newsfirstkannada.com

ಹುಬ್ಬಳ್ಳಿ: ಅಪ್ರಾಪ್ತೆಯ ಗರ್ಭಿಣಿ ಮಾಡಿ ಪರಾರಿ ಆಗಿದ್ದ ಆರೋಪಿ ಸದ್ದಾಂಗೆ ಗುಂಡೇಟು

Share :

Published May 4, 2024 at 8:38am

    ನೇತಾ ಹತ್ಯೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ದುರ್ಘಟನೆ

    16 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ ಯುವಕ

    ಅನ್ಯಕೋಮಿನ ಯುವಕನ ವಿರುದ್ಧ ಸಿಡಿದೆದ್ದ ಹಿಂದೂ ಕಾರ್ಯಕರ್ತರು

ಧಾರವಾಡ: ನೇತಾ ಹತ್ಯೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಅಹಿತಕರ ಘಟನೆ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವಕನೋರ್ವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ್ದಾನೆ.

ಆರೋಪಿ ಕಾಲಿಗೆ ಗುಂಡೇಟು

ಆರೋಪಿ ಸದ್ದಾಂಗೆ ಎಂಬಾತ 16 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ್ದನು. ಈ ವಿಚಾರ ತಿಳಿದಂತೆ ಎಸ್ಕೇಪ್​ ಆಗಿದ್ದನು. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸ್ಥಳಾಂತರಿಸುವ ವೇಳೆ ಆರೋಪಿ ಸುತ್ತಗಟ್ಟಿ ಗ್ರಾಮದ ಸಮೀಪ‌ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿಗೆ ಗುಂಡೇಟು ಹೊಡೆದಿದ್ದಾರೆ.

ಆರೋಪಿ ಸದ್ದಾಂ

ತಪ್ಪಿಸಿಕೊಳ್ಳಲು ಯತ್ನ

ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ನಡೆದ ಘಟನೆ ಇದಾಗಿದೆ. ಆರೋಪಿಯನ್ನು ಠಾಣೆಯಿಂದ ಧಾರವಾಡಕ್ಕೆ ಸ್ಥಳಾಂತರ ಮಾಡುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಧಾರವಾಡ ವಿದ್ಯಾಗಿರಿ ಠಾಣೆಯ ಸಿಪಿಐ ಸಂಗಮೇಶ‌ರಿಂದ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.

ಧಾರವಾಡದಿಂದ ಹುಬ್ಬಳ್ಳಿಗೆ ಆರೋಪಿ ಶಿಫ್ಟ್​

ಆರೋಪಿ ಸದ್ದಾಂನನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಗಿದೆ. ಅಂಬ್ಯುಲೆನ್ಸ್ ನಲ್ಲಿ ಹುಬ್ಬಳ್ಳಿಗೆ ರವಾನೆ.

ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ

ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಏನಂದ್ರು?

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಭೇಟಿ ನೀಡಿದ್ದು, ಬಳಿಕ ಮಾಧ್ಯಮಗಳಿಗೆ ಕಮಿಷನರ್ ಪ್ರತಿಕ್ರಿಯಿಸಿದ್ದಾರೆ. ಎಪಿಎಂಸಿ ಕೇಸ್ ಪತ್ತೆ ಹಚ್ಚಲು ಟೀಮ್ ಕಳಿಹಿಸಿದ್ವಿ. ಅದರಲ್ಲಿ ಒಂದು ಟೀಮ್‌ಗೆ ಈತ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಐದಾರು ಕಿಮೀ ದೂರದಲ್ಲಿರೋದು ತಿಳಿಯುತ್ತೆ. ಆಗ ಆತನನ್ನು ಬಂಧಿಸಿ ಕರೆತರಲು ತೆರಳಿದ್ದರು. ಆ ವೇಳೆಯಲ್ಲಿ ವಿದ್ಯಾಗಿರಿ ಇನ್ಸ್ಪೆಕ್ಟರ್ ನೇತೃತ್ವದ ಟೀಮ್ ಹೋಗಿತ್ತು. ಮುಂದಿನ ತನಿಖೆಗೆ ಠಾಣೆಗೆ ಕರೆತರಲು ಮುಂದಾಗಿದ್ದರು ಎಂದು ಹೇಳಿದ್ದಾರೆ.

ಬಳಿಕ ಆರೋಪಿಯನ್ನು ಬಂಧಿಸಿ ಜೀಪ್ ಹತ್ತಿಸುವಾಗ ಪೆನ್ ನೈಪ್ ‌ನಿಂದ ಎಡ ಭುಜಕ್ಕೆ ಚುಚ್ಚಿದ್ದಾನೆ. ಕಾನ್ಸ್​​ ಟಬಲ್ ಅರುಣ ಮೇಲೆ ಮೊದಲು ಹಲ್ಲೆ ಮಾಡುತ್ತಾನೆ. ಆಗ ಕಂಟ್ರೋಲ್ ಮಾಡಲು ಆತನನ್ನು ಕೆಳಗೆ ತಳ್ಳಿದ್ದರು. ಆಗ ಅದೇ ಚಾಕುವಿನಿಂದ ಇನ್ಸಪೆಕ್ಟರ್‌ ಮಂಡಿ ಮತ್ತು ಬೆನ್ನ ಮೇಲೆ ಹಲ್ಲೆ ಮಾಡುತ್ತಾನೆ. ಅವನನ್ನ ಕಂಟ್ರೋಲ್ ಮಾಡಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆಗ ಎಡಗಾಲಿಗೆ ಫೈರ್ ಮಾಡಿದ್ದಾರೆ. ಆರೋಪಿ ಸೇರಿ ಮೂರು ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ರೇಣುಕಾ ಸುಕುಮಾರ ಎಂದಿದ್ದಾರೆ

ಸಿಪಿಐ ಮತ್ತು ಕಾನ್ಸಟೇಬಲ್‌ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಅಡ್ಮಿಟ್ ಮಾಡಿಕೊಂಡಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು ಒಂದು ಕೇಸ್ ದಾಖಲಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಬ್ಬಳ್ಳಿ: ಅಪ್ರಾಪ್ತೆಯ ಗರ್ಭಿಣಿ ಮಾಡಿ ಪರಾರಿ ಆಗಿದ್ದ ಆರೋಪಿ ಸದ್ದಾಂಗೆ ಗುಂಡೇಟು

https://newsfirstlive.com/wp-content/uploads/2024/05/Saddam-1.jpg

Load More