newsfirstkannada.com

ಪರ್ಸನಲ್ ಆಗಿ ಮಾತಾಡಬೇಕು, ಲಾಡ್ಜ್​​ಗೆ ಬರುವಂತೆ ಅಂಜಲಿಗೆ ಒತ್ತಾಯ; ಆಮೇಲೆ ಆಗಿದ್ದೇನು?

Share :

Published May 17, 2024 at 7:09pm

Update May 17, 2024 at 7:16pm

  ಅಂಜಲಿಯನ್ನ ಕೊಲೆ ಮಾಡಿ ಮೈಸೂರಿಗೆ ಎಸ್ಕೇಪ್ ಆಗಲು ಹಂತಕನ ಪ್ಲಾನ್

  ನಸುಕಿನ ಜಾವ ಮನೆಗೆ ನುಗ್ಗಿ ಅಂಜಲಿ ಜೀವ ಬಲಿ ಪಡೆದ ಪಾಪಿ ಗಿರೀಶ್

  ಕಾರ್ಪೊರೇಟರ್ ಪುತ್ರಿ ನೇಹಾ ಹತ್ಯೆ ಬೆನ್ನಲ್ಲೇ ಮತ್ತೊಂದು ಬರ್ಬರ ಕೊಲೆ

ಹುಬ್ಬಳ್ಳಿ ನೇಹಾ ಮರ್ಡರ್ ರಾಜ್ಯವನ್ನ ಬೆಚ್ಚಿ ಬೀಳಿಸಿತ್ತು. ಪರ ವಿರೋಧದ ಚರ್ಚೆಗಳ ನಡುವೆ ನ್ಯಾಯಕ್ಕಾಗಿ ಪ್ರತಿಭಟನೆಗಳು ನಡೆದಿದ್ದವು. ಆದ್ರೆ ಈ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಯುವತಿ ಅಂಜಲಿ ಹತ್ಯೆ ನಡೆದು ಹೋಗಿತ್ತು. ಘಟನೆ ನಡೆದು 24 ಗಂಟೆ ಕಳೆದ್ರೂ ಆರೋಪಿ ಎಲ್ಲಿದ್ದಾನೆ ಆನ್ನೋದು ಗೊತ್ತಾಗಿರಲಿಲ್ಲ. ಆದರೆ ಇದೀಗ ಅಂಜಲಿ ಜೀವ ತೆಗೆದ ಪಾಪಿ ರಣ ರೋಚಕವಾಗಿ ಪೊಲೀಸರ ಕೈಯಲ್ಲಿ ತಗ್ಲಾಕೊಂಡಿದ್ದಾನೆ. ಎಸ್ಕೇಪ್ ಆಗೋದಕ್ಕೆ ಇವನು ರೆಡಿ ಮಾಡಿದ್ದ ಪ್ಲಾನ್ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ.

ದುರಂತ ಏನಂದ್ರೆ ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹತ್ಯೆ ಜನಮಾನಸದಲ್ಲಿ ಇನ್ನೂ ಹಾಗೇಯೇ ಇದೆ. ನೇಹಾ ತಂದೆ ನಿರಂಜನ ಅವರು ನನ್ನ ಮಗಳಿಗೆ ಆದ ರೀತಿ ಬೇರೆಯವರಿಗೆ ಆಗೋದು ಬೇಡಾ. ಕಠಿಣ ಕಾನೂನು ತನ್ನಿ ಅಂತ ಕೇಂದ್ರ ಮತ್ತು ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ.‌ ಕಾಕತಾಳೀಯ ಎಂಬಂತೆ ಇದೇ ನಿರಂಜನ ಹಿರೇಮಠ ವಾರ್ಡ್​ನಲ್ಲಿಯೇ, ನೇಹಾ ಹತ್ಯೆ ಮಾದರಿಯಲ್ಲೇ ಅಂಜಲಿ ಅಂಬಿಗೇರ್ ಮರ್ಡರ್ ನಡೆದು ಹೋಗಿತ್ತು. ನಸುಕಿನ ಜಾವ ಮನೆಗೆ ನುಗ್ಗಿ ಅಂಜಲಿ ಜೀವ ಬಲಿ ಪಡೆದು ಪಾಪಿ ಗಿರೀಶ್ ಪರಾರಿಯಾಗಿಬಿಟ್ಟಿದ್ದ. ಆದ್ರೆ ಅಂಜಲಿ ಜೀವ ತೆಗೆದಿದ್ದ ಗಿರೀಶ್​ ರಣ ರೋಚಕವಾಗಿ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಅವನ ಕ್ರೈ ಡೈರಿಯೇ ಭಯಾನಕವಾಗಿದೆ.

ಬೆಳ್ಳಂಬೆಳಗ್ಗೆ ಬಾಗಿಲು ಬಡಿದವ ಅಂಜಲಿ ಉಸಿರಿಗೆ ಕೊಳ್ಳಿ ಇಟ್ಟಿದ್ದ

ಬುಧವಾರ ಬೆಳ್ಳಂಬೆಳಗ್ಗೆ ವಿಶ್ವ ಅಲಿಯಾಸ್ ಗಿರೀಶ್ ಏಕಾಏಕಿ ಅಂಜಲಿ ಮನೆಯ ಬಾಗಿಲು ಬಡಿದಿದ್ದ. ದುರಂತ ಏನಂದ್ರೆ ಅವತ್ತು ಅಂಜಲಿಯೇ ಬಾಗಿಲು ತೆರಿದಿದ್ದಳು. ಮೊದಲಿಗೆ ಅಂಜಲಿ ಅಜ್ಜಿ ಮತ್ತು ಸಹೋದರಿಯರ ಜೊತೆಗೆ ಮಾತನಾಡಿದ ವಿಶ್ವ, ಬಳಿಕ ಸ್ವಲ್ಪ ಪರ್ಸನಲ್ ಮಾತನಾಡಬೇಕು ಅಂತ ಅಂಜಲಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಏಕಾಏಕಿ ಚಾಕು ಹಾಕಲು ಶುರು ಮಾಡಿದ್ದ. ಇದನ್ನು ಅಂಜಲಿ ಕುಟುಂಬಸ್ಥರು ತಡೆಯಲು ಮುಂದಾಗಿದ್ದಾರೆ. ಆದ್ರೆ ಮನೆಯಲ್ಲಿ ಇರೋದೆಲ್ಲ ಹೆಣ್ಮಕ್ಕಳೇ. ಅದೆಷ್ಟೇ ಪ್ರಯತ್ನ ಪಟ್ರೂ ಸಾಧ್ಯವಾಗಿಲ್ಲ. ಪಾಪಿ ಗಿರೀಶ್​ ಅಂಜಲಿಯನ್ನ ಮನೆಯ ತುಂಬೆಲ್ಲ ಎಳೆದಾಡಿ ಚಾಕುವಿನಿಂದ ಮನ ಬಂದಂತೆ ಚುಚ್ಚಿ ಬಿಟ್ಟಿದ್ದ. ತಾಯಿ ಇಲ್ಲದ ಮಗಳು ಅಜ್ಜಿಯ ಆರೈಕೆಯಲ್ಲಿ ಬೆಳೆದಿದ್ಳು. ಕ್ಯಾಟರಿಂಗ್ ಕೆಲಸ ಮಾಡ್ಕೊಂಡು ತಾನಾಯ್ತು ತನ್ನ ಕೆಲಸ ಅಂತ ಇದ್ದಿದ್ದ ಅಂಜಲಿ ಹಿಂದೆ ಈ ಗಿರೀಶ್ ಬೆನ್ನು ಬಿದ್ದಿದ್ದ.

ಇದನ್ನೂ ಓದಿ: BREAKING: ವಿದ್ಯಾರ್ಥಿಗಳೇ ಗಮನಿಸಿ.. SSLC ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಪ್ರೀತಿಗಾಗಿ ದುಂಬಾಲು ಹಿಡಿದಿದ್ದ. ಅದ್ರಂತೆ ಬುಧವಾರ ಮನೆಗೆ ನುಗ್ಗಿ ಅಂಜಲಿಯನ್ನ ಮೈಸೂರಿಗೆ ಬಾ ಅಂತ ಕರೆದಿದ್ದ. ಆದ್ರೆ ಗಿರೀಶ್ ಮಾತಿಗೆ ಸೊಪ್ಪು ಹಾಕದ ಅಂಜಲಿ ಬರಲ್ಲ ಎಂದಿದ್ದಾಳೆ. ಅಷ್ಟೆ ನೋಡಿ ಈ ಪಾಪಿ ಗಿರೀಶ್ ರಕ್ಕಸನಂತೆ ವರ್ತಿಸಿ ಅಂಜಲಿ ಹೊಟ್ಟೆಗೆ ಚಾಕು ಹಾಕಿ ಬಿಟ್ಟಿದ್ದ. ಅಂಜಲಿ ಸತ್ತಳೆದು ಕನ್ಫರ್ಮ್ ಆದ ಬಳಿಕ ಕೊಲೆಗಾರ ಗಿರೀಶ್ ಅಲ್ಲಿಂದ ಎಸ್ಕೇಪ್ ಆಗಿಬಿಟ್ಟಿದ್ದ.  ಅಂಜಲಿಯನ್ನ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಗಿರೀಶ್​ ಸಿನಿಮಾ ಸ್ಟೈಲ್​ನಲ್ಲಿ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಆದ್ರೆ ಕೊಲೆ ಮಾಡಿದ ಬಳಿಕ ಈ ಗಿರೀಶ್ ಹೋಗಿದ್ದು ಎಲ್ಲಿಗೆ? ಎಸ್ಕೇಪ್ ಆಗೋದಕ್ಕೆ ಏನೆಲ್ಲ ಪ್ಲಾನ್ ಮಾಡಿದ್ದ ಅನ್ನೋದು ಗೊತ್ತಾದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ.

ಕೊಲೆ ಮಾಡಿ ಮೈಸೂರಿಗೆ ಎಸ್ಕೇಪ್ ಆಗಲು ಹಂತಕನ ಪ್ಲಾನ್

ಇಲ್ಲಿ ಒಂದು ವಿಚಾರ ಹೇಳಲೇಬೇಕು. ಅಂಜಲಿಯನ್ನ ಕೊಲೆ ಮಾಡಿರೋ ಈ ಗಿರೀಶ್​ ಮೈಸೂರಿನ ಲಾಡ್ಜ್ ಒಂದರಲ್ಲಿ ಕೆಲಸ ಮಾಡ್ತಿದ್ದ. ಇದೇ ಲಾಡ್ಜ್​ನಲ್ಲಿರುವಾಗಲೇ ಅಂಜಲಿಗೆ ಕರೆ ಮಾಡಿ ತನ್ನ ಜೊತೆ ಬರುವಂತೆ ಬೆದರಿಕೆ ಹಾಕಿದ್ದ, ಆದ್ರೆ ಅಂಜಲಿ ಇವನ ಮಾತಿಗೆ ಹುಂ ಅಂದಿರಲಿಲ್ಲ. ಹೀಗಾಗಿ ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದ ಗಿರೀಶ್​ ಒಂದು ಅಂಜಲಿಯನ್ನ ಜೊತೆಯಲ್ಲಿ ಕರ್ಕೊಂಡು ಹೋಗ್ಬೇಕು. ಇಲ್ಲ ಆಕೆ ಕಥೆ ಮಗಿಸ್ಬೇಕು ಅಂದುಕೊಂಡಿದ್ದ. ಅದ್ರಂತೆ ಬುಧವಾರ ಮೈಸೂರಿನಲ್ಲಿ ಕೆಲಸ ಮಾಡ್ತಿದ್ದ ಲಾಡ್ಜ್ ಓನರ್ ಹತ್ತಿರ ಐದು ಸಾವಿರ ಹಣ ಕೂಡ ಪಡೆದಿದ್ದ. ಆ ಹಣ ತೆಗೆದುಕೊಂಡು ಹುಬ್ಬಳಿಗೆ ಬಂದವನೇ ಸೀದಾ ಅಂಜಲಿ ಮನೆಗೆ ನುಗ್ಗಿ ಅಂಜಲಿ ಜೀವ ತೆಗೆದು ಬಿಟ್ಟಿದ್ದ. ಕೊಲೆ ಮಾಡಿದ ಬಳಿಕ ಮತ್ತೆ ಮೈಸೂರಿಗೆ ಎಸ್ಕೇಪ್ ಆಗ್ಬೇಕು ಅಂದುಕೊಂಡವನು ದಾವಣಗೆರೆಯಲ್ಲಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ.

ಹೌದು, ಅಂಜಲಿ ಕೊಲೆ ಮಾಡಿದ ತಕ್ಷಣ ತಗ್ಲಾಕೊಂಡ್ರೆ ಕಷ್ಟ ಅಂತ ಹಂತಕ ಗಿರೀಶ್ ಎಸ್ಕೇಪ್ ಆಗೋದಕ್ಕೆ ಪಕ್ಕಾ ಪ್ಲಾನ್ ಮಾಡಿದ್ದ. ಅದ್ರಂತೆ ಬುಧವಾರ ಮುಂಜಾನೆ 5.30ಕ್ಕೆ ಅಂಜಲಿ ಕೊಲೆ ಮಾಡಿದವನು ಸೀದಾ ಹುಬ್ಬಳಿ ಬಸ್ ನಿಲ್ದಾಣಕ್ಕೆ ಹೋಗಿದ್ದಾನೆ. ಅಲ್ಲಿಂದ ಶಿವಮೊಗ್ಗ ಬಸ್​ ಹತ್ತಿ ಹಾವೇರಿಯಲ್ಲಿ ಇಳಿದಿದ್ದಾನೆ. ಇಲ್ಲಿಂದ ಮೈಸೂರಿಗೆ ಹೋಗ್ಬೇಕು ಅಂದುಕೊಂಡವನು ವಿಶ್ವ ಮಾನವ ಟ್ರೈನ್ ಹತ್ತಿ ಮೈಸೂರಿಗೂ ರೀಚ್ ಆಗಿದ್ದಾನೆ. ಆದ್ರೆ ಅದ್ಯವಾಗ ಅಂಜಲಿ ಹತ್ಯೆ ಸುದ್ದಿ ಜೋರಾಯ್ತೊ ಗಿರೀಶ್ ಅಲರ್ಟ್ ಆಗಿದ್ದ. ಮೈಸೂರಿನಲ್ಲಿದ್ರೆ ಕಷ್ಟ ಅಂತ ಮತ್ತೆ ಅದೇ ವಿಶ್ವ ಮಾನವ ಟ್ರೇನ್ ಹತ್ತಿ ವಾಪಸ್ ಬರೋದಕ್ಕೆ ಯತ್ನಿಸಿದ್ದಾನೆ. ಆದ್ರೆ ಈ ವೇಳೆ ನಡೆದ ಒಂದು ಎಡವಟ್ಟು ಗಿರೀಶ್ ಲಾಕ್ ಆಗುವಂತೆ ಮಾಡಿದೆ. ರೈಲಿನಲ್ಲಿ ನಡೆದ ಅದೊಂದು ಘಟನೆಯಿಂದ ಗಿರೀಶ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾನೆ. ಕೊಲೆ ಆರೋಪಿ ಗಿರೀಶ್​ನನ್ನ ಪತ್ತೆ ಮಾಡ್ಬೇಕು ಅಂತ ಹುಬ್ಬಳ್ಳಿ ಕಮಿಷನರ್ ಸುಮಾರು ಎಂಟು ತಂಡ ರಚನೆ ಮಾಡಿದ್ರು. ಎಂಟು ತಂಡ ಮಾಡಿದ್ರೂ ಗಿರೀಶ್ ಎಲ್ಲಿದ್ದಾನೆ ಅನ್ನೋದು ಪೊಲೀಸರಿಗೆ ತಿಳಿದು ಬಂದಿರಲಿಲ್ಲ. ಈಗ ತಾನೇ ಮಾಡಿದ ಅದೊಂದು ಎಡವಟ್ಟಿನಿಂದ ಗಿರೀಶ್ ಆಸ್ಪತ್ರೆ ಸೇರಿದ್ದಾನೆ. ಮೈಸೂರಿನಿಂದ ವಾಪಸ್​ ಹೊರಟವನು ರೈಲಿನಲ್ಲಿ ಮಾಡಿದ್ದ ಅದೊಂದು ಕೆಲಸದಿಂದ ಪೊಲೀಸರ ಕೈಯಲ್ಲಿ ತಗ್ಲಾಕೊಂಡಿದ್ದಾನೆ.

ರೈಲಿನಲ್ಲಿ ಮಹಿಳೆಗೆ ಚಾಕು ಇರಿಯಲು ಯತ್ನ!

ಮೈಸೂರಿನಿಂದ ವಾಪಸ್ ಟ್ರೈನ್ ಹತ್ತಿದ್ದ ಗಿರೀಶ್​​ ಇರಲಾದೇ ಇರುವೆ ಬಿಟ್ಕೊಂಡ್ರು ಅನ್ನೋ ಹಾಗೆ ರೈಲಿನಲ್ಲಿ ಪ್ರಯಾಣಿಸ್ತಿದ್ದ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಜನರೆಲ್ಲ ಸೇರಿ ಗಿರೀಶ್​ಗೆ ಥಳಿಸಿದ್ದಾರೆ. ಆದ್ರೆ ಈ ವೇಳೆ ಪಾಪಿ ಗಿರೀಶ್​ ಆ ಮಹಿಳೆ ಹೊಟ್ಟೆಗೆ ಚಾಕು ಇರಿಯೋದಕ್ಕೆ ಯತ್ನಿಸಿದ್ದಾನೆ. ಆಗ ಮಹಿಳೆ ಕೈಗೆ ಗಾಯ ಕೂಡ ಆಗಿದೆ. ಇದಾದ ಮೇಲೆ ರೈಲಿನಲ್ಲೇ ಇದ್ರೆ ಮ್ಯಾಟರ್ ಸಿರಿಯಸ್ ಆಗುತ್ತೆ ಅಂದುಕೊಂಡ ಗಿರೀಶ್ ಚಲಿಸೋ ರೈಲಿನಿಂದಲೇ ಜಂಪ್ ಮಾಡಿದ್ದಾನೆ. ಇಷ್ಟೆಲ್ಲಾ ಘಟನೆ ನಡೆದ್ರೂ ರೈಲಿನಲ್ಲಿದವರಿಗಾಗಲೀ ಅಥವಾ ಮಹಿಳೆಗಾಗಲೀ ಈ ಗಿರೀಶ್ ಯಾರು ಅನ್ನೋದು ಗೊತ್ತಾಗಿರಲಿಲ್ಲ. ಹೌದು, ರೈಲಿನಲ್ಲಿದವರಿಗೂ ಈ ಗಿರೀಶ್ ಯಾರು? ಅನ್ನೋದು ಗೊತ್ತಿರಲಿಲ್ಲ. ಮಹಿಳೆಗೆ ಚಾಕು ಇರಿದವ ರೈಲಿನಿಂದ ಜಂಪ್​ ಮಾಡಿದ್ದ. ಚಲಿಸೋ ರೈಲಿನಿಂದ ಹಾರಿದ್ರ ಪರಿಣಾಮ ಗಿರೀಶ್ ತಲೆಗೆ ಮತ್ತು ಬೆನ್ನಿಗೆ ಗಂಭೀರವಾದ ಗಾಯಗಳಾಗಿದ್ವು. ಈ ವೇಳೆ ರೈಲಿನ ಹಳಿ ಬದಿಯಲ್ಲಿ ಬಿದ್ದಿದ್ದ ಗಿರೀಶ್​ನನ್ನ ಸ್ಥಳೀಯರೆಲ್ಲ ಸೇರಿ ದಾವಣಗೆರೆ ಜಿಲ್ಲಾಸ್ಪತ್ರೆ ದಾಖಲಿಸಿದ್ರು. ಇವನ ದುರಾದೃಷ್ಟಕ್ಕೆ ರೈಲಿನಲ್ಲಿ ಗಿರೀಶ್ ಚಾಕು ಇರಿದಿದ್ದ ಮಹಿಳೆ ಕೂಡ ಇದೇ ಆಸ್ಪತ್ರೆಗೆ ದಾಖಲಾಗಿದ್ದಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರ್ಸನಲ್ ಆಗಿ ಮಾತಾಡಬೇಕು, ಲಾಡ್ಜ್​​ಗೆ ಬರುವಂತೆ ಅಂಜಲಿಗೆ ಒತ್ತಾಯ; ಆಮೇಲೆ ಆಗಿದ್ದೇನು?

https://newsfirstlive.com/wp-content/uploads/2024/05/anjali2.jpg

Load More