newsfirstkannada.com

ನೇಹಾ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್; ಫಯಾಜ್ ಹೆಸರಲ್ಲಿ ದಿಕ್ಕು ತಪ್ಪಿಸಲು ಕಿಡಿಗೇಡಿಗಳ ಯತ್ನ

Share :

Published April 21, 2024 at 8:40am

  ನೇಹಾ, ಫಯಾಜ್ ಹೆಸರಲ್ಲಿ ದಿಢೀರ್ ಅಂತ ಹೊಸ ಅಕೌಂಟ್‌ಗಳು ಕ್ರಿಯೇಟ್

  ನೇಹಾ ಫಯಾಜ್ ಟ್ರೂ ಲವ್, ಜಸ್ಟೀಸ್ ಫಾರ್ ಲವ್ ವೈರಲ್ ಮಾಡಲು ಯತ್ನ

  ಕೊಲೆ ಸಮರ್ಥಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆರೋಪ

ಹುಬ್ಬಳ್ಳಿ: ನೇಹಾ ಹಿರೇಮಠ್‌ ಬರ್ಬರ ಹತ್ಯೆಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಕುತ್ತಿಗೆಗೆ ಚುಚ್ಚಿ ಕೊಂದ ಫಯಾಜ್‌ಗೆ ಗಲ್ಲು ಶಿಕ್ಷೆಯಾಗಲಿ ಅನ್ನೋ ಕೂಗು ಜೋರಾಗಿದೆ. ಇಂತಹ ಸಂದರ್ಭದಲ್ಲೇ ಕೆಲವು ಕಿಡಿಗೇಡಿಗಳು ನೇಹಾ ಕೊಲೆ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಒಂದು ಕಡೆ ಜಸ್ಟೀಸ್ ಫರ್ ನೇಹಾ ಅಭಿಯಾನ ನಡೆಯುತ್ತಿದೆ. ಮತ್ತೊಂದೆಡೆ ನೇಹಾ, ಫಯಾಜ್ ಹೆಸರಲ್ಲಿ ದಿಢೀರ್ ಅಂತ ಸೋಷಿಯಲ್‌ ಮೀಡಿಯಾ ಅಕೌಂಟ್ ಕ್ರಿಯೇಟ್ ಮಾಡಿ ಫೋಟೋಗಳನ್ನ ವೈರಲ್ ಮಾಡಲಾಗುತ್ತಿದೆ. ಕೊಲೆಯನ್ನೇ ಸಮರ್ಥಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ಆರೋಪ ಕೇಳಿ ಬಂದಿದೆ.

‘ನೇಹಾ ಫಯಾಜ್ ಟ್ರೂ ಲವ್ ಪೋಸ್ಟ್‌’
ಇನ್​ಸ್ಟಾಗ್ರಾಮ್​ನಲ್ಲಿ ಹೊಸದಾಗಿ ಅಕೌಂಟ್ ಕ್ರಿಯೇಟ್ ಮಾಡಿರುವ ಕೆಲವರು ನೇಹಾ ಫಯಾಜ್ ಟ್ರೂ ಲವ್, ಜಸ್ಟೀಸ್ ಫಾರ್ ಲವ್ ಅಂತ ಪೋಸ್ಟ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್ ಖಾತೆಗಳಿಂದ ಫೋಟೋ ಶೇರ್ ಮಾಡಿ ವೈರಲ್ ಆಗಿದೆ. ಈ ಫೋಟೋ ವೈರಲ್ ಆಗಿದ್ದಕ್ಕೆ ನೇಹಾ ತಂದೆ ಆಕ್ರೋಶ ಹೊರ ಹಾಕಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

ಇದನ್ನೂ ಓದಿ: JusticeForNeha ಹೋರಾಟಕ್ಕೆ ಭಾರೀ ಬೆಂಬಲ; ಫಯಾಜ್‌ಗೆ 6 ತಿಂಗಳಲ್ಲೇ ಶಿಕ್ಷೆ ಆಗುತ್ತಾ?

ಹೀಗೆ ಹಲವು ರೀತಿಯ ಫೋಟೋ ಮತ್ತು ವಿಡಿಯೋ ವೈರಲ್ ಮಾಡಲು ಇನ್​ಸ್ಟಾಗ್ರಾಮ್​ನ ಕೆಲವು ಕಿಡಿಗೇಡಿಗಳು ಬಳಸಿಕೊಂಡಿದ್ದಾರೆ. ನೇಹಾ ಫಯಾಜ್ ಟ್ರೂ ಲವ್ ಅನ್ನೋ ಫೋಟೋ ವೈರಲ್ ಆದ ಬಳಿಕ ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ ಹಿಂದೂ ಕಾರ್ಯಕರ್ತರು ಇಬ್ಬರು ಆರೋಪಿಗಳನ್ನ ಹಿಡಿದು ವಿದ್ಯಾಗಿರಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಶಾದಿಕ್ ತಡಕೋಡ ಹಾಗೂ ಆದಿಲ್ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ.

ಫಯಾಜ್ ಹಿಡಿದ ಪೊಲೀಸರಿಗೆ ಬಹುಮಾನ!
ನೇಹಾ ಹಿರೇಮಠ್ ಕೊಲೆಯಾದ ಬಳಿಕ ಒಂದೇ ಗಂಟೆಯಲ್ಲಿ ಆರೋಪಿಯನ್ನ ಬಂಧಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡಕ್ಕೆ ಕಾಪ್ ಆಫ್ ದಿ ಮಂತ್ ಅವಾರ್ಡ್ ನೀಡಲಾಗಿದೆ. ಹಂತಕ ಫಯಾಜ್‌ನನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ಹಾಗೂ 25 ಸಾವಿರ ರೂಪಾಯಿ ಬಹುಮಾನ ನೀಡಲಾಗಿದೆ.

ಚಾಕುವಿನಿಂದ ಹಿರಿದು ಬರ್ಬರವಾಗಿ ಕೊಲೆ ಮಾಡಿದ್ದ ಹಂತಕ ಫಯಾಜ್‌ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿಯನ್ನು ಪತ್ತೆ ಹಚ್ಚಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ವಿಶೇಷ ತಂಡವನ್ನು ರಚಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತವಾದ ತಂಡ ಹಂತಕನ ಸುಳಿವನ್ನು ಬೆನ್ನತ್ತಿ ಕೇವಲ ಒಂದು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ಪ್ರಶಂಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್; ಫಯಾಜ್ ಹೆಸರಲ್ಲಿ ದಿಕ್ಕು ತಪ್ಪಿಸಲು ಕಿಡಿಗೇಡಿಗಳ ಯತ್ನ

https://newsfirstlive.com/wp-content/uploads/2024/04/HBL_NEHA_1.jpg

Load More