BSNL: 229 ರೂಪಾಯಿ ರೀಚಾರ್ಜ್​ ಪ್ಲಾನ್​ಗೆ ಭಾರೀ ಡಿಮ್ಯಾಂಡ್​​! ದಿನಕ್ಕೆ 2GB ಮಾತ್ರವಲ್ಲ, ಹಲವಿವೆ ಬೆನಿಫಿಟ್ಸ್!​​

author-image
Ganesh Nachikethu
Updated On
ಗ್ರಾಹಕರಿಗೆ ಗುಡ್​ನ್ಯೂಸ್​; ಕಡಿಮೆ ದರದಲ್ಲಿ ಹಲವು ಬೆನಿಫಿಟ್ಸ್​​; ಏನಿದು BSNL ಹೊಸ ಪ್ಲಾನ್​​?
Advertisment
  • ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಬಿಸಿ
  • ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ನತ್ತ ಗ್ರಾಹಕರು
  • 229 ರೂಪಾಯಿ ರೀಚಾರ್ಜ್​ ಪ್ಲಾನ್​ನಲ್ಲಿದೆ ಹಲವು ಬೆನಿಫಿಟ್ಸ್​

ಇತ್ತೀಚೆಗಷ್ಟೇ ರಿಲಯನ್ಸ್​ ಜಿಯೋ ಸೇರಿ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್​ ಬೆಲೆ ಏರಿಸಿವೆ. ಬೆಲೆ ಏರಿಕೆ ಬಿಸಿಯಿಂದ ಬಳಕೆದಾರರು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ನತ್ತ ಮುಖ ಮಾಡಿದ್ದಾರೆ. ಮಾತ್ರವಲ್ಲದೆ ಉತ್ತಮ ರೀಚಾರ್ಜ್​ ಆಯ್ಕೆ ಮಾಡುವ ಮೂಲಕ ರೀಚಾರ್ಜ್​ ಮಾಡುತ್ತಿದ್ದಾರೆ.

ಟೆಲಿಕಾಂ ಖಾಸಗಿ ಕಂಪನಿಗಳ ಬೆಲೆ ಏರಿಕೆಯಿಂದ ಬಿಎಸ್​​ಎನ್​ಎಲ್​ 229 ರೂಪಾಯಿಯ ಪ್ರಿಪೇಯ್ಡ್​ ರೀಚಾರ್ಜ್​ ಪ್ಲಾನ್ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಇದರ ಮೂಲಕ 30 ದಿನಗಳವರೆಗೆ ಬಳಕೆದಾರರು ಯಾವುದೇ ನೆಟ್​ವರ್ಕ್​ಗೆ ಉಚಿತ ಕರೆ ಮಾಡಬಹುದಾಗಿದೆ.

ಏನಿದು ಪ್ಲಾನ್​?

ಬಿಎಸ್​​ಎನ್​ಎಲ್​ 229 ರೀಚಾರ್ಜ್​ ಪ್ಲಾನ್​ ಮೂಲಕ ಅನಿಯಮಿತ ಮತ್ತು ಸ್ಥಳೀಯ ಕರೆಗಳನ್ನು ಉಚಿತವಾಗಿ ನೀಡುತ್ತದೆ. ಜೊತೆಗೆ ಡೇಟಾ ಪ್ರಯೋಜನ ಕೂಡ ಇದರಲ್ಲಿದೆ. ಈ ಯೋಜನೆಯನ್ನು ಅಳವಡಿಸಿಕೊಂಡವರು 60ಜಿಬಿ ಡೇಟಾ ಪಡೆಯುತ್ತಾರೆ. ಅಂದರೆ ಪ್ರತಿದಿನ 2ಜಿಬಿ ಡೇಟಾ ಒದಗಿಸುತ್ತದೆ.

ಇದಲ್ಲದೆ, ಜಿಯೋ, ಏರ್​ಲೆಟ್​​ ವೊಡಾಫೊನ್​ನಂತೆಯೇ ಕಾಂಪ್ಲಿಮೆಂಟರಿ ಎಸ್​​ಎಮ್​ಎಸ್​ ಕೂಡ ಒಳಗೊಂಡಿದೆ. ಪ್ರತಿದಿನ 100 ಎಸ್​ಎಮ್​ಎಸ್​ ಉಚಿತವಾಗಿ ಸಿಗುತ್ತದೆ. ಹಾಗಾಗಿ ಜನ ಈಗ ಬಿಎಸ್​ಎನ್​ಎಲ್​​ ಮೊರೆ ಹೋಗಿದ್ದು, ಇತರೆ ಟೆಲಿಕಾಂ ಕಂಪನಿಗಳಿಗೆ ಭಾರೀ ಹಿನ್ನಡೆ ಆಗಿದೆ.

ಇದನ್ನೂ ಓದಿ:ಸುನಿತಾ ಒಬ್ಬರೇ ಅಲ್ಲ; ವರ್ಷಗಟ್ಟಲೇ ಬಾಹ್ಯಾಕಾಶದಲ್ಲೇ ಉಳಿದು ದಾಖಲೆ ಬರೆದ ಗಗನಯಾನಿಗಳು ಇವರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment