5 ವರ್ಷದ ಬಾಲಕಿ ಜೀವ ತೆಗೆದ ಆರೋಪಿಗೆ ಗುಂಡೇಟು.. ಚಿಕಿತ್ಸೆ ಫಲಿಸದೇ ಸಾವು

author-image
Bheemappa
Updated On
5 ವರ್ಷದ ಬಾಲಕಿ ಜೀವ ತೆಗೆದ ಆರೋಪಿಗೆ ಗುಂಡೇಟು.. ಚಿಕಿತ್ಸೆ ಫಲಿಸದೇ ಸಾವು
Advertisment
  • ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಾಲಕಿ ಮೇಲಿನ ಕೃತ್ಯ
  • ಆತ್ಮರಕ್ಷಣೆಗಾಗಿ ಗುಂಡು ಹಾರಿಸಿರುವ ಹುಬ್ಬಳ್ಳಿ ಪೊಲೀಸರು
  • ಆಸ್ಪತ್ರೆಗೆ ದಾಖಲು ಮಾಡಿದ್ರು ಆರೋಪಿಯ ಜೀವ ಹೋಗಿದೆ

ಹುಬ್ಬಳ್ಳಿ: 5 ವರ್ಷದ ಬಾಲಕಿಯ ಜೀವ ತೆಗೆದಿದ್ದ ಬಿಹಾರ ಮೂಲದ ಯುವಕ, ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಬಾಲಕಿಯ ಹತ್ಯೆ ಬಗ್ಗೆ ನ್ಯೂಸ್​ಫಸ್ಟ್ ನಿರಂತರ ವರದಿ ಮಾಡಿತ್ತು. ಜೊತೆಗೆ ಬಾಲಕಿಯ ಜೀವ ತೆಗೆದ ಆರೋಪಿಗೆ ತಕ್ಕ ಶಾಸ್ತಿ ಆಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು.

ಬಿಹಾರ ಮೂಲದ ಆರೋಪಿ ರಿತೇಶ್‌ ಕುಮಾರ್‌ ಪೊಲೀಸರ ಗುಂಡೇಟಿಗೆ ಬಲಿಯಾದ ಆರೋಪಿ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲೆಂದು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದನು. ಆಗ ಹುಬ್ಬಳ್ಳಿ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್​ ಮಾಡಿದ್ದರು. ಮಹಿಳಾ ಪಿಎಸ್‌ಐ ಗುಂಡೇಟು ನೀಡಿದ್ದರು. ಗುಂಡು ತಾಗಿ ತೀವ್ರವಾಗಿ ಗಾಯಗೊಂಡಿದ್ದ ಆರೋಪಿಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದಿದ್ದರಿಂದ ಜೀವ ಹೋಗಿದೆ.

ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಮಿಥುನ ರಾಶಿ ಸೀರಿಯಲ್​ ಖ್ಯಾತ ನಟ ಯದು ಶ್ರೇಷ್ಠ; ಹುಡುಗಿ ಯಾರು?

publive-image

ವಿಚಾರಣೆ ಮಾಡುವಾಗ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಈ ವೇಳೆ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಮಿಷನರ್‌ ಶಶಿಕುಮಾರ್‌ ಅವರು ಕಿಮ್ಸ್​ ಆಸ್ಪತ್ರೆಗೆ ಹೋಗಿ ಗಾಯಗೊಂಡಿರುವ ಮಹಿಳಾ ಪಿಎಸ್‌ಐ ಅನ್ನಪೂರ್ಣ ಹಾಗೂ ಸಿಬ್ಬಂದಿ ಆರೋಗ್ಯ ಹೇಗಿದೆ ಎಂದು ನೋಡಿಕೊಂಡು ಬಂದಿದ್ದಾರೆ.

ಆರೋಪಿ ಹುಬ್ಬಳ್ಳಿಯ ತಾರಿಹಾಳ ಬಳಿ ವಾಸವಿದ್ದನು ಎನ್ನುವ ಮಾಹಿತಿ ಆಧರಿಸಿ ಬಂಧಿಸಲೆಂದು ಪೊಲೀಸರು ಹೋಗಿದ್ದರು. ಆಗ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದನು. ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಆದರೆ ಆರೋಪಿ ಓಡಿ ಹೋಗಲು ಪ್ರಯತ್ನಿಸಿದಾಗ ಫೈರಿಂಗ್ ಮಾಡಲಾಗಿದ್ದು ಆರೋಪಿ ಬೆನ್ನಿಗೆ ಗುಂಡು ಹೊಕ್ಕಿತ್ತು. ಆದ್ರೆ ಆಸ್ಪತ್ರೆಯಲ್ಲಿ ​ಚಿಕಿತ್ಸೆ ಫಲಕಾರಿ ಆಗದೆ ಆರೋಪಿಯ ಜೀವ ಹೋಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment