ಮಹಿಳೆ ಸ್ನಾನ ಮಾಡುವ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ.. ಕಾಮುಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು

author-image
AS Harshith
Updated On
ಮಹಿಳೆ ಸ್ನಾನ ಮಾಡುವ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ.. ಕಾಮುಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು 
Advertisment
  • ಮೊಬೈಲ್​ ಕ್ಯಾಮೆರಾದಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ
  • ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದವನು ವಿಡಿಯೋ ಚಿತ್ರೀಕರಿಸುತ್ತಿದ್ದ
  • ಬಾತ್‌ರೂಮ್ ಕಿಟಕಿಯಲ್ಲಿ ಮೊಬೈಲ್​ ಇಟ್ಟು ಸಿಕ್ಕಿಬಿದ್ದ ಕಾಮುಕ

ಹುಬ್ಬಳ್ಳಿ: ವ್ಯಕ್ತಿಯೋರ್ವ ಮಹಿಳೆ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಚಿತ್ರೀಕರಿಸಿ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ನಡೆದಿದೆ. ಲಾಡ್‌ಸಾಬ್ ಎಂಬಾತ ವಿಡಿಯೋ ಚಿತ್ರೀಕರಿಸಿದ್ದು, ಆತನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ಲಾಡ್‌ಸಾಬ್ ಹುಬ್ಬಳ್ಳಿಯ ಗಣೇಶ ಪೇಟೆ ನಿವಾಸಿಯಾಗಿದ್ದು, ಲೋಹಿಯಾ ನಗರದಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದನು. ಮನೆಯ ಬಾತ್‌ರೂಮ್ ಕಿಟಕಿಯಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಿಸಿ ಸಿಕ್ಕಿಬಿದ್ದಿದ್ದಾನೆ.

[caption id="attachment_40432" align="alignnone" width="800"]publive-imageವಿಡಿಯೋ ಚಿತ್ರೀಕರಿಸಿ ಸಿಕ್ಕಿಬಿದ್ದ ಲಾಡ್‌ಸಾಬ್[/caption]

ಲಾಡ್‌ಸಾಬ್ ಮಹಿಳೆ ಸ್ನಾನ ಮಾಡುವ ವಿಡಿಯೋ ತೆಗೆದಿದ್ದಾನೆ. ಈ ವಿಚಾರ ಮಹಿಳೆ ಗೊತ್ತಾಗಿ ಚೀರಾಡಿದ್ದಾಳೆ. ತಕ್ಷಣವೇ ಸ್ಥಳೀಯರು ಜಮಾಯಿಸಿ ಆರೋಪಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಬಳಿಕ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment