newsfirstkannada.com

ನೂರಾರು ಮರಗಳಿಗೆ ಕೊಡಲಿ ಏಟು, ಅಕ್ರಮ ಕಂಡರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು! ಇದು ಬೆಲಿಯೇ ಎದ್ದು ಹೊಲ ಮೇಯ್ದ ಕಥೆ

Share :

Published August 16, 2023 at 6:53am

  ಪರವಾನಿಗೆ ಪಡೆದ್ರು.. ಮರ ಕಡಿದು ಮಾರಿದ್ರು

  ಗ್ರಾಂ.ಪಂ ಅಧ್ಯಕ್ಷ.. ಪಿಡಿಓ ಮೇಲೆ ಅಕ್ರಮದ ಆರೋಪ

  ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಗ್ರಾಮಸ್ಥರ ಆಗ್ರಹ

ಕೆಲವು ಜನಪ್ರತಿನಿಧಿಗಳು ಅಧಿಕಾರದ ಅಹಂನಿಂದ ಅಕ್ರಮಗಳನ್ನ ನಡೆಸಿ ಕೊನೆಗೆ ಕಾನೂನಿನ ಕುಣಿಗೆಗೆ ಕೊರಳೊಡ್ಡುತ್ತಾರೆ. ಸದ್ಯ ಇದೇ ಪರಿಸ್ಥಿತಿ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಮತ್ತಿಗಟ್ಟಿ ಗ್ರಾಮ ಪಂಚಾಯತ್​ನ​ ಮಾಜಿ ಅಧ್ಯಕ್ಷರಿಗೂ ಎದುರಾಗಿದೆ. ಮಾಡಿದ ತಪ್ಪಿಗೆ ತಲೆದಂಡ ತೆರಬೇಕಾದ ದುಸ್ಥಿತಿ ಬಂದೊದಗಿದೆ.

ಬೇಲಿಯೇ ಎದ್ದು ಹೊಲ ಮೆದ್ರೆ ಪರಿಸ್ಥಿತಿ ಹೇಗಿರುತ್ತೆ ಹೇಗಿರುತ್ತೆ ಅಲ್ವಾ.. ಸದ್ಯ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮತ್ತಿಗಟ್ಟಿಯಲ್ಲೂ ಇದೇ ಕತೆಯಾಗಿದೆ.. ಗ್ರಾಮದ ಜನರ ಸಮಸ್ಯೆ ಆಲಿಸಿ, ಅಭಿವೃದ್ಧಿಯ ಬೆಳಕು ಚೆಲ್ಲಬೇಕಿದ್ದ ಜನಪ್ರತಿನಿಧಿಯೇ ಗ್ರಾಮದಲ್ಲಿ ಕೊಳ್ಳೆ ಹೊಡೆವ ಕೆಲಸಕ್ಕೆ ಕೈ ಹಾಕಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.. ಗ್ರಾಮ ಪಂಚಾಯತ್​ ಅಧ್ಯಕ್ಷನ ಜೊತೆ ಪಿಡಿಓ ಸಹ ಕೈಜೋಡಿಸಿರೋದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಲಕ್ಷಾಂತರ ಬೆಲೆಯ ಮರಗಳಿಗೆ ಅಕ್ರಮದ ಕೊಡಲಿಪೆಟ್ಟು

ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಮತ್ತಿಗಟ್ಟಿ ಗ್ರಾಮದ ಉಳವಿ ಚನ್ನಬಸವೇಶ್ವರ ಗುಡ್ಡದಲ್ಲಿ ಬೆಳೆದಿದ್ದ ಮರಗಳನ್ನ ಅಕ್ರಮವಾಗಿ ಕಟಾವು ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

ಸೌದೆ ಮಾರಾಟದಿಂದ ಬಂದ ಹಣಕ್ಕೂ ಲೆಕ್ಕಪತ್ರವಿಲ್ಲ

ಉಳವಿ ಚನ್ನಬಸವೇಶ್ವರ ಗುಡ್ಡದಲ್ಲಿ ಕಂದಾಯ ಇಲಾಖೆಯ ಒಡೆತನದಲ್ಲಿರುವ 65.16 ಎಕರೆ ಪ್ರದೇಶದಲ್ಲಿ ಅಕೇಶಿಯಾ, ನಿಲಗಿರಿ, ಗೋಡಂಬಿ ಸೇರಿ ವಿವಿದ ಜಾತಿಯ ಮರಗಳ ಬೆಳೆಯಲಾಗಿತ್ತು.. ಆದರೆ ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ನೀಡಿ ಅರಣ್ಯ ಇಲಾಖೆಯಿಂದ ಗ್ರಾಮ ಪಂಚಾಯತ್ ಮರಗಳ ಕಟಾವಿಗೆ ಪರವಾನಿಗೆ ಪಡೆದುಕೊಂಡಿತ್ತು. ಈ ಹಿನ್ನಲೆ 856 ಮರಗಳನ್ನ ಕಟಾವು ಮಾಡಲು ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪರವಾನಿಗೆ ನೀಡಿದ್ರು. 2023ರ ಮಾರ್ಚ್​ 23ರಂದು ಪರವಾನಿಗೆ ನೀಡಿದ್ದ ಸಂರಕ್ಷಣಾಧಿಕಾರಿಗಳು, ಒಂದು ತಿಂಗಳಲ್ಲಿ ಕಟಾವ್ ಮುಗಿಸಲು ಕಾಲಾವಕಾಶ ನೀಡಿದ್ರು.. ಆದ್ರೆ ಅರಣ್ಯ ಇಲಾಖೆ ನೀಡಿದ್ದ ಪರವಾನಿಗೆಗಿಂತಲೂ ಹೆಚ್ಚಿನ ಮರಗಳನ್ನ ಕಟಾವು​ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಅಲ್ಲದೇ ಮರಗಳ ಕಟಾವಿನ ಬಳಿಕ ನಾಟಾ, ಸೌದೆ ಮಾರಾಟದಿಂದ ಬಂದ ಹಣಕ್ಕೂ ಲೆಕ್ಕಪತ್ರ ಗ್ರಾಮಪಂಚಾಯತ್​ ಲೆಕ್ಕ ಇಟ್ಟಿಲ್ಲ ಅಂತ ಹೇಳಲಾಗ್ತಿದೆ.

ಗ್ರಾಮ ಪಂಚಾಯತ್ ಸದಸ್ಯರೂ ಕೂಡಾ ಅಕ್ರಮದಲ್ಲಿ ಭಾಗಿ

ಮತ್ತಿಗಟ್ಟಿ ಗ್ರಾಮ ಪಂಚಾಯತ್​ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನ ಅಕ್ರಮವಾಗಿ ಕಟಾವು ಮಾಡಿರೋ ಪ್ರಕರಣದಲ್ಲಿ ಗ್ರಾ.ಪಂ ಮಾಜಿ​ ಅಧ್ಯಕ್ಷ ಹಾಗೂ ಪಿಡಿಓ ಹೆಸರು ಕೇಳಿಬಂದಿದೆ. ಮಾಜಿ ಅಧ್ಯಕ್ಷ ಫಕ್ಕಿರೇಶ ಹಂಚಿನಾಳ ಹಾಗೂ ಪಿಡಿಓ ಎಂ.ಎ ಚಕೋಲಿ ಮೇಲೆ ಆರೋಪ ಕೇಳಿಬಂದಿದ್ದು, ಕೆಲ ಗ್ರಾಮ ಪಂಚಾಯತ್ ಸದಸ್ಯರೂ ಕೂಡಾ ಅಕ್ರಮದಲ್ಲಿ ಭಾಗಿಯಾಗಿರೋ ಆರೋಪವಿದೆ.

ಇನ್ನೂ ಈ ಘಟನೆ ಬಗ್ಗೆ ನ್ಯೂಸ್ ಫಸ್ಟ್​ನೊಂದಿಗೆ ಮಾತನಾಡಿರೋ ಗ್ರಾಪಂ ಮಾಜಿ ಅಧ್ಯಕ್ಷ ಫಕ್ಕಿರೇಶ ಹಂಚಿನಾಳ, ನನಗೇನೂ ಗೊತ್ತಿಲ್ಲ ಗ್ರಾ.ಪಂ ಸದಸ್ಯರು ಹೇಳಿದಂತೆ ಕೇಳಿದ್ದೇನೆ ಅಂತ ಹಾರಿಕೆ ಉತ್ತರ ನೀಡಿದ್ದಾರೆ.

ಗ್ರಾಮದಲ್ಲಿ ಅಕ್ರಮವಾಗಿ ನೂರಾರು ಮರಗಳನ್ನ ಕಟಾವು ಮಾಡಿರೋ ಬಗ್ಗೆ ಗ್ರಾಮಸ್ಥರು ಸಹ ಆಕ್ರೋಶ ಹೊರಹಾಕಿದ್ದಾರೆ.. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಅಕ್ರಮದ ಹೆಸರಲ್ಲಿ ನೂರಾರು ಮರಗಳ ಮಾರಣ ಹೋಮ ನಡೆದಿರೋದು ಮತ್ತಿಗಟ್ಟಿ ಗ್ರಾಮದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಾದರೂ ಇನ್ನೂ ಕಣ್ಣುಮುಚ್ಚಿಕುಳಿತಿರುವ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸವನ್ನ ಮಾಡ್ತಾರಾ ಅಂತ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೂರಾರು ಮರಗಳಿಗೆ ಕೊಡಲಿ ಏಟು, ಅಕ್ರಮ ಕಂಡರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು! ಇದು ಬೆಲಿಯೇ ಎದ್ದು ಹೊಲ ಮೇಯ್ದ ಕಥೆ

https://newsfirstlive.com/wp-content/uploads/2023/08/tree-3.jpg

Load More