Advertisment

Youtube ನೋಡಿ UPSCಯಲ್ಲಿ ರಾಜ್ಯಕ್ಕೆ 1st ರ್‍ಯಾಂಕ್ ಬಂದ ಹುಬ್ಬಳ್ಳಿ ಕುವರಿ.. ಈಕೆಯ ಸಾಧನೆಗೆ ಸೆಲ್ಯೂಟ್​​ ಹೊಡೆಯಲೇಬೇಕು

author-image
AS Harshith
Updated On
Youtube ನೋಡಿ UPSCಯಲ್ಲಿ ರಾಜ್ಯಕ್ಕೆ 1st ರ್‍ಯಾಂಕ್ ಬಂದ ಹುಬ್ಬಳ್ಳಿ ಕುವರಿ.. ಈಕೆಯ ಸಾಧನೆಗೆ ಸೆಲ್ಯೂಟ್​​ ಹೊಡೆಯಲೇಬೇಕು
Advertisment
  • ಮೂರು ಬಾರಿ ಪರೀಕ್ಷೆ ಬರೆದು ವಿಫಲರಾಗಿದ್ದ ವಿಜೇತಾ ಹೊಸಮನಿ
  • ಕೋಚಿಂಗ್ ಪಡೆಯದೇ ಎಕ್ಸಾಂಗೆ ಓದಿ ಪರೀಕ್ಷೆ ಪಾಸ್ ಆದ ಎಲ್‌ಎಲ್‌ಬಿ ಪದವೀಧರೆ​
  • ಯುಟ್ಯೂಬ್‌ ಸಹಾಯ, ಸ್ನೇಹಿತ ಮಾರ್ಗದರ್ಶನದಲ್ಲಿ ಪರೀಕ್ಷೆ ಬರೆದ ಹುಬ್ಬಳ್ಳಿಯ ಕುವರಿ

ದೇಶದ ಅತ್ಯುನ್ನತ ಪರೀಕ್ಷೆಯಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ಯುವತಿ ರಾಜ್ಯಕ್ಕೇ 1ನೇ ರ್‍ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

Advertisment

ವಿಜೇತಾ ಹೊಸಮನಿ, ಹುಬ್ಬಳ್ಳಿಯ ಗೋಕುಲ ರಸ್ತೆಯ ಸಿಲ್ವರ್ ಟೌನ್ ನಿವಾಸಿ. ಸಾಧನೆ ಮಾಡಿದ ಸಾರ್ಥಕ ಭಾವ ವಿಜೇತಾ ಅವರ ಕಣ್ಣಲ್ಲಿದೆ. ತಂದೆ, ತಾಯಿಯ ಕಣ್ಣಲ್ಲಿ ಆನಂದ ಭಾಷ್ಪ ಬಂದಿದೆ. ಮಗಳು ಮಾಡಿದ ಸಾಧನೆಯಿಂದ ತಂದೆ, ತಾಯಿ ಇಬ್ಬರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಐಎಎಸ್ ಮಾಡುವ ಕನಸು ಮೊದಲಿನಿಂದಲೂ ಹೊಂದಿದ್ದ ವಿಜೇತಾ, ಅಂದುಕೊಂಡ ಗುರಿಯನ್ನು ಸಾಧಿಸಿ ತೋರಿಸಿದ್ದಾರೆ.

ಕೋಚಿಂಗ್ ಇಲ್ಲ.. ಯುಟ್ಯೂಬ್‌ ನೋಡಿ ಪರೀಕ್ಷೆ ಪಾಸ್​

ಗುಜರಾತ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಬಿಎ ಎಲ್‌ಎಲ್‌ಬಿ ಪದವಿ ಪಡೆದ ವಿಜೇತಾ, ಯುಪಿಎಸ್‌ಸಿ ಪರೀಕ್ಷೆ ಕುರಿತು ಎಲ್ಲೂ ಕೋಚಿಂಗ್ ಪಡೆದಿರಲಿಲ್ಲ. ಯುಟ್ಯೂಬ್‌ನಲ್ಲಿ ಮಾಹಿತಿ ಸಂಗ್ರಹಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದ ಸ್ನೇಹಿತೆಯರ ಬಳಿ ಮಾರ್ಗದರ್ಶನ ಪಡೆದು ಇದೀಗ ವಿಜೇತಾ ಗುರಿ ಸಾಧಿಸಿದ್ದಾರೆ. ಕಾನೂನು ವಿಷಯದಲ್ಲೇ ವಿಜೇತಾ ಐಎಎಸ್ ಪರೀಕ್ಷೆ ಪಾಸು ಮಾಡಿದ್ದು ವಿಶೇಷ.

publive-image

ಇದನ್ನೂ ಓದಿ: UPSC ಫಲಿತಾಂಶ ಪ್ರಕಟ: ಕೋಚಿಂಗ್​ ಸೆಂಟರ್​ಗೆ ಹೋಗದೇ ಪಾಸ್​ ಆದ ಕನ್ನಡತಿ ಸೌಭಾಗ್ಯ ಬೀಳಗಿಮಠ

Advertisment

ಮಗಳು ದಕ್ಷ ಅಧಿಕಾರಿಯಾಗಲಿ ಎಂಬುದೇ ಹಾರೈಕೆ

ವಿಜೇತಾ ಹೊಸಮನಿ ಅವರ ತಂದೆ, ತಾಯಿ ಇಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದಾರೆ. ಮಗಳ ಸಾಧನೆಗೆ ಅವರೂ ಕೂಡ ಬೆನ್ನೆಲುಬಾಗಿ ನಿಂತಿದ್ದರು. ಸದಾ ಅವರಿಗೆ ಮಾರ್ಗದರ್ಶನ ಮಾಡುವ ಮೂಲಕ ಹುರಿದುಂಬಿಸುತ್ತಿದ್ದರು. ಈಗ ತಮ್ಮ ಮಗಳು ಮಾಡಿದ ಸಾಧನೆಗೆ ಅವರು ಆನಂದ ಬಾಷ್ಪವನ್ನೇ ಸುರಿಸಿದ್ದಾರೆ. ಅಲ್ಲದೇ ಮಗಳು ದಕ್ಷ ಅಧಿಕಾರಿಯಾಗಲಿ ಎಂದು ಹಾರೈಸಿದ್ದಾರೆ.

ಧಾರವಾಡ ಜಿಲ್ಲೆಯ ಹಿರಿಮೆ ಈಕೆ

ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ ವಿಜೇತಾ ಮೂರು ಬಾರಿಯೂ ವಿಫಲರಾಗಿದ್ದರು. ಇದೀಗ ನಾಲ್ಕನೇ ಬಾರಿ ಪರೀಕ್ಷೆ ಬರೆದು ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಮಗಳ ಸಾಧನೆ ಕಂಡು ತಂದೆ, ತಾಯಿ ಇಬ್ಬರೂ ಮಗಳಿಗೆ ಪ್ರೀತಿಯ ಅಪ್ಪುಗೆ ನೀಡಿ, ಸಿಹಿ ಮುತ್ತು ನೀಡಿದ್ದಾರೆ. ನಿರಂತರ ಪರಿಶ್ರಮದ ಫಲವಾಗಿ ವಿಜೇತಾ ಹೊಸಮನಿ ಇದೀಗ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ ಧಾರವಾಡ ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment