳಿ ನೆಹರೂ ಮೈದಾನ ಸಿದ್ದಗೊಂಡಿದೆ. ಇದು ಐತಿಹಾಸಿಕ ದಾಖಲೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನದ ಹಿರಿಯ ಪೀಠಾಧಿಪತಿ ಫಕೀರ ಸಿದ್ದರಾಮ ಸ್ವಾಮೀಜಿ ಅಮೃತ ಮಹೋತ್ಸವದ ಅಂಗವಾಗಿ ಫೆಬ್ರವರಿ 1ರಂದು ಈ ತುಲಾಭಾರವನ್ನು ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮೆರವಣಿಗೆಗೆ ಚಾಲನೆ ನೀಡಲಿದ್ದು, ಕಾನೂನು ಸಚಿವ ಹೆಚ್.ಕೆ.ಪಾಟೀಲ್​ರಿಂದ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದೆ.

5 ಬೃಹತ್ ಕಂಬಗಳ ಮಧ್ಯದಲ್ಲಿ ತಕ್ಕಡಿ ಅನುಷ್ಠಾನಗೊಳಿಸಲು ಆಯೋಜಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಏಕಕಾಲಕ್ಕೆ ಶ್ರೀಗಳನ್ನು ಹೊತ್ತ ಅಂಬಾರಿ, ಆನೆ ಸಹಿತ ಅಂದಾಜು 5.5 ಟನ್ ತೂಕದ ತುಲಾಭಾರ ನಡೆಯಲಿದೆ.

ತುಲಾ ಭಾರಕ್ಕೆ 10 ರೂಪಾಯಿ ಮುಖಬೆಲೆಯ 5555 ಕೆಜಿ ನಾಣ್ಯ ಬಳಸಲಾಗುತ್ತಿದೆ. ಈ ನಾಣ್ಯಗಳು ಒಟ್ಟು 75 ಲಕ್ಷದ 40 ಸಾವಿರ ರೂಪಾಯಿಯದ್ದಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಇಷ್ಟೊಂದು ಬೃಹತ್ ತೂಕದ ತುಲಾಭಾರ ನಡೆಯುತ್ತಿದ್ದು, ಐತಿಹಾಸಿಕ ಪುಟದಲ್ಲಿ ದಾಖಲಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ! 5555 ಕೆಜಿ ನಾಣ್ಯಗಳಿಂದ ಆನೆ, ಅಂಬಾರಿ ಸಹಿತ ಬೃಹತ್ ತುಲಾಭಾರ; ಐತಿಹಾಸಿಕ ದಾಖಲೆ ಬರೆಯಲಿದೆ ಈ ಕಾರ್ಯಕ್ರಮ

https://newsfirstlive.com/wp-content/uploads/2024/01/Hubli-6.jpg

Load More