Advertisment

‘ಮಗಳ ಸಾವಿಗೆ ನ್ಯಾಯ ಕೊಡಿ..’ ನೇಹಾ ಹಿರೇಮಠ್ ತಾಯಿ ಕಣ್ಣೀರು

author-image
Ganesh
Updated On
11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ
Advertisment
  • ಹುಬ್ಬಳ್ಳಿ ಕಾಲೇಜು ಕ್ಯಾಂಪಸ್​ನಲ್ಲಿ ಬರ್ಬರ ಹತ್ಯೆ
  • ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿಯ ಕೊಲೆ
  • ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದ ಪೋಷಕರು

ಹಾಡಹಗಲೇ ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಕ್ಯಾಂಪಸ್​​ನಲ್ಲಿ ಯುವತಿಯೊಬ್ಬಳ ಬರ್ಬರ ಹತ್ಯೆ ನಡೆದಿದ್ದು ಕ್ಯಾಂಪಸ್​​ನ್ನು ಬೆಚ್ಚಿಬೀಳಿಸಿದೆ.

Advertisment

ಹುಬ್ಬಳ್ಳಿ ಮಹಾನಗರ ಪಾಲಿಕೆ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಹಿರೇಮಠ್ ಹತ್ಯೆಯಾದ ದುರ್ದೈವಿ. ಪ್ರೀತಿಯ ವಿಚಾರಕ್ಕೆ ಬೆಳಗಾವಿ ಮೂಲದ ಫಯಾಜ್ ಎಂಬಾತ 11 ಬಾರಿ ಇರಿದು ಭೀಕರವಾಗಿ ಕೊಲೆಗೈದಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇತ್ತ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಕಾರ್ಪೊರೇಟರ್ ಪುತ್ರಿಯ ಭೀಕರ ಹತ್ಯೆ; ರಾಜಕಾಲುವೆಯ ಕೆಳಗೆ ಅಡಗಿ ಕುಳಿತಿದ್ದ ಆರೋಪಿ ಫಯಾಜ್

ಮುಗಿಲುಮುಟ್ಟಿದ ನೇಹಾ ಹೆತ್ತವರ ಆಕ್ರಂದನ
ಸದ್ಯ ನಾವು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಯಾರು ಈ ಕೆಲಸ ಮಾಡಿದ್ದಾನೋ, ಅವನಿಗೆ ಶಿಕ್ಷೆ ಕೊಡಬೇಕು. ಇಲ್ಲ ಅಂದರೆ ಕಾಲೇಜ್​​ ಅನ್ನೇ ಬಂದ್ ಮಾಡಿಸುತ್ತೇವೆ. ನನ್ನ ಮಗಳಿಗೆ ನ್ಯಾಯ ಬೇಕು ಎಂದು ನೇಹಾ ತಾಯಿ ಕಣ್ಣೀರು ಇಟ್ಟಿದ್ದಾರೆ.

Advertisment

ಇದನ್ನೂ ಓದಿ:ಮಕ್ಕಳಿಗೆ ತುಂಬಾನೇ ಡೇಂಜರ್ ಸೆರೆಲಾಕ್; ನಿಮ್ಮ ಮಗುವಿಗೆ ಕೊಡುವ ಮುನ್ನ ಈ ಸ್ಟೋರಿ ಓದಿ​..!

publive-image

ನೇಹಾ ತಂದೆ ನಿರಂಜನ್ ಹಿರೇಮಠ್ ಮಾತನಾಡಿ.. ಅವನಿಗೆ ಯಾವುದೇ ಕಾರಣಕ್ಕೂ ಬೇಲ್ ಸಿಗಬಾರದು. ಸರ್ಕಾರ ಆ ಕೆಲಸವನ್ನು ಮಾಡಬೇಕು. ಅವನಿಗೆ ಗಲ್ಲು ಶಿಕ್ಷೆ ಆಗಬೇಕು. ನಾನೇ ಹುಬ್ಬಳ್ಳಿ-ಮಹಾನಗರ ಪಾಲಿಕೆ ಸದಸ್ಯ. ನನ್ನ ಮಗಳಿಗೆ ಹೀಗೆ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment