ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಘಟನೆ; ಜೀವ ಬಿಟ್ಟ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ, 8ಕ್ಕೆ ಏರಿಕೆ

author-image
Bheemappa
Updated On
ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಘಟನೆ; ಜೀವ ಬಿಟ್ಟ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ, 8ಕ್ಕೆ ಏರಿಕೆ
Advertisment
  • ಘಟನೆಯಲ್ಲಿ ಎಷ್ಟು ಮಾಲಾಧಾರಿಗಳು ಗಾಯಗೊಂಡಿದ್ರು
  • ಡಿಸೆಂಬರ್ 22ರ ಮಧ್ಯೆರಾತ್ರಿ ನಡೆದಿದ್ದ ಈ ಘೋರ ಘಟನೆ
  • ಸಿಲಿಂಡರಿಗೆ ಮಾಲಾಧಾರಿಯ ಕಾಲು ಟಚ್ ಆಗಿ ಆಯಿತಾ?

ಬೆಳಗಾವಿ: ಹುಬ್ಬಳ್ಳಿಯ ಸಾಯಿನಗರದಲ್ಲಿ ಸಿಲಿಂಡರ್ ಸೋರಿಕೆ ಘಟನೆಗೆ ಸಂಬಂಧಿಸಿದಂತೆ ಜೀವ ಕಳೆದುಕೊಂಡವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಮಾಲಾಧಾರಿ ಕಣ್ಮುಚ್ಚಿದ್ದಾರೆ.

ಪ್ರಕಾಶ ಬಾರಕೇರ ಪ್ರಾಣ ಬಿಟ್ಟಿದ್ದಾರೆ. ಹುಬ್ಬಳ್ಳಿಯ ಸಾಯಿನಗರದ ಅಚ್ಚವ್ವಳ ಕಾಲೋನಿಯಲ್ಲಿ ಡಿಸೆಂಬರ್ 22 ರಂದು ಅಂದರೆ ಕಳೆದ ಭಾನುವಾರ ರಾತ್ರಿ ಸಿಲಿಂಡರ್ ಸ್ಫೋಟವಾಗಿ 9 ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಇದರಲ್ಲಿ ಪ್ರಕಾಶ ಬಾರಕೇರ ಸೇರಿ ಶಂಕರ್ ಉರಬಿ (29), ತೇಜಸ್ ಸುತಾರೆ, ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ಮಂಜುನಾಥ ವಾಗ್ಮೋಡೆ (22) ಕಣ್ಮುಚ್ಚಿದ್ದಾರೆ. ಉಳಿದ ಒಬ್ಬ ಮಾಲಾಧಾರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.

ಪ್ರಕಾಶ ಬಾರಕೇರ ಪ್ರಾಣ ಕಳೆದುಕೊಳ್ಳುವ ಮೂಲಕ ಘಟನೆಯಲ್ಲಿ ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳ ಓರ್ವ ಮಾತ್ರ ಬದುಕುಳಿದ್ದಾರೆ. ಪ್ರಕಾಶ ಅವರ ಮಗ ವಿನಾಯಕ ಬಾರಕೇರ ಚೇತರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಘಟನೆ​; ಜೀವ ಬಿಟ್ಟ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ, 5ಕ್ಕೆ ಏರಿಕೆ

publive-image

ಘಟನೆ ನಡೆದಿರುವುದು ಹೇಗೆ?

ಡಿಸೆಂಬರ್ 22ರ ನಡುರಾತ್ರಿ ಈ ಎಲ್ಲ ಅಯ್ಯಪ್ಪ ಮಾಲಾಧಾರಿಗಳು ಪೂಜೆ ಮುಗಿಸಿಕೊಂಡು ಮಲಗಿದ್ದರು. ಆದ್ರೆ, ರಾತ್ರಿ 1:30ರ ಸಮಯಕ್ಕೆ ಮಲಗಿರುವಾಗ ಮಾಲಾಧಾರಿಗಳಲ್ಲಿ ಯಾರದ್ದೋ ಕಾಲು ಸಿಲಿಂಡರ್​ಗೆ ಟಚ್ ಆಗಿದೆ. ಇದರಿಂದ ಸಿಲಿಂಡರ್ ಸೋರಿಕೆಯಾಗಿದೆ. ದೇವರ ಮುಂದೆ ಇದ್ದ ಜ್ಯೋತಿ ಇದ್ದಿದ್ದರಿಂದ ತಕ್ಷಣ ಭಾರೀ ಪ್ರಮಾಣದಲ್ಲಿ ಬೆಂಕಿ ಆವರಿಸಿ 9 ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇದರಲ್ಲಿ ಈಗ ಒಬ್ಬರು ಮಾತ್ರ ಬದುಕುಳಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment