RCB ಕ್ಯಾಪ್ಟನ್ಸಿ ಬಗ್ಗೆ ಬಿಗ್​ ಅಪ್ಡೇಟ್​​; ನಾಯಕತ್ವಕ್ಕೆ ಈ ಮೂವರ ಮಧ್ಯೆ ಭಾರೀ ಪೈಪೋಟಿ

author-image
Ganesh Nachikethu
Updated On
IPL ಬ್ರ್ಯಾಂಡ್ ವ್ಯಾಲ್ಯೂ ಬರೋಬ್ಬರಿ 1 ಲಕ್ಷ ಕೋಟಿ; ಇದರಲ್ಲಿ ಆರ್​​​ಸಿಬಿ ತಂಡದ ಪಾಲು ಎಷ್ಟು?
Advertisment
  • 2025ರ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡ ಕಟ್ಟಿದ ಆರ್​ಸಿಬಿ
  • ಆರ್​ಸಿಬಿ ಮುಂದಿನ ಕ್ಯಾಪ್ಟನ್​​? ಯಾರು ಅನ್ನೋ ಚರ್ಚೆ ಶುರು
  • ನಾಯಕತ್ವದ ಪಟ್ಟಕ್ಕೇರಲು ತಂಡದಲ್ಲಿ ಭಾರೀ ಪೈಪೋಟಿ ಇದೆ!

ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ಬಲಿಷ್ಠ ತಂಡವನ್ನು ಕಟ್ಟಿದೆ. ಮುಂದಿನ ಸೀಸನ್​ಗೆ ಈಗಾಗಲೇ ತಯಾರಿ ಆರಂಭಿಸಿರುವ ಆರ್​ಸಿಬಿ ಟೀಮ್​ ಮುಂದಿನ ಕ್ಯಾಪ್ಟನ್​​? ಯಾರು ಅನ್ನೋ ಚರ್ಚೆ ಜೋರಾಗಿದೆ. ನಾಯಕತ್ವದ ಪಟ್ಟಕ್ಕೇರಲು ತಂಡದಲ್ಲಿ ಭಾರೀ ಪೈಪೋಟಿ ಇದೆ. ಕ್ಯಾಪ್ಟನ್ಸಿ ರೇಸ್​ನಲ್ಲಿ ಯಾರಿದ್ದಾರೆ? ಅನ್ನೋ ಕುತೂಹಲ ಇದೆ.

ವಿರಾಟ್​ ಕೊಹ್ಲಿ

ಆರ್​ಸಿಬಿ ತಂಡದ ಮೊದಲ ಆಯ್ಕೆ ವಿರಾಟ್​ ಕೊಹ್ಲಿ​​. ಇದಕ್ಕೆ ಕಾರಣ ಇವರು ಆರ್​ಸಿಬಿಯ ಯಶಸ್ವಿ ನಾಯಕ. ಇಷ್ಟು ಮಾತ್ರವಲ್ಲ ಡೇರ್ ಡೆವಿಲ್​​ ಕ್ಯಾಪ್ಟನ್ಸಿ ಗುಣವೂ ಇವರಿಗಿದೆ. ಲೀಡರ್​ಶಿಪ್ ಕ್ವಾಲಿಟಿ ಹೊಂದಿರೋ ಕೊಹ್ಲಿ ಎಲ್ಲರಿಗೂ ರೋಲ್ ಮಾಡೆಲ್. ಹೀಗಾಗಿ ಮತ್ತೆ ವಿರಾಟ್​ ನಾಯಕತ್ವದ ಪಟ್ಟಕ್ಕೇರಿದ್ರೆ, ಪ್ರತಿ ಆಟಗಾರ ಕಪ್ ಗೆಲ್ಲಬೇಕೆಂಬ ಎಫರ್ಟ್ ಹಾಕೋದ್ರಲ್ಲಿ ಡೌಟೇ ಇಲ್ಲ.

ರಜತ್ ಪಾಟಿದಾರ್

ರಜತ್ ಪಾಟಿದಾರ್, ಆರ್​ಸಿಬಿಯ ನ್ಯೂ ಲೀಡರ್ ಆಗೋ ಚಾನ್ಸ್​ ದಟ್ಟವಾಗಿದೆ. ಆರ್​ಸಿಬಿ ಪರ ಪ್ರಾಮೀಸಿಂಗ್ ಪರ್ಫಾಮೆನ್ಸ್​ ನೀಡಿರುವ ರಜತ್, ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ನಾಯಕನಾಗಿ ಗಮನ ಸೆಳೆದಿದ್ದಾರೆ. ತಂಡವನ್ನು ಫೈನಲ್​ಗೆ ಕೊಂಡೊಯ್ಯುದಿರುವ ಪಾಟಿದಾರ್, ಅದ್ಬುತ ನಾಯಕತ್ವದ ಗುಣಗಳನ್ನು ಹೊರಹಾಕಿದ್ದಾರೆ. ಲಾಂಗ್ ಟರ್ಮ್ ಲೀಡರ್​ಶಿಪ್​ಗಾಗಿ ರಜತ್ ಪಾಟಿದಾರ್ ಬೆಸ್ಟ್​ ಚಾಯ್ಸ್ ಅನ್ನೋದ್ರಲ್ಲಿ ನೋ ಡೌಟ್.

ಭುವನೇಶ್ವರ್ ಕುಮಾರ್

ಸ್ವಿಂಗ್ ಮಾಸ್ಟರ್​ ಭುವನೇಶ್ವರ್ ಕುಮಾರ್. ಇವರು ಕೂಲ್ ಆ್ಯಂಡ್ ಕಾಮ್ ಕ್ಯಾಪ್ಟನ್ ಆಗೋದ್ರಲ್ಲಿ ಡೌಟೇ ಇಲ್ಲ. ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅನುಭವ ಹೊಂದಿರುವ ಈತ, ಟಿ20 ಫಾರ್ಮೆಟ್​ಗೆ ಹೇಳಿ ಮಾಡಿಸಿರುವ ಬೌಲರ್. ಎದುರಾಳಿ ಬೌಟರ್​ಗಳನ್ನು ಅದ್ಭುತವಾಗಿ ರೀಡ್ ಮಾಡಬಲ್ಲರು.

ಸದ್ಯ ಆರ್​​ಸಿಬಿ ಕ್ಯಾಪ್ಟನ್ಸಿ ರೇಸ್​ನಲ್ಲಿ ಈ ಮೂವರ ಹೆಸರು ಕೇಳಿ ಬಂದಿದೆ. ವಿರಾಟ್​ ಕೊಹ್ಲಿ ಕ್ಯಾಪ್ಟನ್ಸಿ ಮಾಡಲು ಹಿಂದೇಟು ಹಾಕಿದ್ರೆ ಮ್ಯಾನೇಜ್ಮೆಂಟ್​​ ಒಲವು ರಜತ್ ಪಾಟಿದಾರ್​ ಮೇಲಿದೆ. ಹಾಗಾಗಿ ಮುಂದಿನ ಸೀಸನ್​ಗೆ ಕ್ಯಾಪ್ಟನ್​ ಯಾರು ಆಗಬಹುದು? ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಲೇ ಇದೆ.

ಇದನ್ನೂ ಓದಿ:ಟೀಮ್​ ಇಂಡಿಯಾಗೆ ಬಿಗ್​ ಶಾಕ್; R ಅಶ್ವಿನ್​ ಬೆನ್ನಲ್ಲೇ ದಿಢೀರ್​​ ನಿವೃತ್ತಿ ಘೋಷಿಸಿದ ಸ್ಟಾರ್​ ಕ್ರಿಕೆಟರ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment