/newsfirstlive-kannada/media/post_attachments/wp-content/uploads/2024/11/RCB_News1.jpg)
ಇದೇ ತಿಂಗಳು 24 ಮತ್ತು 25 ರಂದು ಸೌದಿಯಲ್ಲಿ ನಡೆಯಲಿರೋ ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್ ಮೆಗಾ ಹರಾಜು ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಸಲ ಹೇಗಾದ್ರೂ ಮಾಡಿ ಕಪ್​​ ಗೆಲ್ಲಲೇಬೇಕು ಎಂದು ಮುಂದಾಗಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬಲಿಷ್ಠ ತಂಡ ಕಟ್ಟಲಿದೆ. ಹಾಗಾಗಿ ಮೆಗಾ ಆಕ್ಷನ್​​ನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲಿದೆ.
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮೂವರು ಆಟಗಾರರನ್ನು ರೀಟೈನ್​ ಮಾಡಿಕೊಂಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.
ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಉಳಿದ ಎಲ್ಲರನ್ನು ರಿಲೀಸ್​ ಮಾಡಿದ್ದು, ಈ ಪೈಕಿ ಮೂವರ ಆಟಗಾರರ ಮೇಲೆ ಎಲ್ಲಾ ತಂಡಗಳು ಹದ್ದಿನ ಕಣ್ಣಿಟ್ಟಿವೆ.
ಹರಾಜಿಗೆ ಮೆಗಾ ಪ್ಲ್ಯಾನ್​​
ಸೌದಿಯಲ್ಲಿ ಎರಡು ದಿನಗಳ ಕಾಲ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಸ್ಟಾರ್​ ಆಟಗಾರರಿಗೆ ಎಲ್ಲಾ ತಂಡಗಳು ಮಣೆ ಹಾಕಲಿವೆ. 1500ಕ್ಕೂ ಹೆಚ್ಚು ಆಟಗಾರರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆರ್​​ಸಿಬಿ ಕೈ ಬಿಟ್ಟ ಈ ಮೂವರು ಆಟಗಾರರ ಮೇಲೆ ಹಣದ ಹೊಳೆಯನ್ನೇ ಹರಿಸಬಹುದು. ಸಿರಾಜ್​​, ಮ್ಯಾಕ್ಸ್​ವೆಲ್​, ವಿಲ್​ ಜಾಕ್ಸ್​​ 10 ಕೋಟಿ ಸೇಲಾಗಬಹುದು.
ಇಬ್ಬರು ಫಾರೀನ್​ ಪ್ಲೇಯರ್ಸ್​ ಮೇಲೆ ಕಣ್ಣು
ಆರ್‌ಸಿಬಿ ರಿಲೀಸ್ ಮಾಡಿದ ಆಟಗಾರರ ಪೈಕಿ ಒಬ್ಬರು ಸ್ಟಾರ್​ ಆಲ್​ರೌಂಡರ್ ಗ್ಲೆನ್​ ಮ್ಯಾಕ್ಸ್​ವೆಲ್​​. ವಿಶ್ವ ಶ್ರೇಷ್ಠ ಆಲ್‌ರೌಂಡರ್ ಆಗಿರೋ ಈ ಪ್ಲೇಯರ್​ಗೆ ಬಾಜಿ ಕಟ್ಟಲು ಮಾಲೀಕರು ಮುಂದಾಗಿದ್ದಾರೆ. ಇವರು ಯಾವುದೇ ತಂಡಕ್ಕಾದ್ರೂ ಮಿಡಲ್​ ಆರ್ಡರ್​ ಬ್ಯಾಟಿಂಗ್​​ಗೆ ನೆರವಾಗಬಲ್ಲರು. ಇಷ್ಟೇ ಬೌಲಿಂಗ್​ ಮತ್ತು ಫೀಲ್ಡಿಂಗ್​ಗೂ ಹೆಸರುವಾಸಿ.
ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್​ ವಿಲ್ ಜಾಕ್ಸ್. ಇವರನ್ನು ಕೂಡ ಆರ್‌ಸಿಬಿ ರಿಲೀಸ್ ಮಾಡಿದೆ. ಈ ಪ್ಲೇಯರ್ ಟಾಪ್ ಆರ್ಡರ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. 25 ವರ್ಷದ ಈ ಯುವ ಆಟಗಾರ ಬೆಂಗಳೂರು ತಂಡದ ಆಡಿದ 8 ಪಂದ್ಯಗಳಲ್ಲಿ 230 ರನ್ ಸಿಡಿಸಿದ್ರು. ಇದರಲ್ಲಿ 1 ಶತಕ ಹಾಗೂ 1 ಅರ್ಧಶತಕ ಸೇರಿದೆ. ಹಾಗಾಗಿ ವಿಲ್​ ಜಾಕ್ಸ್​ ಅವರನ್ನು ಬಿಡ್​ ಮಾಡಬಹುದು.
ಮೊಹಮ್ಮದ್ ಸಿರಾಜ್
ಟೀಮ್ ಇಂಡಿಯಾದ ಸ್ಟಾರ್​ ಬೌಲರ್​​ ಮೊಹಮ್ಮದ್ ಸಿರಾಜ್. ಇವರು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇದುವರೆಗೂ ಆಡಿರೋ 93 ಪಂದ್ಯಗಳಲ್ಲಿ 93 ವಿಕೆಟ್ ಪಡೆದಿದ್ದಾರೆ. ಇವರ ಏಕನಾಮಿ ಸಹ ಸ್ಥಿರವಾಗಿದ್ದು ಮಾಲೀಕರು ಇವರತ್ತ ಸೆಳೆಯುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us