ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಘಟನೆ​; ಜೀವ ಬಿಟ್ಟ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ, 5ಕ್ಕೆ ಏರಿಕೆ

author-image
Bheemappa
Updated On
ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಘಟನೆ​; ಜೀವ ಬಿಟ್ಟ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ, 5ಕ್ಕೆ ಏರಿಕೆ
Advertisment
  • ಉಳಿದ ನಾಲ್ವರಿಗೆ ಹುಬ್ಬಳ್ಳಿ ಕಿಮ್ಸ್​ನಲ್ಲಿ ಚಿಕಿತ್ಸೆ ಮುಂದುವರಿಕೆ
  • ಘಟನೆಯಲ್ಲಿ ಒಟ್ಟು ಐವರು ಜೀವಕಳೆದುಕೊಂಡಂತೆ ಆಗಿದೆ
  • ಚಿಕಿತ್ಸೆ ಫಲಿಸದೆ ಕಣ್ಮುಚ್ಚಿದ ಅಯ್ಯಪ್ಪ ಮಾಲಾಧಾರಿ ಶಂಕರ್

ಬೆಳಗಾವಿ: ಹುಬ್ಬಳ್ಳಿಯ ಸಾಯಿನಗರದಲ್ಲಿ ಸಿಲಿಂಡರ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಜೀವ ಕಳೆದುಕೊಂಡವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಇಂದು ಬೆಳಗಿನ ಜಾವ ಕಿಮ್ಸ್ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ್ದಾರೆ.

ಶಂಕರ್ ಉರಬಿ (29) ಇಂದು ಬೆಳಗಿನ ಜಾವ ಪ್ರಾಣ ಬಿಟ್ಟಿದ್ದಾರೆ. ಹುಬ್ಬಳ್ಳಿಯ ಸಾಯಿನಗರದ ಅಚ್ಚವ್ವಳ ಕಾಲೋನಿಯಲ್ಲಿ ಡಿಸೆಂಬರ್ 22 ರಂದು ಅಂದರೆ ಕಳೆದ ಭಾನುವಾರ ರಾತ್ರಿ ಸಿಲಿಂಡರ್ ಸ್ಫೋಟವಾಗಿ 9 ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಇದರಲ್ಲಿ ಇಂದು ಬೆಳಗಿನ ಜಾವ ಕಣ್ಮುಚ್ಚಿರುವ ಶಂಕರ್ ಸೇರಿ ಐವರು ಇನ್ನಿಲ್ಲವಾಗಿದ್ದಾರೆ. ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20) ಕಣ್ಮುಚ್ಚಿದ್ದಾರೆ. ಉಳಿದ 4 ಮಾಲಾಧಾರಿಗಳಿಗೆ ಕಿಮ್ಸ್​​ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಇದನ್ನೂ ಓದಿ:BBK11; ಗಿಫ್ಟ್​ ಕೊಟ್ಟು ‘ತ್ರಿವಿಕ್ರಮ್​ ವೇರಿ ಸ್ವೀಟ್’ ಎಂದ ಭವ್ಯ.. ಕಿಚ್ಚನ ಮಾತಿಗೆ ನಾಚಿ ನೀರಾದ ಬ್ಯೂಟಿ

publive-image

ಉಣಕಲ್​​ನಲ್ಲಿ ದೊಡ್ಡಮ್ಮ ಮಂಜುಳಾ ಜೊತೆ ವಾಸವಿದ್ದ​ ಶಂಕರ್, ಕಿಮ್ಸ್​ ಆಸ್ಪತ್ರೆಯಲ್ಲಿ 13 ವರ್ಷಗಳಿಂದ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಚಿಕ್ಕರಿದ್ದಾಗ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು ದೊಡ್ಡಮ್ಮನ ಆಸರೆಯಲ್ಲಿ ಬೆಳೆದಿದ್ದನು. ಮಕ್ಕಳಿಗಿಂತ ಶಂಕರ್​ನನ್ನು ಹೆಚ್ಚು ಚೆನ್ನಾಗಿ ದೊಡ್ಡಮ್ಮ ನೋಡಿಕೊಂಡಿದ್ದರು. ಮನೆಗೂ ಆಸರೆಯಾಗಿದ್ದನು. ಆದರೆ ಇನ್ನು ಮದುವೆ ಆಗಿರಲಿಲ್ಲ ಎಂದು ದೊಡ್ಡಮ್ಮ ಅಳಲು ತೋಡಿಕೊಂಡಿದ್ದಾರೆ.

ಇದು ಅಲ್ಲದೇ ಇದೇ ಮೊದಲ ಬಾರಿಗೆ ಶಂಕರ್ ಅಯ್ಯಪ್ಪನ ವೃತ ಮಾಡುವುದಕ್ಕಾಗಿ ಮಾಲೆ ಹಾಕಿದ್ದರು. ಆದರೆ ಸಿಲಿಂಡರ್ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ 7 ದಿನಗಳಿಂದ ಕೆಎಂಸಿಆಎರ್​ಐನ ಐಸಿಯುನಲ್ಲಿ ಇಡಲಾಗಿತ್ತು. ಆದರೆ ಇವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ನಸುಕಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯಲ್ಲಿ ದೊಡ್ಡಮ್ಮ ಹಾಗೂ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment