newsfirstkannada.com

JusticeForNeha: ನಮ್ಮ ಅಕ್ಕನ ಹಾಗೆ ನಮಗೂ ಆಗಬಹುದು; ನೇಹಾ ಸಾವಿಗೆ ಬಿಕ್ಕಿ ಬಿಕ್ಕಿ ಅತ್ತ ನಟಿ ಪ್ರಿಯಾ ಸವದಿ

Share :

Published April 19, 2024 at 5:18pm

Update April 19, 2024 at 5:21pm

  ಹುಬ್ಬಳ್ಳಿ ಖಾಸಗಿ ಕಾಲೇಜಿನ ಕ್ಯಾಂಪಸ್​​ನಲ್ಲಿ ನೇಹಾಳನ್ನು ಹತ್ಯೆ ಮಾಡಿದ ಹಂತಕ

  ಕಾರ್ಪೊರೇಟರ್ ಪುತ್ರಿ ನೇಹಾ ಕೊಲೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

  ಬೇಕೇ ಬೇಕು ನ್ಯಾಯ ಬೇಕು, ಜಸ್ಟೀಸ್ ಫಾರ್ ನೇಹಾ ಎಂದ ನಟಿ ಆಕ್ರೋಶ

ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಕ್ಯಾಂಪಸ್​​ನಲ್ಲಿ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾಳನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಫಯಾಜ್​ನನ್ನು (23) ಬಂಧಿಸಿದ್ದಾರೆ.

ಇದನ್ನೂ ಓದಿ: 11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ

ಕಾರ್ಪೊರೇಟರ್ ಪುತ್ರಿ ನೇಹಾ ಕೊಲೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಎಬಿವಿಪಿ ಕಾರ್ಯಕರ್ತರು ನೇಹಾ ಹತ್ಯೆ ಮಾಡಿದ ಆರೋಪಿ ಫಯಾಜ್‌‌ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ತಮ್ಮ ಪ್ರತಿಭಟನೆ ಮುಟ್ಟಲೆಂದು ‘ಜಸ್ಟೀಸ್ ಫಾರ್ ನೇಹಾ’ ಎಂದು ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇನ್ನು, ನೇಹಾ ಹಿರೇಮಠ್ ಕೊಲೆಗೆ ಸಂಬಂಧಿಸಿದಂತೆ ನಟಿ ಪ್ರಿಯಾ ಸವದಿ ಅವರು ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ನಟಿ ಪ್ರಿಯಾ ಸವದಿ, ನೇಹಾಳನ್ನು ಕೊಲೆ ಮಾಡಿದ ಆರೋಪಿಯನ್ನು ನಮ್ಮ ಕೈಗೆ ನೀಡಿ. ನಾವು ಏನು ಮಾಡಬೇಕು ಅದನ್ನು ಮಾಡುತ್ತೇವೆ. ನಾವೆಲ್ಲಾ ನೇಹಾಗಾಗಿ ಹೋರಾಟ ಮಾಡುತ್ತಿದ್ದೀವಿ. ಆದರೆ ನಾಳೆ ನಮಗೂ ಕೂಡ ಹೀಗೆ ಆಗಬಹುದು. ಎಷ್ಟು ಜನಕ್ಕೆ ಅಳಬೇಕು ಹೇಗೆ. ನಮಗೆ ಹೇಗೆ ರಕ್ಷಣೆ ನೀಡಬೇಕು. ನಮಗೆ ನ್ಯಾಯ ಬೇಕೇ ಬೇಕು. ಆರೋಪಿ ಫಯಾಜ್‌‌ನನ್ನು ಗಲ್ಲಿಗೇರಿಸಬೇಕು. ಬೇಕೇ ಬೇಕು ನ್ಯಾಯ ಬೇಕು. ಜಸ್ಟೀಸ್ ಫಾರ್ ನೇಹಾ ಎಂದು ಕೂಗುತ್ತ ಆಕ್ರೋಶ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

JusticeForNeha: ನಮ್ಮ ಅಕ್ಕನ ಹಾಗೆ ನಮಗೂ ಆಗಬಹುದು; ನೇಹಾ ಸಾವಿಗೆ ಬಿಕ್ಕಿ ಬಿಕ್ಕಿ ಅತ್ತ ನಟಿ ಪ್ರಿಯಾ ಸವದಿ

https://newsfirstlive.com/wp-content/uploads/2024/04/death15.jpg

Load More