/newsfirstlive-kannada/media/post_attachments/wp-content/uploads/2024/12/ayappa-swami.jpg)
ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಇಂದು ಉಸಿರು ಬಿಟ್ಟಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ತೇಜಸ್ ಸುತಾರೆ ಇಂದು ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ.
26 ವರ್ಷದ ತೇಜಸ್ ಸುತಾರೆ ಹುಬ್ಬಳ್ಳಿಯ ರಾಮನಗರದ ನಿವಾಸಿಯಾಗಿದ್ದರು. ಹೋಟೆಲ್‌ನಲ್ಲಿ ಚೆಫ್ ಆಗಿ ಕೆಲಸ ಮಾಡುತ್ತಿದ್ದರು. ತೇಜಸ್ ಸತತ ಮೂರನೇ ಬಾರಿಗೆ ಮಾಲೆ ಹಾಕಿಕೊಂಡು ಶಬರಿಮಲೆ ಹೋಗಲು ವ್ರತ ಮಾಡುತ್ತಿದ್ದರು. ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: 9 ಅಯ್ಯಪ್ಪ ಮಾಲಾಧಾರಿಗಳಲ್ಲಿ 6 ಸ್ವಾಮಿಗಳು ಇನ್ನಿಲ್ಲ.. ಕರುಳು ಹಿಂಡುತ್ತೆ ತಾಯಂದಿರ ಕಣ್ಣೀರು
ದುರಂತವಾಗಿದ್ದು ಹೇಗೆ?
ಡಿಸೆಂಬರ್ 22ರ ರಾತ್ರಿ ಅಯ್ಯಪ್ಪ ಮಾಲಾಧಾರಿಗಳು ಪೂಜೆ ಮುಗಿಸಿಕೊಂಡು ಗಾಢನಿದ್ರೆಗೆ ಜಾರಿದ್ರು. ಬೆಳಗ್ಗೆ ಎದ್ದು ತಣ್ಣೀರು ಸ್ನಾನ ಮಾಡಿ ಮತ್ತೆ ವ್ರತ ಮಾಡಬೇಕಾಗಿತ್ತು. ಆದ್ರೆ, ಮಧ್ಯರಾತ್ರಿ 1.30ರ ವೇಳೆಗೆ ಅಡುಗೆ ಮಾಡಿಕೊಳ್ಳಲು ಇಟ್ಟುಕೊಂಡಿರೋ ಸಿಲಿಂಡರ್‌ಗೆ ಮಾಲಾಧಾರಿಗಳು ಯಾರೋ ನಿದ್ದೆ ಗಣ್ಣಲ್ಲಿ ಒದ್ದಿರೋ ಸಾಧ್ಯತೆ ಇದೆ. ಇದ್ರಿಂದ ಕೆಳಗ್ಗೆ ಬಿದ್ದ ಸಿಲಿಂಡರ್ ಸೋರಿಕೆಯಾಗಿದೆ. ಇನ್ನು ದೇವರ ಫೋಟೋ ಮುಂದೆ ಜ್ಯೋತಿಯನ್ನು ಹಚ್ಚಿಡಲಾಗಿತ್ತು. ಆ ಜ್ಯೋತಿಯ ಯಾತ್ರೆಗೆ ಹೋಗಿ ಬರುವವರೆಗೂ ಹಾಗೇ ಇರುತ್ತೆ. ಅದನ್ನು ಇರುಮುಡಿಯನ್ನು ದೇವಸ್ಥಾನದಲ್ಲಿ ಇಳಿಸಿ ಬರೋವರೆಗೂ ಹೊತ್ತಿ ಉರಿಯುತ್ತಲೇ ಇರಬೇಕಾಗುತ್ತೆ. ಅದೇ ದೀಪದಿಂದ ಬೆಂಕಿ ತಗುಲಿದೆ. ಹೀಗಾಗಿ ಮಲ್ಕೊಂಡಲೇ 9 ಜನ ಬೆಂದು ಹೋಗಿದ್ದಾರೆ. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಈ 7 ಮಂದಿ ಸಾವನ್ನಪ್ಪಿದ್ದಾರೆ.
58 ವರ್ಷದ ನಿಜಲಿಂಗಪ್ಪ ಬೇಪುರಿ, 18 ವರ್ಷದ ಸಂಜಯ ಸವದತ್ತಿ, 19 ವರ್ಷದ ಲಿಂಗರಾಜ ಬೀರನೂರ, 16 ವರ್ಷದ ರಾಜು ಮೂಗೇರಿ, 22 ವರ್ಷದ ಮಂಜುನಾಥ ವಾಗ್ಮೋಡೆ ಮತ್ತು 19 ವರ್ಷದ ಶಂಕರ್, 26 ವರ್ಷದ ತೇಜಸ್ ಸುತಾರೆ ಮೃತಪಟ್ಟವರು.
ಸಂಜಯ್ ಸವದತ್ತಿ, ರಾಜು ಮೂಗೇರಿ, ಲಿಂಗರಾಜ ಬೀರನೂರ ಮನೆಗೆ ಒಬ್ಬರೇ ಗಂಡು ಮಕ್ಕಳಾಗಿದ್ದರು. ಇವರಿಂದಲೇ ಕುಟುಂಬ ನಡೆಯಬೇಕಾಗಿತ್ತು. ಇದೀಗ ಕುಟುಂಬಕ್ಕೆ ಆಧಾರವಾಗಿದ್ದವರನ್ನೇ ಕಳೆದುಕೊಂಡ ಕುಟುಂಬಕ್ಕೆ ದಿಕ್ಕೆ ತೋಚದ ಸ್ಥಿತಿ ನಿರ್ಮಾಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ