ಅಯ್ಯಪ್ಪನೂ ಕಾಪಾಡಲಿಲ್ಲ.. ಹುಬ್ಬಳ್ಳಿಯಲ್ಲಿ ಒಬ್ಬನೇ ಮಗನನ್ನು ಕಳೆದುಕೊಂಡ ಮಲ್ಲವ್ವ ಕಣ್ಣೀರು

author-image
admin
Updated On
9 ಅಯ್ಯಪ್ಪ ಮಾಲಾಧಾರಿಗಳಲ್ಲಿ 6 ಸ್ವಾಮಿಗಳು ಇನ್ನಿಲ್ಲ.. ಕರುಳು ಹಿಂಡುತ್ತೆ ತಾಯಂದಿರ ಕಣ್ಣೀರು
Advertisment
  • ಸಿಲಿಂಡರ್‌ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆ
  • ಬದುಕಿ ಬರಬಹುದು ಎಂದು ಕಾಯುತ್ತಿದ್ದ ಕುಟುಂಬಸ್ಥರು
  • ತರಕಾರಿ ಮಾರಾಟ ಮಾಡಿ ಮಗನನ್ನು ಬೆಳೆಸುತ್ತಿದ್ದ ಮಲ್ಲವ್ವ

ಸ್ವಾಮಿಯೇ ಶರಣಂ ಅಯ್ಯಪ್ಪ.. ಪ್ರತಿ ವರ್ಷದ ಆ ಮಣಿಕಂಠನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಮಾಲೆ ಧರಿಸುತ್ತಾರೆ. ಕಟ್ಟುನಿಟ್ಟಿನ ವ್ರತ ಹಾಗೂ ಧ್ಯಾನ ಮಾಡುತ್ತಾ ಶಬರಿಮಲೆಗೆ ಹೋಗಿ ಬರುತ್ತಾರೆ. ಆದರೆ ಹುಬ್ಬಳ್ಳಿಯಲ್ಲಿ ನಡೆದಿರೋ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ದುರಂತ ಕರಾಳ ದಿನಗಳಿಗೆ ಸಾಕ್ಷಿಯಾಗಿದೆ. ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತಿಬ್ಬರು ಅಯ್ಯಪ್ಪನ ಭಕ್ತ ಇಂದು ಕಣ್ಣು ಮುಚ್ಚಿದ್ದಾರೆ.

ಹುಬ್ಬಳ್ಳಿಯ ಗ್ಯಾಸ್​​ ಸಿಲಿಂಡರ್​ ದುರಂತದಲ್ಲಿ ಪ್ರಾಣ ಬಿಟ್ಟ ಒಬ್ಬೊಬ್ಬರ ಕಥೆಯೂ ಕರುಣಾಜನಕ. ಮನೆಯಲ್ಲಿ ಬದುಕಿ ಬರಬಹುದು ಎಂದು ಕಾಯುತ್ತಿದ್ದ ಕುಟುಂಬಸ್ಥರಿಗೆ ಆಘಾತ ಮೇಲೆ ಆಘಾತವಾಗುತ್ತಿದೆ. ಮೃತ ಕುಟುಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

publive-image

ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್‌ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆ ಆಗಿದೆ. ಕಳೆದ ಡಿಸೆಂಬರ್ 22ರಂದು ಸಿಲಿಂಡರ್‌ ಸ್ಫೋಟಗೊಂಡಿದ್ದು, 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ರು. ಶೇಕಡ 80ಕ್ಕೂ ಹೆಚ್ಚು ಸುಟ್ಟಗಾಯಗಳಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ನರಳಾಡುತ್ತಿದ್ರು.

ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಘಟನೆ​; ಜೀವ ಬಿಟ್ಟ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ, 5ಕ್ಕೆ ಏರಿಕೆ 

ಈ ಸಿಲಿಂಡರ್ ದುರಂತದಲ್ಲಿ ಗಾಯಗೊಂಡಿದ್ದ ಅಯ್ಯಪ್ಪ ಮಾಲಾಧಾರಿ 16 ವರ್ಷದ ರಾಜು ಮೂಗೇರಿ ಮನೆಯಲ್ಲಿ ಸೂತಕ ಆವರಿಸಿದೆ. ಇಂದು ಮೂರನೇ ದಿನದ ತಿಥಿ ಕಾರ್ಯ ನಡೆಯುತ್ತಿದ್ದು, ರಾಜುವಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಮೃತ ರಾಜುವಿನ ತಂದೆ ಕೃಷ್ಣ ನಿಧನರಾಗಿ ಐದು ವರ್ಷಗಳಷ್ಟೇ ಕಳದಿದೆ. ತಾಯಿ ಮಲ್ಲವ್ವಳಿಗೆ ಈ ರಾಜು ಒಬ್ಬನೇ ಆಸರೆಯಾಗಿದ್ದ. 4 ವರ್ಷದವನಿದ್ದಾಗ ರಾಜು ದೊಡ್ಡ ಸಹೋದರ ಡೆಂಗ್ಯೂನಿಂದ ಪ್ರಾಣ ಬಿಟ್ಟಿದ್ದ. ಚಿಕ್ಕ ಗೂಡಿನಲ್ಲಿ ರಾಜು ಹಾಗೂ ಆಕೆಯ ತಾಯಿ ಇಬ್ಬರೇ ಜೀವನ ನಡೆಸುತ್ತಿದ್ದರು.

ರಾಜು ಶಾಲೆಯಿಂದ ಬಂದು ನೇರವಾಗಿ ತರಕಾರಿ ಮಾರೋಕೆ ತೆರಳುತ್ತಿದ್ದ. ರಾಜು ತಾಯಿ ಮಲ್ಲವ್ವ ಕೂಡ ತರಕಾರಿ ಮಾರಾಟ ಮಾಡಿ, ಮಗನನ್ನ ಸಾಕುತ್ತಿದ್ದಳು. ತಾಯಿ ಕಷ್ಟಕ್ಕೆ ಆಸರೆಯಾಗಿ ನಿಲ್ಲುತ್ತಿದ್ದ ರಾಜು ಕಾಣೆಯಾಗಿರೋದು ಮಲ್ಲವ್ವ ಕಂಗಾಲಾಗುವಂತೆ ಮಾಡಿದೆ. ರಾಜು ಮೂಗೇರಿ ಮನೆಯಲ್ಲಿ ಕುಟುಂಬಸ್ಥರ, ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ. ಹೆತ್ತ ಮಗನನ್ನು ನೆನೆದು ತಾಯಿ ಮಲ್ಲವ್ವ ಕಣ್ಣೀರು ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment