/newsfirstlive-kannada/media/post_attachments/wp-content/uploads/2024/10/KImms.jpg)
ಸಾವು ಅನ್ನೋದು ಹೇಗೆ ಬೇಕಾದ್ರೂ ಬರಬಹುದು, ಎಡವಿ ಬಿದ್ರು ಸಾವಿನ ಕದ ತಟ್ಟುವ ಪರಿಸ್ಥಿತಿ ಬಂದೋದಗುತ್ತೆ, ಅಂತದ್ರಲ್ಲಿ ಇಲ್ಲೊಬ್ಬ ಯುವಕನ ಎದೆಯನ್ನ ರಾಡ್ ಸೀಳಿದ್ರೂ ಆತ ಸಾವನ್ನೇ ಗೆದ್ದು ಬಂದಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ರಾಡ್ ಗುಂಡಿಗೆ ಸೀಳಿದ್ರೂ, ಸಾವನ್ನೇ ಗೆದ್ದು ಬಂದ!
ಅಕ್ಟೋಬರ್​ 2, ಬೆಳಿಗ್ಗೆ 4 ಗಂಟೆ. ಮಂಜು ಸುರಿಯೋ ವೇಳೆ, ಎಲ್ಲರೂ ಗಾಢ ನಿದ್ರೆಯಲ್ಲಿರುವ ಸಮಯ, ಲಾರಿಯಲ್ಲಿ ಶಿರಸಿ ಮೂಲದ ಇಬ್ಬರು ಸಹೋದರರು ಬೆಂಗಳೂರಿಗೆ ಬರ್ತಿದ್ರು. ಆದ್ರೆ ನೋಡ ನೋಡುತ್ತಲೇ ಹಾವೇರಿಯ ಹೂಳಿಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಣ್ಣು ತೆರೆದುನೋಡಿದ್ರೆ ಗುಂಡಿಗೆಯೇ ಸ್ತಬ್ಧವಾಗುವಂತ ಚಿತ್ರಣ. ಯಾಕಂದ್ರೆ ಅಲ್ಲಿ ಗುಂಡಿಗೆಗೆ ರಾಡ್​ ಹೊಕ್ಕಿತ್ತು.
ಸಾವನ್ನೇ ಗೆದ್ದು ಬಂದ ವ್ಯಕ್ತಿ
ಚಾಲಕ ಶಿವಾನಂದ ಬಡಗಿ ತಮ್ಮ ದಯಾನಂದ ಎದೆಯನ್ನ 98 ಸೆಂಟಿ ಮೀಟರ್​ ಉದ್ದದ, 3 ಇಂಚು ಅಗಲದ ಕಬ್ಬಿಣದ ರಾಡ್​ ಹೊಕ್ಕಿ ಹೊರಬಂದಿತ್ತು. ಕೂಡಲೇ ಶಿವಾನಂದ ಸ್ಥಳೀಯರ ಸಹಾಯದಿಂದ ಎದೆಯಲ್ಲಿನ ರಾಡ್ ಸಮೇತ ಮೊದಲು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಆತನನ್ನು ರವಾನಿಸಲಾಯಿತು. ಪರಿಸ್ಥಿತಿಯ ಗಂಭೀರತೆ ಅರಿತು ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.
/newsfirstlive-kannada/media/post_attachments/wp-content/uploads/2024/10/KImms-1.jpg)
ಎರಡೂವರೆ ಗಂಟೆಗಳ ಶಸ್ತ್ರಚಿಕಿತ್ಸೆ
ಇನ್ನು ದಯಾನಂದನ ಪರಿಸ್ಥಿತಿ ಕಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು ಸಹ ಗಾಬರಿಗೊಂಡಿದ್ರು. ಮುಂಜಾನೆ ಅಪಘಾತ ಸಂಭವಿಸಿದ್ರೆ ಕಿಮ್ಸ್ ಆಸ್ಪತ್ರೆಗೆ ಬರುವಷ್ಟರಲ್ಲಿ 12:30 ಆಗಿತ್ತು. ರಾಡ್ ಎಡ ಭಾಗದ ಎದೆಗೆ ಸಾಕಷ್ಟು ಹಾನಿ ಮಾಡಿತ್ತು. ಹೃದಯದಿಂದ ಕೇವಲ 4 ರಿಂದ 5 ಸೆಂಟಿ ಮೀಟರ್ ಅಂತರದಲ್ಲಿ ರಾಡ್ ನಾಟಿತ್ತು. ಇಂತಹ ಪರಿಸ್ಥಿತಿಯಲ್ಲಿ ಛಲ ಬಿಡದೆ ಡಾ. ರಮೇಶ್ ಹೊಸಮನಿ ನೇತೃತ್ವದ ಹತ್ತಕ್ಕೂ ಹೆಚ್ಚು ವೈದ್ಯರ ತಂಡ ಎರಡೂವರೆ ಗಂಟೆಗಳ ಸತತ ಪ್ರಯತ್ನದಿಂದ ಕಬ್ಬಿಣದ ರಾಡನ್ನ ಹೊರತೆಗೆದಿದ್ದಾರೆ.
ಇದನ್ನೂ ಓದಿ: ಮಹಿಳೆಯರೇ ಎಚ್ಚರ! ಅಪರಿಚಿತರ ಮೇಲೆ ಯಾವುದೇ ಕಾರಣಕ್ಕೂ ನಂಬಿಕೆ ಬೇಡ; ಇಲ್ಲಿದೆ ನಿಮ್ಮ ಭವಿಷ್ಯ
ಸಾವನ್ನ ಗೆದ್ದು ಬಂದ ದಯಾನಂದ್​ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೆರಡು ದಿನದಲ್ಲಿ ಪೂರ್ಣವಾಗಿ ಚೇತರಿಸಕೊಳ್ಳಲಿದ್ದಾನೆ. ಇನ್ನು ಸಂಪೂರ್ಣ ಚಿಕಿತ್ಸೆ ಉಚಿತವಾಗಿ ನೀಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಕಮ್ಮಾರ ಹಾಗೂ ಡಾ.ರಮೇಶ್ ಹೊಸಮನಿ ತಿಳಿಸಿದ್ದಾರೆ.
ಸದ್ಯ ದಯಾನಂದ್ ಆರೋಗ್ಯವಾಗಿದ್ದು ಮಾತನಾಡುವಷ್ಟು ಚೇತರಿಸಿಕೊಂಡಿದ್ದಾನೆ. ಆಸ್ಪತ್ರೆಗೆ ಬರುವ ತನಕ ದಯಾನಂದನನ್ನ ಕಂಡಂತ ಜನ ಈತ ಬದುಕಲು ಸಾಧ್ಯವೇ ಇಲ್ಲಾ ಎಂದುಕೊಂಡಿದ್ರು, ಆದರೆ ಸಾವು ಬದುಕಿನ ನಡುವೆ ಹೋರಾಟದಲ್ಲಿದ್ದವನ ಜೀವನ ಅಚ್ಚರಿಯ ರೂಪದಲ್ಲಿ ಉಳಿಸಿದ ಕಿಮ್ಸ್ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us