/newsfirstlive-kannada/media/post_attachments/wp-content/uploads/2024/08/Tomas-Machac-2.jpg)
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಆಗಸ್ಟ್ 2ರಂದು ನಡೆದ ಮಿಶ್ರ ಡಬಲ್ಸ್‌ನ ಟೆನಿಸ್ ಫೈನಲ್‌ನಲ್ಲಿ ಕಟೆರಿನಾ ಸಿನಿಯಾಕೋವಾ ಮತ್ತು ಟೊಮಾಸ್ ಮಚಾಕ್ ಸಂಚಲನವನ್ನು ಸೃಷ್ಟಿಸಿದ್ದಾರೆ. ಚೀನಾದ ವಾಂಗ್ ಕ್ಸಿನ್ಯು ಮತ್ತು ಜಾಂಗ್ ಝಿಜೆನ್ರನ್ನು ಸೋಲಿಸಿದ ಬಳಿಕ ಚಿನ್ನ ಗೆದ್ದ ಖುಷಿಯಲ್ಲಿದ್ದ ಈ ಜೋಡಿ ಮೈದಾನದಲ್ಲೇ ಕಿಸ್ ಮಾಡಿದ್ದಾರೆ.
ಇದನ್ನೂ ಓದಿ: ಮೈ ಮರೆತು ಬಾಯ್ ಫ್ರೆಂಡ್ ಜತೆ ನೈಟ್ ಔಟ್ಗೆ ಹೋದ ಬ್ರೆಜಿಲ್ ಆಟಗಾರ್ತಿ; ಒಲಿಂಪಿಕ್ಸ್ನಿಂದಲೇ ಔಟ್..!
ಪಂದ್ಯ ಗೆದ್ದ ನಂತರ ಈ ಇಬ್ಬರೂ ಆಟಗಾರರು ಪರಸ್ಪರ ಮುತ್ತಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಏಕೆಂದರೆ ಸಿನಿಯಾಕೋವಾ ಮತ್ತು ತೋಮಸ್ ಮಚಕ್ 2021ರಿಂದ ಡೇಟಿಂಗ್ ಮಾಡುತ್ತಿದ್ದರಂತೆ. ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗುವ ಕೆಲವು ದಿನಗಳ ಹಿಂದೆ ದಂಪತಿಗಳಿಬ್ಬರೂ ಬೇರ್ಪಟ್ಟಿದ್ದರಂತೆ. ಆದರೆ ಈ ಸ್ಟಾರ್ ಜೋಡಿಯೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
View this post on Instagram
Teammate chemistry ✅
Olympic Gold medals ✅
Congrats to Tomas Machac and Katerina Siniakova for winning the mixed doubles championship at the Paris Olympics! pic.twitter.com/oaf66r24e0
— Cincinnati Open (@CincyTennis) August 2, 2024
ಇದಾದ ಬೆನ್ನಲ್ಲೇ ಮಿಶ್ರ ಡಬಲ್ಸ್‌ನ ಫೈನಲ್‌ನಲ್ಲಿ ಗೆದ್ದ ಬಳಿಕ ಈ ಜೋಡಿ ಒಬ್ಬರಿಗೊಬ್ಬರು ಚುಂಬಿಸಿದ್ದಾರೆ. ಬೇರ್ಪಟ್ಟ ನಂತರ ಇಬ್ಬರೂ ಪಂದ್ಯದ ನಂತರ ಪರಸ್ಪರ ಚುಂಬಿಸಿದಾಗ ಎಲ್ಲರೂ ಶಾಕ್ ಆಗಿದ್ದಾರೆ. ಹೀಗೆ ಕಿಸ್ ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು, ಈ ಇಬ್ಬರ ಬಗ್ಗೆ ಒಂದು ಸಿನಿಮಾ ಮಾಡಿ ಅಂತ ಬೇಡಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ