Advertisment

11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ

author-image
Ganesh
Updated On
ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್​​ರನ್ನು​​ ಕೊಂದ ಆರೋಪಿ ಯಾರು?
Advertisment
  • ಕಾರ್ಪೊರೇಟರ್ ಹಿರೇಮಠ್ ನಿವಾಸಕ್ಕೆ ಬಿಜೆಪಿ ನಾಯಕರು ದೌಡು
  • ಮಗಳನ್ನು ಕಳೆದುಕೊಂಡ ನಿರಂಜನ್ ಹಿರೇಮಠ್​​ಗೆ ಸಾಂತ್ವನ
  • ಲವ್ ಜಿಹಾದ್ ಆಯಾಮದಲ್ಲೂ ತನಿಖೆ ಆಗಲಿ ಎಂದ ಕೇಂದ್ರ ಸಚಿವ

ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಕ್ಯಾಂಪಸ್​​ನಲ್ಲಿ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾಳನ್ನ ಹತ್ಯೆ ಮಾಡಲಾಗಿದೆ. ಪ್ರೀತಿಯ ವಿಚಾರಕ್ಕೆ ಬೆಳಗಾವಿ ಮೂಲದ ಫಯಾಜ್ ಎಂಬಾತ 11 ಬಾರಿ ಇರಿದು ಭೀಕರವಾಗಿ ಕೊಲೆಗೈದಿದ್ದಾನೆ.

Advertisment

ಕೊಲೆಯಾದ ಯುವತಿ ತಂದೆಯನ್ನ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಅರವಿಂದ ಬೆಲ್ಲದ್​​, ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿಯಾಗಿದ್ದಾರೆ. ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಗಳ ಸಾವಿಗೆ ನ್ಯಾಯ ಸಿಗಲೇಬೇಕು ಅಂತ ನಿರಂಜನ್ ಹಿರೇಮಠ್ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಮಗಳ ಸಾವಿಗೆ ನ್ಯಾಯ ಕೊಡಿ..’ ನೇಹಾ ಹಿರೇಮಠ್ ತಾಯಿ ಕಣ್ಣೀರು

publive-image

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್​​ನ ಆಡಳಿತದಲ್ಲಿ ಭಯ ಇಲ್ಲದಂತಾಗಿದೆ’ ಅಂತ ಕಿಡಿಕಾರಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಲಹ್ ಜಿಹಾದ್ ಆಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಲವ್ ಮಾಡುತ್ತಿದ್ದೇನೆ ಅಂತಾ ಇದ್ದರೂ ಸಹಿತ ಆಮೇಲೆ ಬೇಡ ಅಂದಿರಬಹುದು. ಅದಕ್ಕೆ ಮರ್ಡರ್ ಮಾಡಬೇಕು ಅಂತಾ ಏನಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂದರು. ಅಲ್ಲದೇ ಲವ್ ಜಿಹಾದ್​ ಆಯಾಮದಲ್ಲೂ ತನಿಖೆ ಆಗಬೇಕು. ಈ ವಿಚಾರದಲ್ಲೂ ಅತ್ಯಂತ ಗಂಭೀರವಾಗಿ ತನಿಖೆ ಆಗಬೇಕು ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕಾರ್ಪೊರೇಟರ್ ಪುತ್ರಿಯ ಭೀಕರ ಹತ್ಯೆ; ರಾಜಕಾಲುವೆಯ ಕೆಳಗೆ ಅಡಗಿ ಕುಳಿತಿದ್ದ ಆರೋಪಿ ಫಯಾಜ್

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment